ಗುರುವಾರ , ಏಪ್ರಿಲ್ 22, 2021
30 °C

ಜಂಬೂಸವಾರಿ ಶಿಸ್ತುಬದ್ಧವಾಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರಿನ ದಸರಾ ಜಂಬೂ ಸವಾರಿ ಇತ್ತೀಚೆಗೆ ಶಿಸ್ತು ಬದ್ಧವಾಗಿ ನಡೆಯುತ್ತಿಲ್ಲ. ರಾಜರ ಕಾಲದಲ್ಲಿ ನಡೆಯುತ್ತಿದ್ದ ಶಿಸ್ತುಬದ್ಧ ಜಂಬೂಸವಾರಿಗೂ, ಇಂದಿನ ಶಿಸ್ತಿಲ್ಲದ ಜಂಬೂಸವಾರಿಗೂ ವ್ಯತ್ಯಾಸವಿದೆ. ರಾಜರ ಕಾಲದಲ್ಲಿ ಅರಮನೆಯಿಂದ ಬನ್ನಿ ಮಂಟಪದವರೆಗೂ ನಡೆಯುವ ಪಥಸಂಚಲನದಲ್ಲಿ ಸಮವಸ್ತ್ರಧಾರಿಗಳು ಮಾತ್ರ ಪಾಲ್ಗೊಳ್ಳುತ್ತಿದ್ದರು.ಆ ಪಾರಂಪರಿಕ ಪರಿಕರಗಳ ನೋಟ ಕಣ್ಣಿಗೆ ನೂತನ ಹಬ್ಬವನ್ನೇ ನೋಡುವಂತಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆಯುತ್ತಿರುವ ಜಂಬೂಸವಾರಿಯ ವೇಳೆ ಸಮವಸ್ತ್ರವಿಲ್ಲದ ಜನರು, ಛಾಯಾಗ್ರಾಹಕರು ಹಾಗೂ ರಾಜಕಾರಣಿಗಳು ಅಸಂಬದ್ಧವಾಗಿ ಪಥಸಂಚಲನದಲ್ಲಿ ಅಡ್ಡಾಡುವುದರಿಂದ ಜಂಬೂಸವಾರಿಯ ಆ ನೋಟವು ದೇವರ ರಥದ ಯಾತ್ರೆಯಂತೆ ಕಾಣುತ್ತದೆ.ಹಳ್ಳಿಯವರು ಈಗಲೂ ವಿಜಯದಶಮಿಯಂದು ನಡೆಯುವ ಜಂಬೂಸವಾರಿಯನ್ನು ಫೌಜ್ ಎಂದೆ ಕರೆಯುತ್ತಾರೆ. ಫೌಜ್ ಎಂದರೆ ಸೈನ್ಯ. ಸೈನ್ಯ ಶಿಸ್ತಿಗೆ ಹೆಸರುವಾಸಿ, ಹಾಗಾಗಿಯೆ ರಾಜರ ಕಾಲದಲ್ಲಿ ಜಂಬೂಸವಾರಿಯಂದು ಸಮವಸ್ತ್ರಧಾರಿಗಳು ಶಿಸ್ತುಬದ್ಧವಾಗಿ ಪಥಸಂಚಲನದಲ್ಲಿ  ಮಾತ್ರ ಪಾಲ್ಗೊಳ್ಳುತ್ತಿದ್ದರು.ಹಾಗಾಗಿ ಅಂದಿನ ಜಂಬೂಸವಾರಿ ವಿಶ್ವಖ್ಯಾತಿಯಾಗಲು ಕಾರಣ. ಆದ್ದರಿಂದ ಜಂಬೂಸವಾರಿ ಪಥಸಂಚಲನದಲ್ಲಿ ಸಮವಸ್ತ್ರಧಾರಿಗಳಿಗೆ ಮಾತ್ರ ಅವಕಾಶ ನೀಡುವ ಮೂಲಕ ಪಾರಂಪರಿಕ ಜಂಬೂಸವಾರಿಯ ನೋಟ ಮರುಕಳಿಸುವಂತೆ ಮಾಡಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.