ಮುದ್ರಾಡಿ (ಹೆಬ್ರಿ): ಮುದ್ರಾಡಿಯಂತಹ ಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವ ನಿಜವಾಗಿ ಅದ್ಭುತ. ಇಂತಹ ರಂಗಸಂಭ್ರಮ ನಿರಂತರ ನಡೆಯಲಿ ಎಂದು ರಾಜ್ಯಸಭಾ ಸದಸ್ಯೆ ರಂಗನಟಿ ಬಿ.ಜಯಶ್ರೀ ಮೆಚ್ಚುಗೆ ವ್ಯಕ್ತಪಡಿಸಿದರು.ಹೆಬ್ರಿ ಸಮೀಪದ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ‘ನಾಟ್ಕ ಮುದ್ರಾಡಿ’ ರಜತ ಸಂಭ್ರಮದ ಅಂಗವಾಗಿ ಮುದ್ರಾಡಿ ಹಿರಿಯ ಪ್ರಾಥಮಿಕ ಶಾಲೆಯ ಬಿ.ವಿ ಕಾರಂತ ರಂಗವೇದಿಕೆಯಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ನಾಟಕೋತ್ಸವ ‘ನವರಂಗೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮುಂಬೈ ಉದ್ಯಮಿ ಮುದ್ರಾಡಿ ದಿವಾಕರ್ ಎನ್.ಶೆಟ್ಟಿ ಸಂಸ್ಥೆಯ ಕಲಾಭವನಕ್ಕೆ ರೂ 15 ಲಕ್ಷ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.ಶಾಸಕ ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರ ನಿರ್ದೇಶಕ ಅಶೋಕ್ ಕಶ್ಯಪ್, ಡಾ.ಎಂ.ಎಸ್.ರಾವ್, ಅಂಬಾತನಯ ಮುದ್ರಾಡಿ, ನಾರಾಯಣ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪೂಜಾರಿ, ಮುದ್ರಾಡಿ ಕಮಲ ಪೂಜಾರಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ನಮ ತುಳುವೆರ್ ಕಲಾ ಸಂಘಟನೆ ಅಧ್ಯಕ್ಷ ಸುಕುಮಾರ್ ಮೋಹನ್ ಮತ್ತು ಸಂಚಾಲಕ ಧರ್ಮಯೋಗಿ ಮೋಹನ್ ಅವರನ್ನು ಮುಂಬೈ ಉದ್ಯಮಿ ಮುದ್ರಾಡಿ ದಿವಾಕರ್ ಎನ್.ಶೆಟ್ಟಿ ಮತ್ತು ಮುದ್ರಾಡಿ ಗೆಳೆಯರ ಬಳಗದವರು ಅಭಿನಂದಿಸಿದರು. ದಕ್ಷಿಣ ಮುಂಬೈ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕಾಂಬ್ಳೆ ಕಲಾಭವನಕ್ಕೆ ರೂ 50 ಸಾವಿರ ದೇಣಿಗೆ ಪ್ರಕಟಿಸಿದರು.

ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ಸಂಚಾಲಕ ಧರ್ಮಯೋಗಿ ಮೋಹನ್, ಕಮಲ ಮೋಹನ್, ಉಮೇಶ್ ಕಲ್ಮಾಡಿ, ಉದ್ಯಾವರ ನಾಗೇಶ್ ಕುಮಾರ್, ಸುರೇಂದ್ರ ಮೋಹನ್, ಸುಧೀಂದ್ರ ಮೋಹನ್, ಸುಗಂಧಿ ಉಮೇಶ್ ಕಲ್ಮಾಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.