ಬೆಂಗಳೂರು: ‘ಸಾಹಿತ್ಯಿಕ ಪತ್ರಿಕೆ ‘ಗಾಂಧಿ ಬಜಾರ್’ ಅತ್ಯಲ್ಪ ಪ್ರಸರಣ ಸಂಖ್ಯೆಯನ್ನು ಹೊಂದಿದ್ದರೂ ಮೌಲಿಕ ಲೇಖನಗಳ ಮೂಲಕ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದೆ. ಅದರ ಹಿಂದಿನ ಶಕ್ತಿಯಾದ ಕೆ.ಎನ್. ಬಾಲಕೃಷ್ಣ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಖುಷಿ ತಂದಿದೆ’ ಎಂದು ಆದಾಯ ತೆರಿಗೆ ಇಲಾಖೆಯ ಬೆಂಗಳೂರು ವೃತ್ತದ ಮುಖ್ಯ ಆಯುಕ್ತ ಕೆ.ಸತ್ಯನಾರಾಯಣ ಹೇಳಿದರು.

ರೋಟರಿ ಬೆಂಗಳೂರು ಟೌನ್ಟೌನ್ ಸಂಸ್ಥೆ ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಕಾಶಕ, ಬರಹಗಾರ ಬಾಲಕೃಷ್ಣ ಅವರಿಗೆ ‘ರೋಟರಿ ಪಯೊನಿಯರ್’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಶಸ್ತಿಯು ಸ್ಮರಣಿಕೆ ಹಾಗೂ ಸಮ್ಮಾನ ಪತ್ರವನ್ನು ಒಳಗೊಂಡಿದೆ.

‘ನನ್ನ ಸಾಧನೆ ಹಿಂದೆ ಹಲವರ ಕೊಡುಗೆ ಇದೆ. ಪ್ರಕಾಶನದ ಕಾಯಕವನ್ನು ಅತ್ಯಂತ ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದೇನೆ. ಮಾಡಿದ ಅಲ್ಪ ಕಾರ್ಯವನ್ನು ರೋಟರಿ ಸಂಸ್ಥೆ ಗುರುತಿಸಿರುವುದು ಸಂತಸ ತಂದಿದೆ’ ಎಂದು ಪ್ರಶಸ್ತಿ ಪುರಸ್ಕೃತರಾದ ಬಾಲಕೃಷ್ಣ ತಿಳಿಸಿದರು.

ರೋಟರಿ ಜಿಲ್ಲಾ ಗವರ್ನರ್ ಎಂ. ಮಂಜುನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಬೆಂಗಳೂರು ಟೌನ್ಟೌನ್ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಶ್ರೀರಾಮ್, ಕಾರ್ಯದರ್ಶಿ ಕಲ್ಪನಾ ಶ್ರೀಲಲಿತಾ ಮತ್ತು ನಿರ್ದೇಶಕ ಸುರೇಶ್ ಟೋಟಾ ವೇದಿಕೆ ಮೇಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.