ನವದೆಹಲಿ(ಪಿಟಿಐ): ಮೂಲದಲ್ಲೇ ಕಡಿತ ಮಾಡಿದ ತೆರಿಗೆ(ಟಿಡಿಎಸ್) ಅಥವಾ ಮೂಲದಲ್ಲೇ ಸಂಗ್ರಹಿಸಿದ ತೆರಿಗೆಯನ್ನು(ಟಿಸಿಎಸ್) ನಿಗದಿತ ಅವಧಿಯೊಳಗೆ ಸರ್ಕಾರಕ್ಕೆ ಜಮಾ ಮಾಡದೇ ಇದ್ದರೆ ರೂ.200ರಿಂದ ರೂ.1 ಲಕ್ಷದವರೆಗೂ ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಅಧಿಕೃತ ತೆರಿಗೆ ಕಡಿತದಾರ ಸಂಸ್ಥೆಗಳಿಗೆ ಮಾಹಿತಿ ನೀಡಿರಿ ಮತ್ತು ಸಂಗ್ರಹವಾದ ತೆರಿಗೆ ಮೊತ್ತ ಸರ್ಕಾರದ ಖಜಾನೆಗೆ ಜಮಾ ಆಗುವಂತೆ ನೋಡಿಕೊಳ್ಳಿರಿ ಎಂದು ದೇಶದ ಎಲ್ಲೆಡೆಯ `ಟಿಡಿಎಸ್' ಕಚೇರಿಗಳಿಗೆ `ಕೇಂದ್ರ ನೇರ ತೆರಿಗೆ ಮಂಡಳಿ'(ಸಿಬಿಡಿಟಿ) ಬುಧವಾರ ನಿರ್ದೇಶನ ನೀಡಿದೆ.

ಅಧಿಕೃತವಾಗಿ `ಟಿಡಿಎಸ್' ಅಥವಾ `ಟಿಸಿಎಸ್' ಕ್ರಮ ಕೈಗೊಳ್ಳುವ ಸಂಸ್ಥೆಗಳು ಸಂಗ್ರಹಿಸಿದ ತೆರಿಗೆ ಮತ್ತು ಲೆಕ್ಕಪತ್ರ ವಿವರಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲೇಬೇಕು. ಇಲ್ಲವಾದರೆ ಖಾಸಗಿ ಅಥವಾ ಸರ್ಕಾರಿ ಸಂಸ್ಥೆಯೇ ಆಗಿರಲಿ ದಿನಕ್ಕೆ ರೂ.100ರ ಲೆಕ್ಕದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು `ಸಿಬಿಡಿಟಿ' ಸ್ಪಷ್ಟವಾಗಿ ಹೇಳಿದೆ.

ಕಳೆದ ಹಣಕಾಸು ವರ್ಷದ ಒಟ್ಟಾರೆ ನೇರ ತೆರಿಗೆ ಸಂಗ್ರಹ ಮೊತ್ತದಲ್ಲಿ ಶೇ 41ರಷ್ಟು `ಟಿಡಿಎಸ್' ಮೂಲದಿಂದಲೇ ಬಂದಿದೆ ಎಂಬುದು ಗಮನಾರ್ಹ. ಒಟ್ಟು ರೂ.5,58,970 ಕೋಟಿ ನೇರ ತೆರಿಗೆ ಸಂಗ್ರಹವಾಗಿದ್ದರೆ, ಇದರಲ್ಲಿ ರೂ.2,30,188 ಕೋಟಿ `ಟಿಡಿಎಸ್' ಕೊಡುಗೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.