ಶನಿವಾರ, ಮೇ 15, 2021
24 °C

ದೇಶದ ಅರ್ಥ ವ್ಯವಸ್ಥೆ ಸದೃಢ: ಆರ್‌ಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್(ಪಿಟಿಐ): ದೇಶದ ಆರ್ಥಿಕ ವ್ಯವಸ್ಥೆ ಬಹಳ ದೃಢವಾಗಿದೆ. ಇದು ಮುಂದಿನ ಜೂನ್‌ನಲ್ಲಿ ಮಂಡನೆಯಾಗಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ಸ್ಥಿರತೆ ಕುರಿತ ವರದಿಯಲ್ಲಿ ಸ್ಪಷ್ಟವಾಗಲಿದೆ ಎಂದು ಆರ್‌ಬಿಐ ಪ್ರತಿಕ್ರಿಯಿಸಿದೆ.ಗುರುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಆರ್‌ಬಿಐ ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರವರ್ತಿ, ದೇಶದ ವಾಸ್ತವ ಆರ್ಥಿಕ ಪರಿಸ್ಥಿತಿಯನ್ನು ಆರ್‌ಬಿಐ ವರದಿ ಖಚಿತಪಡಿಸಲಿದೆ ಎಂದರು.`ಸ್ಟಾಂಡರ್ಡ್ ಅಂಡ್ ಪೂರ್~ ಭಾರತದ ಆರ್ಥಿಕ ಮುನ್ನೋಟದ ಬಗ್ಗೆ ಋಣಾತ್ಮಕ ರೇಟಿಂಗ್ ನೀಡಿದ ಒಂದು ದಿನದ ನಂತರ ಆರ್‌ಬಿಐ ಪ್ರತಿಕ್ರಿಯಿಸಿದೆ.ನಗದು ಮಾರುಕಟ್ಟೆಯಲ್ಲಿಯೂ ಭಾರಿ ಏರಿಳಿತ ಕಂಡುಬಂದಾಗಲಷ್ಟೇ ಆರ್‌ಬಿಐ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುತ್ತದೆ ಎಂದು ಅವರು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.