ಶುಕ್ರವಾರ, ಏಪ್ರಿಲ್ 16, 2021
31 °C

ಮ್ಯಾನೇಜರ್-ಲಾ ಹುದ್ದೆ: ಹೈಕೋರ್ಟ್ ಮಧ್ಯಂತರತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ವಿಜಯಾ ಬ್ಯಾಂಕ್‌ನಲ್ಲಿ ‘ಮ್ಯಾನೇಜರ್-ಲಾ’ ಹುದ್ದೆಗೆ 2010ರ ಸೆ.14ರಂದು ಕರೆದಿರುವ ಅರ್ಜಿಗೆ ಸಂಬಂಧಿಸಿದಂತೆ ಮುಂದಿನ ಪ್ರಕ್ರಿಯೆಗೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.ಈ ಹುದ್ದೆಗೆ ಮೀಸಲು ಇಡಲಾದ ವಯೋಮಾನದ ಅರ್ಹತೆಯು ಅವೈಜ್ಞಾನಿಕವಾಗಿದೆ ಎಂದು ದೂರಿ ವಕೀಲ ಎನ್.ಎಸ್.ವಿಜಯಂತ ಬಾಬು ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಈ ಆದೇಶ ಹೊರಡಿಸಿದ್ದಾರೆ.

ಈ ಹುದ್ದೆಗೆ ಎಲ್‌ಎಲ್‌ಎಂ ವಿಷಯ ಕಡ್ಡಾಯ ಮಾಡಲಾಗಿದ್ದು, ನಾಲ್ಕು ವರ್ಷಗಳ ಕನಿಷ್ಠ ಅನುಭವ ಕೇಳಲಾಗಿದೆ. ಆದರೆ ವಯೋಮಾನವನ್ನು 25ರಿಂದ 28ಕ್ಕೆ ನಿಗದಿ ಮಾಡಲಾಗಿದ್ದು, ಇದು ಅವೈಜ್ಞಾನಿಕ ಎನ್ನುವುದು ಅರ್ಜಿದಾರರ ವಾದ.ಎಲ್‌ಎಲ್‌ಎಂ ಪದವಿಯನ್ನು ಎಲ್‌ಎಲ್‌ಬಿ ಪದವಿ ಮುಗಿದ ನಂತರ ಅಧ್ಯಯನ ಮಾಡಬೇಕು. ಹಾಗೆಯೇ ಎಲ್‌ಎಲ್‌ಬಿ ಪದವಿಯನ್ನು ದ್ವಿತೀಯ ವರ್ಷದ ಪಿಯುಸಿ ಅಥವಾ ಪದವಿಯ ನಂತರ ಅಧ್ಯಯನ ಮಾಡಬೇಕು.

ಎಲ್ಲ ಅಧ್ಯಯನ ನಡೆಸಿ ಕನಿಷ್ಠ ನಾಲ್ಕು ವರ್ಷದ ಅನುಭವ ಇರಬೇಕು ಎಂದರೆ, ಅಂತಹ ಅಭ್ಯರ್ಥಿಗೆ ಕನಿಷ್ಠ 28-29 ವರ್ಷ ವಯಸ್ಸಾಗಿರುತ್ತದೆ. ಆದರೆ ಈಗ ನಿಗದಿ ಮಾಡಿರುವ ವಯೋಮಾನದಲ್ಲಿ ಯಾರೊಬ್ಬರೂ ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ ಎನ್ನುವುದು ಅರ್ಜಿದಾರರ ದೂರು. ವಿಚಾರಣೆ ಮುಂದೂಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.