ಬುಧವಾರ, ಏಪ್ರಿಲ್ 21, 2021
33 °C

ಕ್ಯಾಡ್‌ಬರಿ ಅವ್ಯವಹಾರ ಕುರಿತು ಎಸ್‌ಇಸಿ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್, (ಪಿಟಿಐ): ಭಾರತದಲ್ಲಿನ ಕ್ಯಾಡ್‌ಬರಿ ಉತ್ಪಾದನಾ ಘಟಕಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಭದ್ರತಾ ಮತ್ತು ವಿನಿಮಯ ಆಯೋಗ (ಎಸ್‌ಇಸಿ)ದಿಂದ ತನಿಖೆಯನ್ನು ಎದುರಿಸುತ್ತಿರುವುದಾಗಿ ಅಮೆರಿಕದ ಪ್ರಮುಖ ಆಹಾರ ಉತ್ಪಾದನಾ ಸಂಸ್ಥೆ  ಕ್ರಾಫ್ಟ್ ಫುಡ್ಸ್ ತಿಳಿಸಿದೆ.ಈ ಸಂಬಂಧ ವಿದೇಶಿ ಅವ್ಯವಹಾರ ತನಿಖಾ ಕಾಯಿದೆ ಅಡಿಯಲ್ಲಿ ತಮಗೆ ನೋಟಿಸ್ ನೀಡಲಾಗಿದೆ ಎಂದು ಕಂಪೆನಿ ತಿಳಿಸಿದೆ. ಆದರೆ ಈ ಕುರಿತು ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದ ಕಂಪನಿ ತನಿಖೆ ಕುರಿತು ಅಮೆರಿಕ ಸರ್ಕಾರದೊಂದಿಗೆ ಸಹಕರಿಸುತ್ತಿರುವುದಾಗಿ  ತಿಳಿಸಿದೆ.ಭಾರತ ಸೇರಿದಂತೆ ಜಾಗತಿಕವಾಗಿ ಕ್ಯಾಡ್‌ಬರಿಯ ಉತ್ಪಾದನಾ ಘಟಕಗಳನ್ನು ಕ್ರಾಫ್ಟ್ ಫುಡ್ಸ್ ಕಳೆದ ವರ್ಷ 196 ಕೋಟಿ ಅಮೆರಿಕನ್ ಡಾಲರ್‌ಗೆ ಖರೀದಿಸಿತ್ತು. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಕ್ಯಾಡ್‌ಬರಿಯ ಐದು ಉತ್ಪಾದನಾ ಘಟಕಗಳಿವೆ. ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲು ಕ್ಯಾಡ್‌ಬರಿ ಇಂಡಿಯಾ ವಕ್ತಾರರು ನಿರಾಕರಿಸಿದ್ದಾರೆ.ಕ್ಯಾಡ್‌ಬರಿಯ ಉತ್ಪಾದನಾ ಘಟಕಗಳನ್ನು ವಶಕ್ಕೆ ತೆಗೆದುಕೊಂಡ ಬಳಿಕ ಅಮೆರಿಕದ ನೀತಿ ಹಾಗೂ ಕ್ರಾಫ್ಟ್ ಕಂಪನಿಯ ನೀತಿಗನುಗುಣವಾಗಿ ಅವುಗಳು  ಕಾರ್ಯನಿರ್ವಹಿಸುತ್ತಿವೆ ಎಂದು ಸಂಸ್ಥೆ ತಿಳಿಸಿದೆ.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.