ಗುರುವಾರ , ಜೂನ್ 24, 2021
23 °C

ಕ್ರಿಮಿಯಾ ವಿಲೀನಕ್ಕೆ ಚಾಲನೆ ನೀಡಿದ ಪುಟಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಎಎಫ್‌ಪಿ): ಜನಮತಗಣನೆಯಲ್ಲಿ ಸ್ವಾಯತ್ತ ರಾಷ್ಟ್ರವಾಗಿ ಹೊರಹೊಮ್ಮಿರುವ ಕ್ರಿಮಿಯಾವನ್ನು ತಮ್ಮ ದೇಶದೊಂದಿಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರು ಮಂಗಳವಾರ ಚಾಲನೆ ನೀಡಿದರು.



ಕ್ರಿಮಿಯಾ ರಷ್ಯಾದೊಂದಿಗೆ ಸೇರ್ಪಡೆಗೊಳ್ಳುವ ಮೂಲಕ ಎರಡನೇ ಮಹಾಯುದ್ಧದ ನಂತರ ಯುರೋಪ್‌ನ ಗಡಿಭಾಗವು ಮಹತ್ವದ ಮರು ವಿನ್ಯಾಸವನ್ನು ಪಡೆಯಲಿದೆ.



ಕ್ರಿಮಿಯಾ ಪಾರ್ಲಿಮೆಂಟ್‌ಗೆ ರಷ್ಯಾದೊಂದಿಗೆ ಸೇರುವಂತೆ ಅಧಿಕೃತ ಮನವಿ ಕಳುಹಿಸಿರುವ ಪುಟಿನ್ ಅವರು ದೇಶದ ಭಾಗವಾಗಿ ಮುಂದುವರಿಯಲಿರುವ ಕ್ರಿಮಿಯಾ ತನ್ನೆಲ್ಲ ಅಧಿಕಾರದ ಶಾಖೆಗಳನ್ನು ಒಪ್ಪಂದ ಮೂಲಕ ಅಧಿನಗೊಳಿಸುವಂತೆ  ಆದೇಶಿಸಿದ್ದಾರೆ.

ಸೋಮವಾರ ಪ್ರಕಟಗೊಂಡ ಜನಮತಗಣನೆ ಫಲಿತಾಂಶದ ನಂತರ ಕ್ರಿಮಿಯಾ ಶೀಘ್ರದಲ್ಲಿಯೇ ರಷ್ಯಾದೊಂದಿಗೆ ಸೇರಿಕೊಳ್ಳುವುದಾಗಿ ತಿಳಿಸಿತ್ತು.



ಇದರ ಬೆನ್ನಲ್ಲೇ ಪಾರ್ಲಿಮೆಂಟಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಪುಟಿನ್ ಅವರು ಕ್ರಿಮಿಯಾ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.