ಭಾನುವಾರ, ಏಪ್ರಿಲ್ 11, 2021
33 °C

ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಇಲ್ಲಿನ ಮಕ್ತಲ್‌ಪೇಟೆ ಬಡಾವಣೆಯಲ್ಲಿ ಗುರುವಾರ ಮಾಜಿ ಶಾಸಕ ಎ. ಪಾಪಾರೆಡ್ಡಿ ಸಿ.ಸಿ ರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರು ಪೂರೈಕೆಗೆ ಪೈಪ್ ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.ಮಾತನಾಡಿದ ಅವರು, ಮನೋಹರ ಮಸ್ಕಿ ವಿಧಾನ ಪರಿಷತ್ ಸದಸ್ಯರಿದ್ದಾಗ ತಾವು ಮನವಿ ಮಾಡಿದ್ದರಿಂದ 5 ಲಕ್ಷ ಅನುದಾನವನ್ನು ಈ ಭಾಗದ ಅಭಿವೃದ್ಧಿ ಕೆಲಸಕ್ಕೆ ದೊರಕಿಸಿದ್ದರು. ಈಗ ಸಿಸಿ ರಸ್ತೆ, ಕುಡಿಯುವ ನೀರು ಪೂರೈಕೆ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರ.ನಾಗರಿಕರ ಪರವಾಗಿ ಯಪಶೆಟ್ಟು ಗೋಪಾಲರೆಡ್ಡಿ ಅವರು ಮಾಜಿ ಶಾಸಕ ಪಾಪಾರೆಡ್ಡಿ ಅವರನ್ನು ಸತ್ಕರಿಸಿದರು.ಬಡಾವಣೆ ನಗರಸಭೆ ಸದಸ್ಯರಾದ ಟಿ ಮಲ್ಲೇಶ, ಯು ದೊಡ್ಡಮಲ್ಲೇಶಪ್ಪ, ಎನ್ ಶ್ರೀನಿವಾಸರೆಡ್ಡಿ, ಎಸ್ ಜನಾರ್ದನರೆಡ್ಡಿ, ಬಂಗಿ ನರಸರೆಡ್ಡಿ, ಈರಣ್ಣ, ಶಶಿಧರ ಏಗನೂರು, ಸುರೇಶ, ಪೊಗಲ್ ಶ್ರೀನಿವಾಸರೆಡ್ಡಿ, ಜಿ ವಿರೇಶರೆಡ್ಡಿ, ಎನ್ ಸತ್ಯಾರೆಡ್ಡಿ, ಕೆ ರವಿ ಹಾಗೂ ಇತರರಿದ್ದರು.ವಿದ್ಯುತ್ ಉಪಕೇಂದ್ರ ಶೀಘ್ರ ಪೂರ್ಣ: ಚಂದ್ರಬಂಡಾ ಗ್ರಾಮದಲ್ಲಿ ಹೊಸದಾಗಿ 33/11 ಕೆ.ವಿ ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು 2013ರ ಜನವರಿ ಅಥವಾ ಫೆಬ್ರುವರಿಲ್ಲಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರದಾದ ಹೈದರಾಬಾದಿನ ಪ್ರದೀಪ್ ಎಂಬುವವರು ತಿಳಿಸಿದ್ದಾರೆ ಎಂದು ಜಿ.ಪಂ ಸದಸ್ಯೆ ಉಮಾದೇವಿ ಹುಲಿರಾಜ್ ಹೇಳಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, 33/11 ಕೆ.ವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಈ ಭಾಗದ ರೈತರು ಮತ್ತು ಗ್ರಾಹಕರಿಗೆ ವಿದ್ಯುತ್ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿ ಕೋರಿದ್ದರಿಂದ 4 ಕೋಟಿ ಹಣ ಬಿಡುಗಡೆ ಗೊಳಿಸಿದ್ದರು. ಆದರೆ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿರುವ ಬಗ್ಗೆ ಗುತ್ತಿಗೆದಾರರಿಂದ ವಿವರಣೆ ಕೇಳಿದಾಗ 2013ರ ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ ಎಂದು ಜಿ.ಪಂ ಸದಸ್ಯೆ ಉಮಾದೇವಿ ಹುಲಿರಾಜ್ ತಿಳಿಸಿದ್ದಾರೆ.ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದಧಿ ಕಚೇರಿಯವತಿಯಿಂದ ಭಾಗ್ಯಲಕ್ಷ್ಮಿ ಬಾಂದ್ ವಿತರಣೆ ಕಾರ್ಯಕ್ರಮ ಗುರುವಾರ ನಡೆಯಿತು.

ಸ್ಟೇಶನ್ ಪ್ರದೇಶದ 4 ವಾರ್ಡ್‌ನ 300 ಫಲಾನುಭವಿ ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್‌ಗಳನ್ನು ನಗರಸಭೆ ಸದಸ್ಯ ಯಲ್ಲಪ್ಪ, ಶಿವರಾಜ್, ಚಿಂದಪ್ಪ, ಮೊಟ್ಟಮ್ಮ ಹಾಗೂ ಜಿಂದಪ್ಪ, ಚಿನ್ನಿ ಅವರು ವಿತರಣೆ ಮಾಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಸಯ್ಯದ್ ಯಾಸಿನ್ ಮಾತನಾಡಿ, ಸರ್ಕಾರವು ಬಡ ವರ್ಗದ ಕುಟುಂಬದಲ್ಲಿ ಜನಿಸುವ ಹೆಣ್ಣು ಮಕ್ಕಳ ಜೀವನಕ್ಕೆ ಉಪಯುಕ್ತವಾಗಲು ಈ ಯೋಜನೆ ರೂಪಿಸಿದೆ. ಹೆಣ್ಣು ಮಕ್ಕಳ ವ್ಯಾಸಂಗೆ ಈ ಯೋಜನೆಯಿಂದ ಹೆಚ್ಚು ಸಹಕಾರಿಯಾಗಲಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಫಲಾನುಭವಿ ಗುರುತಿಸಬೇಕು ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.