ಗುರುವಾರ , ಏಪ್ರಿಲ್ 15, 2021
31 °C

ಟೆನ್‌ಪಿನ್ ಬೌಲಿಂಗ್: ವಿವೇಕ್, ಪವಿತ್ರಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವೇಕ್ ಪರಮಶಿವಯ್ಯ ಹಾಗೂ ಡಿ.ಎಂ.ಪವಿತ್ರಾ ಅವರು `ಕೆಎಸ್‌ಟಿಬಿಎ~ ರಾಜ್ಯ ರ‌್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿ(21 ವರ್ಷ ವಯಸ್ಸಿನೊಳಗಿನವರು)ಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.



ನಗರದ ಸ್ಟಾರ್‌ಸಿಟಿಯಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಅಂತಿಮ ಪೈಪೋಟಿಯಲ್ಲಿ  ವಿವೇಕ್ 157-151 ಪಾಯಿಂಟುಗಳ ಅಂತರದಿಂದ ಜೆಐಆರ್‌ಎಸ್‌ನ ಸುಜಯ್ ಕೊಲ್ಟೆ ವಿರುದ್ಧ ವಿಜಯ ಸಾಧಿಸಿದರು.



ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ವಿವೇಕ್ ಹಾಗೂ ಪ್ರತ್ಯೇಕ್ ಸತ್ಯ 171-171 ಪಾಯಿಂಟುಗಳಿಂದ ಸಮಬಲ ತೋರಿದರು. ಆಗ ವಿಜಯಿಯನ್ನು ನಿರ್ಧರಿಸಲು `ಒನ್ ಬೌಲ್ ರೋಲ್~ ನಿಯಮ ಜಾರಿಗೊಳಿಸಲಾಯಿತು. ಆಗ ವಿವೇಕ್ 9-7ರಲ್ಲಿ ಮುನ್ನಡೆ ಸಾಧಿಸಿದರು. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಸುಜಯ್ 157-153ರಲ್ಲಿ ಮೈಸೂರಿನ ದೀಕ್ಷಿತ್ ಸೋಳಂಕಿ ಎದುರು ಜಯ ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.