ಸೋಮವಾರ, ಮೇ 17, 2021
30 °C
ಕಂಪ್ಯೂಟರ್ ಕೀಲಿಮಣೆ ಮೇಲೆ ಕೈ ಇಟ್ಟು ಅಚಾತುರ್ಯ

ನಿದ್ದೆಯಲ್ಲಿ ಹೋಯ್ತು ಕೋಟಿ ಕೋಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಲಿನ್ (ಪಿಟಿಐ): ಜರ್ಮನ್ ಬ್ಯಾಂಕ್‌ನ ಉದ್ಯೋಗಿಯೊಬ್ಬ ತನ್ನ ಕಂಪ್ಯೂಟರ್‌ನ ಕೀಲಿ ಮಣೆ ಮೇಲೆಯೇ ನಿದ್ರಾದೇವಿಯ ತೆಕ್ಕೆಗೆ ಜಾರಿ,  29.4 ಕೋಟಿ   ಡಾಲರ್ ಹಣವನ್ನು ಆಕಸ್ಮಿಕವಾಗಿ ಬೇರೆ ಖಾತೆಗೆ ವರ್ಗಾಯಿಸಿದ್ದಾನೆ. ಇದರಿಂದಾಗಿ ಬ್ಯಾಂಕಿನ ಮೇಲ್ವಿಚಾರಕರು ಕೆಲಸ ಕಳೆದುಕೊಂಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಮೇಲ್ವಿಚಾರಕರನ್ನು ಕೆಲಸದಿಂದ ತೆಗೆದುಹಾಕಿರುವುದು ತಪ್ಪು. ಬದಲಿಗೆ ಅವರಿಗೆ ಛೀಮಾರಿ ಹಾಕಬಹುದಿತ್ತು ಎಂದು ಜರ್ಮನಿಯ ಕಾರ್ಮಿಕ ನ್ಯಾಯಾಲಯ ಹೇಳಿದೆ.ಘಟನೆ ವಿವರ: ಬ್ಯಾಂಕ್ ಉದ್ಯೋಗಿಯೊಬ್ಬ ಕೆಲಸದ ವೇಳೆಯಲ್ಲಿ ನಿದ್ರೆಗೆ ಜಾರಿ ಕೀಲಿ ಮಣೆ ಮೇಲೆ ಒರಗಿದ. ಇದರಿಂದಾಗಿ ಪಾವತಿಸಬೇಕಾಗಿದ್ದ 64.20 ಯುರೊಗಳ ಬದಲಿಗೆ ಆತನ ಬೆರಳು 222,222,222,22 ಸಂಖ್ಯೆಯನ್ನು ಒತ್ತಿದೆ. ಈ ಕಾರಣ ಆಕಸ್ಮಿಕವಾಗಿ ಅಮೆರಿಕದ 29.3 ಕೋಟಿ ಡಾಲರ್ ಹಣ ಬೇರೆ ಖಾತೆಗೆ ವರ್ಗಾವಣೆಯಾಗಿತ್ತು. ಕೆಲಸದ ಒತ್ತಡದಲ್ಲಿ ಮೇಲ್ವಿಚಾರಕರು ಈ ವ್ಯವಹಾರವನ್ನು ಸರಿಯಾಗಿ ಪರಿಶೀಲಿಸದೆ ಅನುಮೋದಿಸಿದ್ದರಿಂದ ಕೆಲಸ ಕಳೆದುಕೊಂಡಿದ್ದರು.ಈ ಘಟನೆ ನಡೆದಿದ್ದು ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ. ಆದರೆ, ಅದರ ವಿಚಾರಣೆ ಈಗ ನಡೆಯುತ್ತಿದೆ. ಈ ಎಲ್ಲಾ ವಿಷಯವನ್ನು ಆಲಿಸಿದ ನ್ಯಾಯಾಲಯ, ಮೇಲ್ವಿಚಾರಕರನ್ನು ಕೆಲಸದಿಂದ ವಜಾಗೊಳಿಸಿರುವುದು ಸೂಕ್ತವಲ್ಲ. ಅವರನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು ಎಂದೂ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.