ಮಂಗಳವಾರ, ಜನವರಿ 28, 2020
19 °C

ನಿರೂಪಕ ಲೆನೊ ವಿರುದ್ಧ ದಾವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್(ಪಿಟಿಐ): ಅಮೃತಸರದ ಸ್ವರ್ಣ ಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಅಮೆರಿಕದ ಪ್ರಸಿದ್ಧ ಟಿವಿ ಕಾರ್ಯಕ್ರಮ ನಿರೂಪಕ ಜಾಯ್ ಲೆನೊ ವಿರುದ್ಧ ಕ್ಯಾಲಿಫೋರ್ನಿಯಾದಲ್ಲಿರುವ ಭಾರತೀಯ ಮೂಲದ ರಣದೀಪ್ ಧಿಲ್ಲೊನ್ ಅವರು ಮೊಕದ್ದಮೆ ದಾಖಲಿಸಿದ್ದಾರೆ.ಲಾಸ್ ಏಂಜಲೀಸ್ ಉನ್ನತ ನ್ಯಾಯಾಲಯದಲ್ಲಿ ಈ ದೂರು ದಾಖಲಾಗಿದ್ದು, ಸ್ವರ್ಣ ಮಂದಿರವು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂಭಾವ್ಯ ಅಭ್ಯರ್ಥಿ ಮಿಟ್ ರೊಮ್ನೆಯ್ ಅವರ ಬೇಸಿಗೆ ನಿವಾಸವಾಗುವ ಸಾಧ್ಯತೆ ಇದೆ ಎಂದು ಅಪಹಾಸ್ಯ ಮಾಡುವ ಮೂಲಕ ನಿರೂಪಕ ಲೆನೊ, ಸಿಖ್ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.  ಅಮೆರಿಕದಲ್ಲಿರುವ  ಸಿಖ್ ಸಮುದಾಯದವರು ಕೂಡ  ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)