ಕೊಳ್ಳೇಗಾಲ: ಮಹಿಳೆ ಪ್ರಜ್ಞೆ ತಪ್ಪಿಸಿ ಚಿನ್ನದ ಸರ ಮತ್ತು ಬಳೆಗಳನ್ನು ಅಪಹರಿಸಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

ತಾಲ್ಲೂಕಿನ ಮಧುವನಹಳ್ಳಿ ವಾಸಿ ಶಿವನಂಜಮ್ಮ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಪಟ್ಟಣದ ಉಪ ವಿಭಾಗ ಆಸ್ಪತ್ರೆಗೆ ಬಂದ ಶಿವನಂಜಮ್ಮ ತಮ್ಮ ಮೊಮ್ಮಗನ ಆರೋಗ್ಯ ವಿಚಾರಿಸಿ ಗ್ರಾಮಕ್ಕೆ ತೆರಳಲು ರಿಕ್ಷ ನಿಲ್ದಾಣಕ್ಕೆ ಹೊರಟಿದ್ದರು. ದಾರಿಯಲ್ಲಿ ಅವರ ಜೊತೆ ಸೇರಿಕೊಂಡು ಮಹಿಳೆಯೊಬ್ಬಳು ಅವರ ಮೂಗಿಗೆ ಪ್ರಜ್ಞೆ ತಪ್ಪುವ ಔಷಧಿ ಸಿಡಿಸಿದಳು. ತಕ್ಷಣ ಶಿವನಂಜಮ್ಮ ಪ್ರಜ್ಞೆ ತಪ್ಪಿ ಬಿದ್ದರು. ಅವರ ಕೊರಳಲ್ಲಿದ್ದ 40 ಗ್ರಾಂ ಚಿನ್ನದ ಸರ ಹಾಗೂ ಚಿನ್ನದ ಬಳೆಗಳನ್ನು ಬಿಚ್ಚಿಕೊಳ್ಳಲು ಮುಂದಾದರು. ಎರಡು ಬಳೆಗಳನ್ನು ಕಳಚುತ್ತಿದ್ದಂತೆಯೇ ಶಿವನಂಜಮ್ಮಗೆ ಪ್ರಜ್ಞೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಮಹಿಳೆ ನಕಲಿ ಬಳೆಗಳನ್ನು ಶಿವನಂಜಮ್ಮ ಅವರ ಕೈಗೆ ನೀಡಿ ಪರಾರಿಯಾದಳು.
ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.