ಸೋಮವಾರ, ಜನವರಿ 20, 2020
21 °C

ತ್ರಿವರ್ಣ ಧ್ವಜದಡಿ ಸ್ಪರ್ಧಿಸಲು ಕಾತರ: ಗಗನ್‌ ನಾರಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಗಾಂವ್ (ಪಿಟಿಐ): 2014 ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ತ್ರಿವರ್ಣ  ಧ್ವಜದಡಿಯಲ್ಲಿ ಪಾಲ್ಗೊಳ್ಳಲು ಕಾತರರಾಗಿರುವುದಾಗಿ ಭಾರತದ ಶೂಟರ್‌ಗಳಾದ ರಂಜನ್ ಸೋದಿ ಮತ್ತು ಗಗನ್ ನಾರಂಗ್ ತಿಳಿಸಿದ್ದಾರೆ.ಐಒಎ ತನ್ನ ಸಂವಿಧಾನದಲ್ಲಿ ತಿದ್ದುಪಡಿ ತರಲು ಸಮ್ಮತಿಸಿದ್ದಕ್ಕೆ ಸೋದಿ ಮತ್ತು ನಾರಂಗ್ ಸಂತಸ ವ್ಯಕ್ತಪಡಿಸಿದ್ದಾರೆ.‘ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ  ತ್ರಿವರ್ಣ ಧ್ವಜದಡಿಯಲ್ಲಿ ಪಾಲ್ಗೊ ಳ್ಳಲು  ನಾವು ಅರ್ಹರಾಗಬೇಕಿದೆ.ಈ ಸಂಬಂಧ ಐಒಎ ನಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ. ಈ ಬಗ್ಗೆ ಐಒಸಿ ಕೂಡ ಸಮಾಧಾನ ವ್ಯಕ್ತಪಡಿ ಸಿದೆ’ ಎಂದು ಏಷ್ಯನ್‌ ಗೇಮ್ಸ್‌ನಲ್ಲಿ  ಚಿನ್ನ ಜಯಿಸಿರುವ ಸೋದಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)