ಯುವಕರಿಗೆ ದೇಸಿ ಕಲೆ ಕಲಿಸಿಕೊಡಿ

ಶುಕ್ರವಾರ, ಮೇ 24, 2019
23 °C

ಯುವಕರಿಗೆ ದೇಸಿ ಕಲೆ ಕಲಿಸಿಕೊಡಿ

Published:
Updated:

ಹಾಸನ: ಕಲೆಗಳನ್ನು ಯುವ ಪೀಳಿಗೆಗೆ ಕಲಿಸಿಕೊಡುವ ಕಾರ್ಯವನ್ನು ವಿದ್ವಾಂಸರು ಮಾಡಬೇಕು. ಉಳಿದ ವರು ಅವರಿಗೆ ಪ್ರೋತ್ಸಾಹ ನೀಡಬೇಕು. ಇಲ್ಲವಾದಲ್ಲಿ ಸಂಸ್ಕೃತಿಯ ಗಂಧಗಾಳಿ ಇಲ್ಲದ ಯುವ ಪೀಳಿಗೆಯನ್ನು ನೋಡಬೇಕಾಗುತ್ತದೆ~ ಎಂದು ವರ್ತಕ ಆರ್. ರಾಜಣ್ಣ ನುಡಿದರು.ನಗರದ ಮಹಾರಾಜ ಪಾರ್ಕ್‌ನಲ್ಲಿರುವ ವಿವೇಕಾನಂದ ಯೋಗ ಶಿಕ್ಷಣ ಕೇಂದ್ರದಲ್ಲಿ ಭಾನುವಾರ ಮುಂಜಾನೆ 6.30ಕ್ಕೆ ಹಮ್ಮಿಕೊಂಡಿದ್ದ ಗಂಗಮ್ಮ ಕೇಶವಮೂರ್ತಿ ಅವರ ಗಾನಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಗುರು ಎಚ್.ಬಿ. ರಮೇಶ್, `ಜನರಿಗೆ ದೇಹಾರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿ ಭಾನುವಾರ ಮುಂಜಾನೆ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಹೆಚ್ಚು ಹೆಚ್ಚು ಜನರು ಇದರ ಲಾಭ ಪಡೆಯಬೇಕು~ ಎಂದರು.ಗಂಗಮ್ಮ ಕೇಶವಮೂರ್ತಿ ಅವರು, ಅನಂತ ಚತುರ್ದಶಿಯ ಮಹತ್ವದ ಕುರಿತ ಮಹಾಭಾರತದ ಪ್ರಸಂಗವೊಂದರ ಆಯ್ದ ಭಾಗವನ್ನು ವಾಚನ ಮಾಡಿ ವಿಶ್ಲೇಷಣೆ ಮಾಡಿದರು.ಗಮಕ ಕಲಾ ಪರಿಷತ್ತಿನ ಗಣೇಶ ಉಡುಪ, ಸಮಾಜ ಸೇವಕ ಡಾ. ವೈ ಎಸ್. ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry