ಚುನಾವಣಾ ಪ್ರಣಾಳಿಕೆ

7

ಚುನಾವಣಾ ಪ್ರಣಾಳಿಕೆ

Published:
Updated:

ನವದೆಹಲಿ (ಪಿಟಿಐ):  ‘ಸಚಿವೆ ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಿದ ರೈಲ್ವೆ ಬಜೆಟ್ ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯುವ ಚುನಾವಣೆಯ ಪ್ರಣಾಳಿಕೆಯಂತಿದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.ಪಶ್ಚಿಮ ಬಂಗಾಳವನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿರುವ ರೈಲ್ವೆ ಬಜೆಟ್ ಚುನಾವಣಾ ಘೋಷಣೆಯಂತಿದೆ. ಸಚಿವೆ ಮಮತಾ ಅವರು ಇಡೀ ದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.‘ಕೆಲವು ಜನಪ್ರಿಯ ಘೋಷಣೆಗಳನ್ನು ಹೊರತುಪಡಿಸಿದರೆ ಬಜೆಟ್ನಲ್ಲಿ  ಅಂತಹದ್ದೇನೂ ವಿಶೇಷ ಇಲ್ಲ’ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ ತಿಳಿಸಿದರು.‘ವಸ್ತುಸ್ಥಿತಿಗಿಂತ ಮಹತ್ವಕಾಂಕ್ಷೆ ಹೆಚ್ಚಿರುವ ಈ ಬಜೆಟ್ ಯಾರಿಗೂ ಸಂತೋಷ ನೀಡಿಲ್ಲ ಎಂದು ಅವರು ಆಕ್ಷೇಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry