ಹುಮನಾಬಾದ್: ಮನುಷ್ಯನಲ್ಲಿ ಮಾನವೀಯ ಮೌಲ್ಯ ಬಿತ್ತುವುದೇ ನಿಜವಾದ ಸಾಹಿತ್ಯ ಎಂದು ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಹೇಳಿದರು.

ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಭವ್ಯ ಸಂಸ್ಕೃತಿ ಹಾಗೂ ಪರಂಪರೆಗಳ ಮೂಲಕ ವಿಶ್ವದ ಗಮನ ಸೆಳೆದಿದ್ದ ಭಾರತ ದೇಶ ಇಂದು ವಿಶ್ವದ ಅಪಾಯಕಾರಿ ದೇಶಗಳಲ್ಲಿ 4ನೇ ಸ್ಥಾನದಲ್ಲಿ ಇರುವುದು ಸಮೀಕ್ಷೆವೊಂದು ತಿಳಿಸಿದೆ. ಇದು ಭಾರತದ ಮಟ್ಟಿಗೆ ಆತಂಕಕಾರಿ ಸಂಗತಿ ಎಂದರು.

ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ ಪ್ರವೇಶಸಿದ್ದು ಆರೋಗ್ಯಕರ ಬೆಳವಣಿಗೆ ಅಲ್ಲ. ಭ್ರಷ್ಟಚಾರ ಬುಡಸಮೇತ ಕಿತ್ತಸೆಯದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ರಾಜಶೇಖರ ಬಿ.ಪಾಟೀಳ, ಭಾಲ್ಕಿ ಹಿರೇಮಠದ ಬಸವಲಿಂಗಪಟ್ಟದ್ದೇವರು, ಹಿರೇಮಠದ ಗಂಗಾಧರ ಸ್ವಾಮೀಜಿ, ಹಿರಿಯ ಸಾಹಿತಿಗಳಾದ ಬಿ.,ಎಸ್.ಖೂಬಾ, ಕಾಶಿನಾಥರೆಡ್ಡಿ, ಪ್ರೊ. ಸೂಗಯ್ಯ ಹಿರೇಮಠ್, ಸ್ನೇಹಿ ಡಿ.ಎಂ.ಆರ್ಯ, ಸಮ್ಮೇಳನ ನಿಕಟಪೂರ್ವ ಅಧ್ಯಕ್ಷ ಡಾ.ಮಾಣಿಕರಾವ ಧನಾಶ್ರಿ, ಸಮ್ಮೇಳನ ಸರ್ವಾಧ್ಯಕ್ಷ ಶಿವಸ್ವಾಮಿ ಚಿನಕೇರಿ, ಜಿ.ಪಂ ಕೃಷಿ, ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಗದೇವಿ ಪ್ರಕಾಶ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗಜೇಂದ್ರ ಕನಕಟಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.