ಬುಧವಾರ, ಜೂನ್ 16, 2021
22 °C

ಮದ್ಯ ಮಾರಾಟದ ವಿರುದ್ಧ ಮಹಿಳೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ಗ್ರಾಮ ಗ್ರಾಮಗಳನ್ನು ಆವರಿಸಿಕೊಂಡಿರುವ ಅನಧಿಕೃತ ಮದ್ಯ ಮಾರಾಟದ ವಿರುದ್ಧ ಮಹಿಳೆಯರ ಸಂಘಟಿತ ಹೋರಾಟ ಮುಂದು ವರೆದಿದ್ದು, ತಾಲ್ಲೂಕಿನ ತಳ್ಳಿಹಳ್ಳಿ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟ ವಿರೋಧಿ ಪ್ರತಿಭಟನೆ ನಡೆಸಿದ್ದಾರೆ.ಮಂಗಳವಾರ ಸವಣೂರಿನ ತಹಶೀಲ್ದಾರರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ ಗ್ರಾಮದ ಸ್ತ್ರೀಶಕ್ತಿ ಸಂಘದ ಸದಸ್ಯರು, ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟವನ್ನು ರಾಜಾ ರೋಷವಾಗಿ ಕೈಗೊಳ್ಳ ಲಾಗುತ್ತಿದೆ ಎಂದು ದೂರಿದ್ದಾರೆ. ಅಧಿಕಾರಿಗಳು ಮದ್ಯ ಮಾರಾಟವ ನ್ನು ತಡೆಗಟ್ಟ ಬೇಕು. ಅಕ್ರಮವಾಗಿ ಮದ್ಯ ಮಾರಾಟ ಮಾಡುವ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಬೇಕು. ಸಾರ್ವ ಜನಿಕರು ನೆಮ್ಮದಿಯ ಬದುಕನ್ನು ಸಾಗಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.ಗ್ರಾಮದಲ್ಲಿ ಅತ್ಯಂತ ಸುಲಭವಾಗಿ ಸರಾಯಿ ಲಭ್ಯವಾಗುತ್ತಿರುವದರಿಂದ ರಾತ್ರಿಯಾಗುತ್ತಿದ್ದಂತೆ ಕುಡುಕರ ಹಾವಳಿ ಹೆಚ್ಚಾಗುತ್ತಿದೆ. ಮನೆಯಲ್ಲಿನ ಮಹಿಳೆಯರಿಗೆ, ಮಕ್ಕಳಿಗೆ ಆವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸುವದು, ಪ್ರತಿ ನಿತ್ಯ ದೈಹಿಕ ಹಿಂಸೆ ನೀಡುವದು ಸಾಮಾನ್ಯವಾಗುತ್ತಿದೆ. ಇದರೊಂದಿಗೆ  ಕಳ್ಳತನದ ಪ್ರಕರಣ ಹೆಚ್ಚುತ್ತಿದೆ. ಪರಿಣಾಮ ನೆಮ್ಮದಿಯ ಜೀವನ ಇಲ್ಲದಂತಾಗಿದೆ ಎಂದು ಮಹಿಳೆಯರು ನೋವು ತೋಡಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮವ್ವ ಎಸ್. ಹರಿಜನ, ಸದಸ್ಯರಾದ ದ್ಯಾಮವ್ವ ಟಿ. ಬೆಣ್ಣಿ, ಮೈಲಾರಪ್ಪ ಮರಿಯಮ್ಮನವರ, ರೇಣವ್ವ ನಂದಿಹಳ್ಳಿ, ಶಾಂತವ್ವ ಮನ್ನಂಗಿ, ಪುಟ್ಟವ್ವ ಅಳಲಗೇರಿ, ಮಲ್ಲಮ್ಮ ಮರಿಯಮ್ಮನವರ, ಯಲ್ಲವ್ವ ಅಂಗಡಿ, ದ್ಯಾಮವ್ವ ಕಳಲಕೊಂಡ, ರತ್ನವ್ವ ಅಂಗಡಿ, ದ್ಯಾಮವ್ವ ರಟಗೇರಿ, ಸೇರಿದಂತೆ ಗ್ರಾಮದ ಸ್ತ್ರೀ ಶಕ್ತಿ ಮಹಿಳಾ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.