ಭಾನುವಾರ, ಜೂಲೈ 5, 2020
22 °C

ನಾಲ್ಕೂ ನಿಟ್ಟಿನಿಂದ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಲ್ಕೂ ನಿಟ್ಟಿನಿಂದ...

`ರಾಜಧಾನಿ~ಯ ನಾಲ್ಕೂ ಹುಡುಗರ ಮುಖದಲ್ಲಿ ಸಂತಸವಿತ್ತು. ನಿರೀಕ್ಷೆ ಇತ್ತು. ಟೀಮ್ ಎನ್ನುವುದಕ್ಕೆ ನಿಜವಾದ ಅರ್ಥವನ್ನು ಆ ಹುಡುಗರು ಅಲ್ಲಿ ಕಟ್ಟಿಕೊಟ್ಟಿದ್ದರು.`ರಾಜಧಾನಿ~ಯ ನಾಯಕ ತೆರೆಯ ಮೇಲೆ ತೆರೆಯ ಹಿಂದೆ ಜೊತೆಜೊತೆಯಾಗಿ ಹೇಗೆ ಪಯಣಿಸಿದ ಎನ್ನುವುದನ್ನು ಆ ಹುಡುಗರು ಹಂಚಿಕೊಳ್ಳುತ್ತಿದ್ದರು. ಸ್ನೇಹದೊಂದಿಗೆ ಪರಸ್ಪರರ ಪ್ರತಿಭೆಯ ಬಗ್ಗೆ ಅಭಿಮಾನ, ಗೌರವ ಮಿಳಿತವಾಗಿದ್ದುದು ಅವರ ಮಾತುಗಳಲ್ಲಿ, ಮುಖಭಾವದಲ್ಲಿ ಕಾಣತೊಡಗಿತ್ತು.ಹಾಲುಬಿಳುಪಿನ ಹುಡುಗ ಟೀಮ್‌ಲೀಡರ್ ಯಶ್- `ಅಲ್ಟ್ರಾಮೋಶನ್ ಕ್ಯಾಮೆರಾ, ರವಿವರ್ಮ ಸ್ಟಂಟ್, ಮೇಲಿನಿಂದ ಹಾರೋದಕ್ಕೆ ಎಲ್ಲಾ ರೀತಿಯ ಸೌಲಭ್ಯಗಳು... ಹೀಗಿದ್ದಾಗ ಯಾಕೆ ಪ್ರಯತ್ನಿಸಬಾರದು ಅಂತ ಅನ್ಕೊಂಡೆ. ಹಾಗೇ 24ನೇ ಮಹಡಿಯಿಂದ ಹಾರೇಬಿಟ್ಟೆ~ ಎಂದು ಅನುಭವಗಳನ್ನು ಮಾತುಗಳಲ್ಲಿ ಜೀಕತೊಡಗಿದರು.`ಈ ಮೊದಲು ಅಭಿನಯಿಸಿದ ಚಿತ್ರಗಳಲ್ಲಿ ಸಾಫ್ಟ್ ಶೇಡ್‌ನ ಲವ್ ಬಾಯ್ ಆಗಿ ಆಟ ಆಡ್ಕೊಂಡಿದ್ದೆ. ಆದರೆ ಈಗ ಆ್ಯಕ್ಷನ್ ರೋಲ್‌ನಲ್ಲಿ ಕಾಣಿಸ್ಕೊಂಡಿದ್ದೇನೆ. ರಫ್ ಅಂಡ್ ಟಫ್ ಜೊತೆ ಸೀರಿಯಸ್ ಲುಕ್ ನನ್ನ ಪಾತ್ರಕ್ಕಿದೆ. ಹತ್ತು ಡೈಲಾಗ್ ಹೇಳೋದಕ್ಕಿಂತ ಒಂದೇ ಡೈಲಾಗ್ ಸಾಕು. ನಿರ್ದೇಶಕ ಕೆ.ವಿ. ರಾಜು ಅವರೊಂದಿಗೆ  ಮತ್ತು ಹಿರಿಯ ನಟ ಪ್ರಕಾಶ್ ರೈ ಅವರೊಂದಿಗೆ ಕೆಲಸ ಮಾಡಿದ್ದು ಅಮೇಝಿಂಗ್.ಅಂದಹಾಗೇ ಈ ಪಾತ್ರಕ್ಕೆ ಬ್ರೌನ್ ಶೇಡ್ ಬೇಕಾಗಿದ್ದರಿಂದ ದೇಹಪೂರ್ತಿ ಮೇಕಪ್ ಹಾಕಿಕೊಂಡಿದ್ದೇನೆ. ದಟ್ಟ ಗಡ್ಡ, ಮೀಸೆ ಬೆಳೆಸಿದ್ದೇನೆ~ ಅಂತ ಮುಗುಳ್ನಕ್ಕರು.ಯಶ್‌ಗೆ ಸಾಥ್ ಕೊಟ್ಟ ಸಂದೀಪ್, ಒಂದಿನ ಬೆಳಗ್ಗೆ ಯಶ್ ಕಾಲ್ ಬಂತು. ಈ ಪಾತ್ರವನ್ನ ನೀನು ಮಾಡಬಹುದು ಅನ್ನಿಸ್ತು. ಡೈರೆಕ್ಟರ್ ಓಕೆ ಅಂದ್ರೆ ಓಕೆ. ಯಾವುದಕ್ಕೂ ಯೋಚಿಸು ಅಂತ ಹೇಳಿದ.ಆದರೆ ಸೀರಿಯಲ್‌ನ ಕಮಿಟ್‌ಮೆಂಟ್ ಜೊತೆ 60 ದಿನದ ಶೂಟಿಂಗ್ ಒಪ್ಕೊಳ್ಳೋದು ಹೇಗೆ ಅಂತ ತುಂಬಾ ಯೋಚನೆ ಮಾಡಿದೆ. ಕೊನೆಗೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅಂತಾಗಬಾರದಲ್ಲಾ ಅನ್ಕೊಂಡು ಸೀರಿಯಲ್ ಡೈರೆಕ್ಟರ್ ಬಳಿ ಪ್ರಸ್ತಾಪಿಸಿದೆ.ಒಳ್ಳೇ ರೋಲ್ ಬಂದಾಗ ಯಾಕೆ ಹಿಂದೆ ಮುಂದೆ ನೋಡ್ತೀಯಾ... ಹೋಗು ಅಡ್ಜಸ್ಟ್ ಮಾಡ್ಕೊಳ್ತೀವಿ ಅಂತ ಬೆನ್ನು ತಟ್ಟಿದ್ರು. ಅಂತೂ `ರಾಜಧಾನಿ~ ಒಪ್ಕೊಂಡೆ. ಇದುವರೆಗೆ ನಾಲ್ಕೈದು ಚಿತ್ರಗಳಲ್ಲಿ ಮಾಡಿದ್ದೀನಾದ್ರೂ ಡ್ಯಾನ್ಸ್, ಫೈಟ್ ಇರಲಿಲ್ಲ. ಈ ಚಿತ್ರದಲ್ಲಿ ಅದಕ್ಕೆ ಅವಕಾಶ ಸಿಕ್ಕಿದೆ ಅಂತ ಗಂಭೀರವಾಗೇ ಮಾತು ಹಂಚಿಕೊಂಡರು.ಸಂಗೀತ ನಿರ್ದೇಶಕ ಅರ್ಜುನ್, `ಈ ಚಿತ್ರದ ಹಾಡುಗಳ ರೀರೆಕಾರ್ಡಿಂಗ್ ಚಾಲೆಂಜಿಂಗ್ ಆಗಿತ್ತು. ಸುಮಾರು ಐವತ್ತು ದಿನಗಳವರೆಗೆ ರೀರೆಕಾರ್ಡಿಂಗ್ ನಡೀತು.ಸೋನು ನಿಗಮ್ ಹಾಡಿದ `ಮಿಡಿವ ನಿನ್ನ...~ ಹಾಡು ಈಗಾಗ್ಲೇ ಎಫ್‌ಎಮ್‌ಗಳಲ್ಲಿ ಹಿಟ್ ಆಗಿದೆ. ಯಾವ ಭಾಷೆಯ ಚಿತ್ರಗಳೊಂದಿಗೂ ಈ ಚಿತ್ರ ಕಾಂಪಿಟ್ ಮಾಡಬಹುದು. ಸ್ಕ್ರೀನ್‌ಪ್ಲೇ ಡಿಫರೆಂಟ್ ಆಗಿದೆ~ ಅಂತ ಮಾತು ಚುಟುಕುಗೊಳಿಸಿದರು.`ರಾಜಧಾನಿ~ಯ ಹುಡುಗರಾದ ಚೇತನ್ ಚಂದ್ರ, ರವಿತೇಜ್ ಅಲ್ಲಿದ್ದರು. ಯಶ್‌ಗೆ ಶೀನಾ ಶಹಬಾದಿ ಜೊತೆಯಾಗಿದ್ದಾರೆ. ಈ ಚಿತ್ರದ ನಿರ್ಮಾಪಕರು ಸೌಮ್ಯ ಸತ್ಯನ್.ಉಮಾಶ್ರೀ, ತುಳಸಿ ಶಿವಮಣಿ ಇತರರು ತಾರಾಗಣದಲ್ಲಿದ್ದಾರೆ. ಅಂದಹಾಗೆ, `ರಾಜಧಾನಿ~ ಇಂದು ತೆರೆಕಾಣುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.