ಭಾನುವಾರ, ಜೂನ್ 13, 2021
21 °C

ಹಿಂಸಾಚಾರ: ಲಂಕಾ ವಿರುದ್ಧ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಎಲ್‌ಟಿಟಿಇ ಹಾಗೂ ಶ್ರೀಲಂಕಾ ಸೇನೆ ನಡುವಿನ ಅಂತಿಮ ಯುದ್ಧದ ಸಂದರ್ಭದಲ್ಲಿ ಲಂಕಾ ಸೇನೆ ತಮಿಳು ನಾಗರಿಕರನ್ನು ಅಮಾನುಷವಾಗಿ ನಡೆಸಿಕೊಂಡ ಕುರಿತು ಸ್ವತಂತ್ರ ತನಿಖೆಗೆ ಅವಕಾಶ ನೀಡುವಂತೆ ಅಂತರರಾಷ್ಟ್ರೀಯ ಮಾನವ ಹಕ್ಕು ಸಂಘಟನೆಯಾದ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಆಗ್ರಹಿಸಿದೆ.

ಜಿನಿವಾದಲ್ಲಿ ಶೀಘ್ರದಲ್ಲೇ ನಡೆಯಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಸಭೆಯಲ್ಲಿ ಯುದ್ಧಕಾಲೀನ ಹಿಂಸಾಚಾರಕ್ಕೆ ಸಂಬಂಧಿಸಿ ಶ್ರೀಲಂಕಾಕ್ಕೆ ಛೀಮಾರಿ ಹಾಕುವ ಯತ್ನಗಳು ನಡೆಯುತ್ತಿರುವಾಗ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಈ ಬೇಡಿಕೆ ಮುಂದಿಟ್ಟಿದೆ.

ತಮಿಳು ಉಗ್ರರ ಜತೆಗಿನ ಅಂತಿಮ ಯುದ್ಧದಲ್ಲಿ 40 ಸಾವಿರ ತಮಿಳು ನಾಗರಿಕರು ಸತ್ತಿದ್ದಾರೆ. ದಬ್ಬಾಳಿಕೆ, ಅಕ್ರಮ ಬಂಧನ ಹಾಗೂ ನಾಪತ್ತೆ ಪ್ರಕರಣಗಳು ಈ ದ್ವೀಪ ದೇಶದಲ್ಲಿ ಸಾಮಾನ್ಯವಾಗಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ 63 ಪುಟಗಳ ವಿಸ್ತ್ರತ ವರದಿಯಲ್ಲಿ ಹೇಳಿದೆ.

ಪ್ರತಿಭಟನೆ (ಕೊಲಂಬೊ ವರದಿ): ಈ ನಡುವೆ ಶ್ರೀಲಂಕಾದ ಪ್ರಮುಖ ನಗರಗಳಲ್ಲಿ ಮಂಗಳವಾರ ನೂರಾರು ಮಂದಿ ಅಮೆರಿಕಾ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.