ಶುಕ್ರವಾರ, ಮೇ 14, 2021
31 °C

`ಹುತಾತ್ಮರ ಸ್ಮರಣಾರ್ಥ ಸಭಾಭವನ ನಿರ್ಮಿಸಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಹುತಾತ್ಮರ ಸ್ಮರಣಾರ್ಥ ಸಭಾಭವನ ನಿರ್ಮಿಸಿ'

ಮುಂಡರಗಿ: ಜಗದ್ಗುರು ಅನ್ನದಾನೀಶ್ವರ ಮಠವು ದಾನ ನೀಡಿರುವ ಸ್ಥಳದಲ್ಲಿ ಮುಂಡರಗಿ ಪುರಸಭೆಯ ಕಟ್ಟಡವನ್ನು ಕಟ್ಟಲಾಗಿದ್ದು, ಅಲ್ಲಿ ಮುಂಡರಗಿ ನಾಡ ಸ್ವಾತಂತ್ರ್ಯ ಹೋರಾ ಟಗಾರರ ಸ್ಮರಣಾರ್ಥ ಒಂದು ಉತ್ತಮವಾದ ಸ್ಮಾರಕ ಭವನ ನಿರ್ಮಿಸಬೇಕು ಮತ್ತು ಅದನ್ನು ಸೂಕ್ತವಾಗಿ ನಿರ್ವಹಿಸಿಕೊಂಡು ಹೋಗಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಲಹೆ ನೀಡಿದರು.ಸ್ಥಳೀಯ ಬೃಂದಾವನ ವೃತ್ತದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಮುಂಡರಗಿ ಉತ್ಸವದ ಸಾಂಕೇತಿಕ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ನಮ್ಮ ಯುವ ಪೀಳಿಗೆಗೆ ದೇಶ ರಕ್ಷಣೆ ಮಾಡಿದ ಮಹಾತ್ಮರ ಪರಿಚಯ ಮಾಡಿಸಿಕೊಡುವ ನಿಟ್ಟಿನಲ್ಲಿ ಪ್ರತಿ ವರ್ಷ ಮುಂಡರಗಿ ಉತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಸಾಧ್ಯವಾದರೆ ಜೂ.15 ಹಾಗೂ 16ರಂದು ಪಟ್ಟಣದಲ್ಲಿ ಜರುಗಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂಡರಗಿ ನಾಡ ಸ್ವಾತಂತ್ರ್ಯ ಕುರಿತಂತೆ ಒಂದು ಗೋಷ್ಠಿಯನ್ನು ಏರ್ಪಡಿಸ ಬೇಕು ಎಂದರು.ಹಿರಿಯ ಮುಖಂಡ ವಿ.ಎಲ್. ನಾಡಗೌಡ ಮಾತನಾಡಿ, ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಮುಂಡ ರಗಿ ಉತ್ಸವದಲ್ಲಿ ಎಲ್ಲರೂ ಪಕ್ಷಾತೀತ ವಾಗಿ, ಭಾಗವಹಿಸಿ ಅದ್ಧೂರಿಯಿಂದ ಆಚರಿಸಬೇಕು ಎಂದರು.ಪಟ್ಟಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮಳನ ನಡೆಯುತ್ತಿರುವುದರಿಂದ ಇಂದು ಸಾಂಕೇತಿಕವಾಗಿ ಮುಂಡರಗಿ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಬಿ.ಆರ್.ಯಾವಗಲ್ಲ, ಜಿ.ಎಸ್.ಪಾಟೀಲ ಮೊದಲಾದವರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ನವಂಬರ್ ತಿಂಗಳಿನಲ್ಲಿ ಮುಂಡರಗಿ ಉತ್ಸವವನ್ನು ಅದ್ದೂರಿಯಿಂದ     ಆಚರಿಸಲಾಗುವುದು ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ ತಿಳಿಸಿದರು.ಮುಖಂಡರಾದ ಎ.ಕೆ.ಬೆಲ್ಲದ,   ಎಸ್.ಬಿ.ಕೆ.ಗೌಡರ, ಕೆ.ವಿ.ಹಂಚಿನಾಳ, ಭಾಗ್ಯಲಕ್ಷ್ಮಿ ಇನಾಮತಿ, ಮಂಜುನಾಥ ಇಟಗಿ, ಎ.ಪಿ.ದಂಡಿನ, ಬಸವರಾಜ ನವಲಗುಂದ, ವೀರಣ್ಣ ಗಟ್ಟಿ, ಎಂ.ಡಿ. ಭಾವಿಮನಿ, ಬಿ.ವಿ.ಮುದ್ದಿ, ರಾಮಚಂದ್ರ ಗಾರವಾಡ, ನಾಗೇಶ ಹುಬ್ಬಳ್ಳಿ, ಪ್ರಶಾಂತಗೌಡ ಪಾಟೀಲ, ಸಿದ್ದಪ್ಪ ಮ್ಯಾಗೇರಿ, ಕೊಟ್ರೇಶ ಅಂಗಡಿ, ಎ.ಕೆ. ಮುಲ್ಲಾ, ಬಸನಗೌಡ ಪಾಟೀಲ,   ಕಾಂತರಾಜ ಹಿರೇಮಠ ಮೊದಲಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.