ಭಾನುವಾರ, ಏಪ್ರಿಲ್ 18, 2021
33 °C

ಮಗಳನ್ನು ಕೊಂದ ತಂದೆಗೆ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್(ಪಿಟಿಐ): ಎರಡು ವರ್ಷಗಳ ಹಿಂದೆ ತನ್ನ ನಾಲ್ಕು ವರ್ಷದ ಮಗಳನ್ನು ನಗರದ ಎತ್ತರದ ಸೇತುವೆಯಿಂದ ಎಸೆದು ಕೊಲೆ ಮಾಡಿದ ಆರೋಪದ ಮೇಲೆ ತಂದೆಗೆ ಜೀವಾವಧಿ ಶಿಕ್ಷೆ ನೀಡಲಾಗಿದ್ದು, ಜತೆಗೆ 32 ವರ್ಷಗಳವರೆಗೆ ಪೆರೊಲ್ ಸಹ ನಿರಾಕರಿಸಲಾಗಿದೆ.ಆರ್ಥರ್ ಫ್ರೀಮ್ಯಾನ್ (37) ಶಿಕ್ಷೆಗೆ ಗುರಿಯಾಗಿದ್ದು, ಈತ 2009ರ ಜನವರಿ 29ರಂದು 58 ಅಡಿ ಎತ್ತರದ ವೆಸ್ಟ್ ಗೇಟ್ ಸೇತುವೆ ಮೇಲಿಂದ ತನ್ನ ಮಗಳು ಡಾರ್ಸಿಯನ್ನು ಕೆಳಗೆ ಎಸೆದಾಗ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು.

 

ಕಳೆದ ತಿಂಗಳು ವಿಕ್ಟೋರಿಯಾ ಸುಪ್ರೀಂ ಕೋರ್ಟ್ ಆರ್ಥರ್‌ನನ್ನು ತಪ್ಪಿತಸ್ಥೆನೆಂದು ತೀರ್ಮಾನಿಸಿದ್ದು, ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.