ಬುಧವಾರ, ಜನವರಿ 22, 2020
28 °C

ಕ್ರಿಕೆಟ್: ದಕ್ಷಿಣ ಆಫ್ರಿಕಾ ಮಡಿಲಿಗೆ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್ (ಎಎಫ್‌ಪಿ): ಕೊನೆಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೋಲು ಕಂಡರೂ, ಆತಿಥೇಯ ದಕ್ಷಿಣ ಆಫ್ರಿಕಾ ತಂಡದವರು ಇಲ್ಲಿ ಕೊನೆಗೊಂಡ ಶ್ರೀಲಂಕಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 3-2ರಲ್ಲಿ ಸರಣಿ ಗೆದ್ದುಕೊಂಡರು.ಭಾನುವಾರ ನಡೆದ ಐದನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಇನ್ನೂ ಒಂದು ಎಸೆತ ಬಾಕಿ ಇರುವಾಗ ಎರಡು ವಿಕೆಟ್‌ಗಳ ರೋಚಕ ಗೆಲುವು ಪಡೆಯಿತು.ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 312 (ಗ್ರೇಮ್ ಸ್ಮಿತ್ 125, ಎ.ಬಿ.    ಡಿವಿಲಿಯರ್ಸ್ ಔಟಾಗದೇ 125; ಲಸಿತ್ ಮಾಲಿಂಗ 79ಕ್ಕೆ2). ಶ್ರೀಲಂಕಾ 49.5 ಓವರ್‌ಗಳಲ್ಲಿ 8ವಿಕೆಟ್‌ಗೆ 314. (ತಿಲಕರತ್ನೆ ದಿಲ್ಯಾನ್ 41, ಕುಮಾರ ಸಂಗಕ್ಕಾರ 102; ಜೆ.ಪಿ. ಡುಮಿನಿ 44ಕ್ಕೆ2). ಫಲಿತಾಂಶ: ಶ್ರೀಲಂಕಾಕ್ಕೆ 2 ವಿಕೆಟ್ ಜಯ. ದಕ್ಷಿಣ ಆಫ್ರಿಕಾಕ್ಕೆ 3-2ರಲ್ಲಿ ಸರಣಿ ಗೆಲುವು. ಸಂಗಕ್ಕಾರ (ಪಂದ್ಯ ಶ್ರೇಷ್ಠ), ಡಿವಿಲಿಯರ್ಸ್ (ಸರಣಿ ಶ್ರೇಷ್ಠ).

ಪ್ರತಿಕ್ರಿಯಿಸಿ (+)