ಗುರುವಾರ , ಮಾರ್ಚ್ 4, 2021
19 °C

ಬೆಸಗರಹಳ್ಳಿ ಶಾಲೆಯ ‘ಹಸಿರು’ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಸಗರಹಳ್ಳಿ ಶಾಲೆಯ ‘ಹಸಿರು’ ಪ್ರೀತಿ

ಕೊಪ್ಪ: ಸುವಾಸನೆ ಬಿರುವ ಹೂಗಳು, ಕಣ್ಮನಸೆಳೆಯುವ ಹಸಿರು ಗಿಡ-ಮರಗಳು, ವಿಶಾಲವಾದ ಆಟದ ಮೈದಾನ, ಸ್ವಚ್ಛಂದ ಶಾಲಾ ಆವರಣ. ಇದು ಬೆಸಗರ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ (ಪಶ್ಚಿಮ) ಶಾಲೆಯ ವಿಂಗಹಮ ನೋಟ.ಶಾಲಾ ಆವರಣದಲ್ಲಿ ಬಗೆ– ಬಗೆಯ ಔಷಧ ಸಸ್ಯಗಳಾದ ಇನ್ಸುಲಿನ್, ದಾಸವಾಳ, ಲೋಕಸರ, ನಾಗದಾಳಿ, ನೆಲನೆಲ್ಲಿ, ದೊಡ್ಡಪತ್ರೆ, ಚಕ್ರಮಗ್ಗಿ ಸೇರಿ ವಿವಿಧ ಔಷಧ ಸಸ್ಯಗಳನ್ನು ಬೆಳೆಸಲಾ ಗಿದೆ. ಅವುಗಳ ಉಪಯೋಗ ಮತ್ತು ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಲಾಗಿದೆ.ಶಾಲಾ ಆವರಣದಲ್ಲಿ ನೆರಳು ನೀಡುವ ಹೊಂಗೆ, ನೇರಳ, ಶೋಭ ರೂಬ ಸೇರಿ ವಿವಿಧ ಜಾತಿಯ ಗಿಡ ಗಳನ್ನು ಬೆಳೆಸಲಾಗಿದೆ. ಪರಂಗಿ, ನೆಲ್ಲಿ, ಬಾಳೆ, ಸೀಬೆ, ರಾಮ ಫಲ, ಸೀತಾಫಲ ಸೇರಿ ವಿವಿಧ ಹಣ್ಣಿನ ಗಿಡಗಳೂ ಇವೆ. ಕೀರೆ, ದಂಟು, ಪಾಲಕ್, ಕೊತ್ತಂಬರಿ ಸೊಪ್ಪು ಸೇರಿದಂತೆ  ವಿವಿಧ ತರಕಾರಿಗಳನ್ನೂ ಬೆಳೆಯಲಾಗಿದೆ. ಪ್ರತಿನಿತ್ಯ ಬಿಸಿಯೂಟ ತಯಾರಿಲು ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ.ಮಧ್ಯಾಹ್ನದ ಊಟದ ಜತೆ ಹಪ್ಪಳ, ಉಪ್ಪಿನಕಾಯಿ, ವಡೆ, ಬಾಳೆಹಣ್ಣು, ಹೋಳಿಗೆ, ಪಾಯಸದ ಸವಿಯನ್ನೂ ಇಲ್ಲಿನ ಮಕ್ಕಳು ಸವಿಯುತ್ತಾರೆ.ಕಂಪ್ಯೂಟರ್ ಶಿಕ್ಷಣ: ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಇದ್ದು, 8 ಗಣಕ ಯಂತ್ರಗಳು ಇವೆ.  ಗ್ರಂಥಾಲಯದಲ್ಲಿ 3 ಸಾವಿರಕ್ಕೂ ಹೆಚ್ಚು ಪುಸ್ತಕ ಗಳಿವೆ. ಅವುಗಳನ್ನು ಮಕ್ಕಳಿಗೆ ನೀಡುವ ಮೂಲಕ ಓದುವ ಆಭಿರುಚಿ ಬೆಳೆಸಲಾಗುತ್ತಿದೆ. ಶಾಲಾ ಪ್ರಯೋಗಾ ಲಯ ಕೂಡ ಚೆನ್ನಾಗಿದೆ.ಸ್ಮಾರ್ಟ್ ಶಾಲೆ: ಶಾಲೆಯಲ್ಲಿ ಟಿವಿ, ಡಿವಿಡಿ ಪ್ಲೇಯರ್ ಇದ್ದು, ಅವುಗಳನ್ನು ಬಳಸಿ ಕೊಂಡು ಬೋಧನೆ ಮಾಡಲಾಗುತ್ತದೆ. ಮಕ್ಕಳು ಓದಿನೊಂದಿಗೆ ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲೂ ಸದಾ ಮುಂದಿದ್ದಾರೆ. ತಾಲ್ಲೂಕು, ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮದಾಗಿ ಸಿಕೊಂಡಿದ್ದಾರೆ. ಬಾಲಕ–ಬಾಲಕಿಯರು, ಶಿಕ್ಷಕರಿಗೆ ಪ್ರತ್ಯೇಕ ಶೌಚಾಲಯಗಳಿವೆ.ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ, ತಾಲ್ಲೂಕುಮಟ್ಟದ ಕೆ. ಅಮರ ನಾರಾಯಣ ಪರಿಸರ ಮಿತ್ರ ಪ್ರಸಸ್ತಿಗೆ ಶಾಲೆ ಭಾಜನವಾಗಿದೆ. ನಮ್ಮೂರ ಶಾಲೆಯನ್ನು ಜಿಲ್ಲೆಯ ಅತ್ಯುತ್ತಮ ಮಾದರಿ ಶಾಲೆ ಮಾಡುವಲ್ಲಿ ಮುಖ್ಯಶಿಕ್ಷಕಿ ಬಿ. ಪುಷ್ಪಾ, ಸಹಶಿಕ್ಷಕರಾದ ಎಂ.ಜಿ. ಚಂದ್ರಶೇಖರ್, ಜೆ. ವಿಜಯ, ಸಿ.ಕೆ. ಮಂಜುಳಾ, ಸಿ.ಎಸ್. ಬೈರಪ್ಪರವರ ಶ್ರಮವಿದೆ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಖಿದರ್ ಖಾನ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.