ಗುಲ್ಬರ್ಗ: ಬಟ್ಟೆ ತೊಳೆಯಲು ಹೋಗಿದ್ದ ಮೂವರು ಯುವತಿಯರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಶಹಾಬಾದ್ ಸಮೀಪದ ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀತಾ ರಾಠೋಡ, ಸೀತಾಬಾಯಿ ರಾಠೋಡ ಹಾಗೂ ಶಾಮಾಬಾಯಿ ಗಾಡಿವಡ್ಡರ್ ಮೃತಪಟ್ಟ ದುರ್ದೈವಿಗಳು.

ಕಲ್ಲಿನ ಗಣಿಗಾರಿಕೆಯ ನಂತರ ಖಾಲಿಯಿದ್ದ ಹೊಂಡದಲ್ಲಿ ನೀರು ತುಂಬಿತ್ತು. ಈ ಯುವತಿಯರು ಅಲ್ಲಿ ಬಟ್ಟೆ ತೊಳೆಯಲು ತೆರಳಿದ್ದರು. ಸುನೀತಾ ಕಾಲು ಜಾರಿ ಬಿದ್ದುದನ್ನು ಗಮನಿಸಿ ಉಳಿದಿಬ್ಬರು ಆಕೆಯನ್ನು ರಕ್ಷಿಸಲು ಮುಂದಾದಾಗ, ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.

ಸುನೀತಾ ಹಾಗೂ ಸೀತಾಬಾಯಿ ರೇವೂರ ತಾಂಡಾದ ನಿವಾಸಿಯಾಗಿದ್ದರೆ, ಶಾಮಾಬಾಯಿ ಎಂಬಾಕೆ ಮಹಾರಾಷ್ಟ್ರದ ನವಲೂರು ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.