ನಾಟ್ಯಾಲಯ ನೃತ್ಯ ಮತ್ತು ಸಂಗೀತ ಶಾಲೆಯು ಜೆ.ಪಿ.ನಗರದ ದುರ್ಗಾಪರಮೇಶ್ವರಿ ಮೈದಾನದಲ್ಲಿ 2013ರ ನಾಟ್ಯೋತ್ಸವ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.

ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಗೊಳಿಸುವ ಉದ್ದೇಶದಿಂದ ಸಂಸ್ಥೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಚಿಣ್ಣರು ಅಭಿನಯಿಸಿದ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದಿತು. ಭರತನಾಟ್ಯ, ಕಥಕ್, ಹಿಪ್ಹಾಪ್ ಪಾಶ್ಚಾತ್ಯ ನೃತ್ಯ, ಬೆಲ್ಲಿ ನೃತ್ಯ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ನೃತ್ಯವಷ್ಟೇ ಅಲ್ಲದೇ ಕರಾಟೆ, ಜಿಮ್ನಾಸ್ಟಿಕ್ ಮುಂತಾದ ಕಲೆಗಳನ್ನೂ ಮಕ್ಕಳು ಪ್ರದರ್ಶಿಸಿದರು.

ಐದು ವರ್ಷದಿಂದ 20ವರ್ಷದೊಳಗಿನ 200ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ 4.30ಕ್ಕೆ ಆರಂಭವಾದ ನಾಟ್ಯೋತ್ಸವ ರಾತ್ರಿ 11.30ರವರೆಗೂ ನಡೆಯಿತು.

`ನಾಟ್ಯಾಲಯವು ಪ್ರತಿವರ್ಷ ಇಂತಹ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿಗೆ ಅಪಾರ ಕೊಡುಗೆ ನೀಡುತ್ತಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಶಾಸಕ ಬಿ.ಎನ್. ವಿಜಯಕುಮಾರ್.

ನಾಟ್ಯಾಲಯದ ಪೋಷಕ ಹಾಗೂ ಜ್ಯೋತಿಷಿ ಆನಂದ್ ಗುರೂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಟ್ಯಾಲಯದ ಸಂಸ್ಥಾಪಕ ನಿರ್ದೇಶಕ ಬಿ.ಕೆ. ದಿನಕರ್, ವ್ಯವಸ್ಥಾಪಕ ನಿರ್ದೇಶಕಿ ಸವಿತಾ ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.