ಮಂಗಳವಾರ, ಮೇ 11, 2021
21 °C

ಭಜನೆ ಆರಾಧನಾ ಗೀತೆಯ ಗುಚ್ಛ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಮಧ್ಯಕಾಲೀನ ಭಕ್ತಿಯುಗದಲ್ಲಿ ಭಜನಾ ಸಂಪ್ರದಾಯ ಆರಂಭವಾಗಿದ್ದು, ಭಜನೆಗಳು ಜಾತಿ- ಮತ ಮೀರಿದ ದೇಶೀಯ ಆರಾಧನಾ ಗೀತೆಗಳ ಗುಚ್ಚವಾಗಿವೆ ಎಂದು ಗಾಯಕ ನಾಗಭೂಷಣ ಬಾಪುರ ಅಭಿಪ್ರಾಯಪಟ್ಟರು.ನಗರದ ಜೋಳದರಾಶಿ ಡಾ. ದೊಡ್ಡನಗೌಡ ರಂಗಮಂದಿರದಲ್ಲಿ ಗುರುವಾರ ಮೈಸೂರು ದಸರಾ ಆಚರಣಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಶೈವ ಮತ್ತು ವೈಷ್ಣವ ಪಂಥಗಳು ಭಜನಾ ಪರಂಪರೆಯನ್ನು ವ್ಯಾಪಕವಾಗಿ  ಹುಟ್ಟುಹಾಕಿದವು. ಭಜನೆಗಳನ್ನು ಪ್ರಸ್ತುತಪಡಿಸಲು ಪುರುಷರು, ಮಹಿಳೆಯರು ಎನ್ನುವ ಭೇದವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಜನತೆ ಈ ಪ್ರಕಾರದತ್ತ ಆಸಕ್ತಿ ತೋರಿಸದಿರುವುದು ವಿಷಾದನೀಯ ಎಂದು ಅವರು ಹೇಳಿದರು.ಸಂಡೂರು ತಾಲ್ಲೂಕಿನ ಸೋವೇನಹಳ್ಳಿಯ ಜನಪದ ಕಲಾವಿದೆ ಬನ್ನೆಮ್ಮ ಭಜನಾ ಸ್ಫರ್ಧೆ ಉದ್ಘಾಟಿಸಿದರು. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಳೇಮುತ್ಕೂರಿನ ಕೆ.ಮಹಾದೇವಪ್ಪ, ಕೂಡ್ಲಿಗಿ ತಾಲ್ಲೂಕಿನ ವೀಣಾ ಕಲಾ ಸಂಘದ ವೆಂಕಮ್ಮ, ಹಂದಿಹಾಳಿನ ಶಿವಪ್ಪ ತಾತ ಭಜನ ಸಂಘದ ಪರಶುರಾಮ್, ಚಿತ್ರಕಲಾವಿದ ಮಂಜುನಾಥ್ ಗೋವಿಂದವಾಡ, ಸಂಗೀತ ಕಲಾವಿದ ದೊಡ್ಡಬಸವ ಗವಾಯಿ, ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ ಹಾಜರಿದ್ದರು.ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಳೇಮುತ್ಕೂರು ಗ್ರಾಮದ ಮಾರುತಿ ಕೃಪಾಪೋಷಿತ ಭಜನಾ ಸಂಘದ ಸದಸ್ಯರು ಮೊದಲ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.ಸ್ಪರ್ಧೆಯಲ್ಲಿ ಸಂಡೂರು ತಾಲ್ಲೂಕಿನ ಸೋವೇನಹಳ್ಳಿಯ ಸಿದ್ದಾರೂಡ ಭಜನಾ ಸಂಘ, ಪಕ್ಕಿರಪ್ಪ ಮತ್ತು ತಂಡ, ಬಳ್ಳಾರಿ ತಾಲ್ಲೂಕಿನ ಹಂದಿಹಾಳು ಗ್ರಾಮದ ಶಿವಪ್ಪ ತಾತ ಮಠದ ಭಜನಾ ಸಂಘ, ಕೂಡ್ಲಿಗಿಯ ವೀಣಾ ಕಲಾ ಸಂಘದ ಭಜನಾ ತಂಡಗಳು ಭಾಗವಹಿಸಿದ್ದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.