ಸೋಮವಾರ, ಮಾರ್ಚ್ 1, 2021
20 °C

ಸಹಕಾರಿ ಕ್ಷೇತ್ರದಲ್ಲಿ ಸಹಕಾರ ಅಗತ್ಯ: ಸುರೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಹಕಾರಿ ಕ್ಷೇತ್ರದಲ್ಲಿ ಸಹಕಾರ ಅಗತ್ಯ: ಸುರೇಶ್ ಕುಮಾರ್

ಬೆಂಗಳೂರು: `ಸಹಕಾರಿ ಕ್ಷೇತ್ರದಲ್ಲಿ ಸಹಕಾರ ಮತ್ತು ಸೌಹಾರ್ದ ಇರಬೇಕೆ ಹೊರತು ರಾಜಕೀಯ ಇರಬಾರದು. ಆದರೆ ರಾಜಕೀಯ ಕ್ಷೇತ್ರದಲ್ಲಿ ಸೌಹಾರ್ದ ಮತ್ತು ಸಹಕಾರ ಇರಬೇಕಾಗಿರುವುದು ಅಗತ್ಯ~ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ನಗರದ ಆರ್.ವಿ.ರಸ್ತೆಯಲ್ಲಿ ನಿರ್ಮಿಸಲಾಗಿರುವ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್‌ನ ನೂತನ ಕಟ್ಟಡ ಮತ್ತು ಆಡಳಿತ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.`ಸ್ಪರ್ಧಾತ್ಮಕ ದಿನಗಳಲ್ಲಿ ಶ್ರೀನಿಧಿ ಬ್ಯಾಂಕ್ ಕೇವಲ 12 ವರ್ಷಗಳಲ್ಲಿ ತನ್ನ ಸ್ವಂತ ಕಟ್ಟಡದಲ್ಲಿ ಆಡಳಿತ ಕಚೇರಿ ಮತ್ತು ಶಾಖೆ ನಿರ್ಮಿಸಿರುವುದು ಬ್ಯಾಂಕಿನ ಅಭಿವೃದ್ಧಿಯನ್ನು ತೋರಿಸುತ್ತದೆ. ಬ್ಯಾಂಕ್ ಇದೇ ರೀತಿ ಉತ್ತಮವಾಗಿ ಬೆಳೆದು ಸಾರ್ವಜನಿಕರಿಗೆ ಒಳ್ಳೆಯ ಸೌಲಭ್ಯಗಳನ್ನು ಒದಗಿಸಲಿ~ ಎಂದು ಸಚಿವರು ಹಾರೈಸಿದರು.ಬ್ಯಾಂಕಿನ ಅಧ್ಯಕ್ಷ ಸದಾಶಿವ ರೆಡ್ಡಿ ಮಾತನಾಡಿ, `ಈಗ ಬ್ಯಾಂಕು 2 ಶಾಖೆಗಳನ್ನು ಹೊಂದಿದ್ದು ಮುಂದಿನ 5 ವರ್ಷಗಳಲ್ಲಿ ಮಾರತಹಳ್ಳಿ, ಸಹಕಾರ ನಗರ ತ್ತು ಮಾಗಡಿ ರಸ್ತೆಯಲ್ಲಿ, ನೂತನ ಶಾಖೆಗಳನ್ನು ತೆಗೆಯುವುದರ ಜೊತೆಗೆ ನೂರು ಕೋಟಿಗೂ ಮಿಗಿಲಾಗಿ ದುಡಿಯುವ ಬಂಡವಾಳವನ್ನು ಕ್ರೋಡೀ ಕರಿಸಲು ಯೋಜನೆ ಹಾಕಿಕೊಳ್ಳಲಾಗಿದೆ~ ಎಂದರು.ಶಾಸಕ ಡಾ. ಹೇಮಚಂದ್ರ ಸಾಗರ್, ಬಿ.ಬಿ.ಎಂ.ಪಿ. ಸದಸ್ಯ ಅನಿಲ್ ಕುಮಾರ್, ಕರ್ನಾಟಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟರೆಡ್ಡಿ, ನಿರ್ದೇಶಕರಾದ ಜಯ ರಾಮರೆಡ್ಡಿ, ಚೆನ್ನಾರೆಡ್ಡಿ, ವೆಂಕಟರೆಡ್ಡಿ, ಸೋಮಶೇಖರರೆಡ್ಡಿ, ಶಂಕರರೆಡ್ಡಿ, ದಯಾನಂದ, ರಮೇಶ್ ವಿಜಯಾರೆಡ್ಡಿ, ಜಗನ್ನಾಥರೆಡ್ಡಿ, ಅಶೋಕ್ ಕುಮಾರ್,  ನಂಜಾರೆಡ್ಡಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.