ಮಂಗಳವಾರ, ಏಪ್ರಿಲ್ 13, 2021
32 °C

ಜೆಪಿಸಿ ಸಭೆಗೆ ಹಾಜರಾದ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ( ಐಎಎನ್ಎಸ್):  2ಜಿ ಹಂಚಿಕೆ ಹಗರಣದಲ್ಲಿ  ಸಾಕ್ಷಿಗಳಾಗಿ ಪ್ರಧಾನಿ ಮತ್ತು ಹಣಕಾಸು ಸಚಿವ ಅವರನ್ನು ಪರಿಗಣಿಸಬೇಕೆಂಬ ಪಟ್ಟನ್ನು ಸಡಿಲಿಸಿ ಗುರುವಾರ ನಡೆದ ಜಂಟಿ ಸಂಸದೀಯ ಸಮಿತಿ ಸಭೆಗೆ ಭಾರತಿಯ ಜನತಾ ಪಾರ್ಟಿ ಹಾಜರಾಗಿದೆ.ಬಿಜೆಪಿ ತಮ್ಮ ಬೇಡಿಕೆಯಂತೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನೋಳಗೊಂಡ ಸಾಕ್ಷಿಗಳ ಅಂತಿಮ ಪಟ್ಟಿ ಸಿದ್ದಗೊಳ್ಳುವವರೆಗೂ 2ಜಿ ತರಂಗಾಂತರ ಹಂಚಿಕೆಯ ಹಗರಣದ ಸಭೆಯಲ್ಲಿ ಹಾಜರಾಗುವುದಿಲ್ಲಾ ಎಂಬುದನ್ನು ಮರೆತು ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಹಾಜರಾಗಿದ್ದಾರೆ.ನಮ್ಮ ಸದಸ್ಯರು ಜೆಪಿಸಿ ಸಭೆಯಲ್ಲಿ ಹಾಜರಾಗಿದ್ದರು ಕೂಡ  ತಮ್ಮ ಬೇಡಿಕೆಯನ್ನು ಪುನರುಚ್ಚರಿಸುತ್ತೇವೆ ಎಂದು  ಬಿಜೆಪಿ ಮೂಲಗಳು ತಿಳಿಸಿವೆ .

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.