‘ಯೋಗ’ ಅರಿತರೆ 100 ವರ್ಷ

ಶುಕ್ರವಾರ, ಜೂಲೈ 19, 2019
24 °C

‘ಯೋಗ’ ಅರಿತರೆ 100 ವರ್ಷ

Published:
Updated:

ದೇಹವನ್ನು ಆರೋಗ್ಯವಾಗಿಡುವ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬುವ, ಮನಸು ಸದೃಢಗೊಳಿಸಬಲ್ಲ ಶಕ್ತಿ ಯೋಗಕ್ಕಿದೆ. ಯೋಗದ ಪರಿಣಾಮ ಖಚಿತ. ಆದರೆ ಸಾಧನೆ ಸತತವಾಗಿರಬೇಕು. ಮುಖ್ಯವಾಗಿ ತಾಳ್ಮೆ ಬೇಕು. ಅಂದಹಾಗೆ ಜೂನ್‌ 21 ವಿಶ್ವ ಯೋಗ ದಿನ.

ವಾಯುವಿಹಾರ, ವ್ಯಾಯಮ, ಓಟ, ಕ್ರೀಡೆಗಳು, ಜಿಮ್‌ನಲ್ಲಿ ದೈಹಿಕ ಕಸರತ್ತು, ಯೊಗಾಭ್ಯಾಸ, ಆಸ್ಪತ್ರೆಯತ್ತ ಓಟ.  ಆರೋಗ್ಯ ರಕ್ಷಣೆಗೆ ‘ಸಾಮಾನ್ಯ’ ಮನುಷ್ಯರ ಪಾಲಿಗೆ ಇರುವ ಆಯ್ಕೆಗಳು ಇವು. ಸೋಂಬೇರಿತನವೇ ಮೈವೆತ್ತ ಮೂರ್ತಿಯಂತಿರುವ ಮನುಷ್ಯ ಇಂಥ ಸಂದರ್ಭದಲ್ಲಿ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ. ಹಣ ತೆತ್ತರೆ ಆಸ್ಪತ್ರೆಯಲ್ಲಿ ಏನೆಲ್ಲಾ ಚಿಕಿತ್ಸೆಗಳುಂಟು ಎಂಬ ‘ಸುಲಭ ಮಾರ್ಗ’ ಆಯ್ದುಕೊಳ್ಳುತ್ತಾನೆ.

ಇದರ ಬದಲಿಗೆ, ‘ಹಣವನ್ನೂ ಉಳಿಸಿ ಆರೋಗ್ಯವನ್ನು ಗಳಿಸಿ’, ‘ಯೋಗ ಮಾಡಿ ಆರೋಗ್ಯ ಪಡೆಯಿರಿ’ ಎಂಬ ಇನ್ನುಳಿದ ಆಯ್ಕೆಗಳಿಗೆ ಮನುಷ್ಯ ಸುಲಭವಾಗಿ ಒಗ್ಗಿಕೊಳ್ಳುತ್ತಿಲ್ಲ. ಒಂದಲ್ಲ ಒಂದು ಒತ್ತಡ, ಆತಂಕಗಳಲ್ಲಿ ‘ನಗರವೆಂಬ ಕಾಂಕ್ರಿಟ್ ಕಾಡಿ’ನಲ್ಲಿ ಬದುಕು ದೂಡುತ್ತಿರುವ ಜನರು, ತಮಗೆ ಯಾವಾಗಲೋ ಬಿಡುವಿದ್ದಾಗ ಹದಿನೈದು ದಿನಗಳಿಗೆ ಒಮ್ಮೆ ಅರ್ಧ ಗಂಟೆ, ‘ವೀಕೆಂಡ್’ಗಳಲ್ಲಿ ಒಂದಷ್ಟು ಕಸರತ್ತು, ಯೋಗಾಸನ, ಓಟ ಇತ್ಯಾದಿ ಮಾಡುತ್ತಾರೆ.

ಅಭ್ಯಾಸ ನಡೆಸಿದ್ದು ಕಡಿಮೆ ಸಮಯವಾದರೂ ಇದರಿಂದಲೇ ಎಲ್ಲವೂ ಸಾಧ್ಯವಾಗಬೇಕು ಎಂಬ ಬಹು ನಿರೀಕ್ಷೆ ಅವರದ್ದು. ಆರೋಗ್ಯದ ಗುಟ್ಟು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ನಿಗ್ರಹಿಸಿದ ‘ಮನಸ್ಸು’ ಹಾಗೂ ‘ಸರ್ವಾಂಗ ಸುಂದರ’ವಾದ ಕಾಯವನ್ನು ಹೊಂದುವುದೇ ಆರೋಗ್ಯ. ಆರೋಗ್ಯದ ಈ ಗುಟ್ಟನ್ನು ಹೇಳಿರುವುದೇ ಯೋಗ. ಕೆಲ ಆಸನಗಳನ್ನಷ್ಟೇ ಅಭ್ಯಾಸ ಮಾಡಿ, ನಾನೂ ಯೋಗ ಮಾಡ್ತೇನೆ ಎಂದು ಬೀಗುವವರು ಅದೆಷ್ಟೋ ಮಂದಿ ಇದ್ದಾರೆ. ಇಂಥವರು ಆಸನಗಳ ಅಭ್ಯಾಸ ಯೋಗದ ಎಂಟು ಅಂಗಗಳ ಪೈಕಿ ಮೂರನೆಯದ್ದು ಎಂಬುದನ್ನು ಮನಗಾಣಬೇಕು.

ಅಷ್ಟಾಂಗ ಯೋಗ

ಅಷ್ಟಾಂಗ ಎಂದರೆ ಎಂಟು ವಿಭಾಗ ಅಥವಾ ಸಾಧನೆಯ ಮೆಟ್ಟಿಲುಗಳು ಎಂದರ್ಥ. ಅವೆಂದರೆ... ಯಮ, ನಿಯಮ, ಆಸನ,  ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ,  ಧ್ಯಾನ, ಸಮಾಧಿ. ಸಮಾಧಿ ಸ್ಥಿತಿಯಲ್ಲಿ ಧ್ಯಾನಸ್ಥ ಮನಸ್ಸಿನ ಮೂಲಕ ಆತ್ಮ ಚೈತನ್ಯವು ದೇಹವನ್ನು ತೊರೆದು ಅನಂತಾತೀತದೆಡೆಗೆ ಸಾಗುವ ಸ್ಥಿತಿ ಮುಟ್ಟಲು ಸಾಧ್ಯವಿದೆ. ಈ ಸ್ಥಿತಿ ಮುಟ್ಟುವುದು ಯೋಗದ ಮುಖ್ಯ ಉದ್ದೇಶ.

ಹತ್ತಾರು ಬಗೆಯ ಯೋಗ

‘ಇಲ್ಲೇ ಡ್ರಾ; ಈಗಲೇ ಬಹುಮಾನ’ ಎನ್ನುವಂತೆ ಎಲ್ಲದಕ್ಕೂ ತಕ್ಷಣಕ್ಕೆ ಪ್ರತಿಫಲ ನಿರೀಕ್ಷೆ ಇಂದಿನ ಯುವಜನರಲ್ಲಿದೆ. ಇದರ ಬೆನ್ನುಬಿದ್ದಿರುವ ಯುವ ಜನರನ್ನು ಹಾಗೂ ವಿದೇಶಿಯರನ್ನು ಯೋಗದತ್ತ ಸೆಳೆಯುವ ನಿಟ್ಟಿನಲ್ಲಿ ಹಲವು ಬಗೆಯ ಯೋಗಾಸನ ವಿಧಾನಗಳು ಟಿಸಿಲೊಡೆಯುತ್ತಿವೆ. ಪರಂಪರಾಗತವಾಗಿ ಜ್ಞಾನ ಯೋಗ, ಭಕ್ತಿಯೋಗ, ಕರ್ಮಯೋಗ ಹಾಗೂ ರಾಜಯೋಗಗಳು ಆಚರಣೆಯಲ್ಲಿವೆ. ಜ್ಞಾನ, ಭಕ್ತಿ, ಕರ್ಮ ಈ ಹೆಸರುಗಳೇ ಅವುಗಳ ಅರ್ಥವನ್ನು ಸೂಚಿಸಿವೆ. ಪತಂಜಲಿ ಮುನಿ ಸೂಚಿಸಿರುವ ಅಷ್ಟಾಂಗ ಯೋಗದ ಆಚರಣೆಯೇ ರಾಜಯೋಗ.

ಇದರ ಜೊತೆಗೆ ‘ಡೈನಾಮಿಕ್’ ಯೋಗ, ‘ಪವರ್’ ಯೋಗ, ‘ಮ್ಯೂಸಿಕ್’ ಯೋಗ, ‘ಆರ್ಟಿಸ್ಟಿಕ್’ ಯೋಗ, ‘ಮೈಂಡ್ ಬ್ಲೋ’ ಯೋಗ, ‘ಪ್ರಾಣಿಕ್‘ ಯೋಗ, ‘ನೃತ್ಯ’ ಯೋಗ, ‘ಬ್ರೈನ್’ ಯೋಗ –ಹೀಗೆ, ಹಲವು ಬಗೆಯ ಯೋಗಗಳು ಚಾಲ್ತಿಯಲ್ಲಿವೆ. ಇವುಗಳ ಉದ್ದೇಶ ಆರೋಗ್ಯ ಕಾಳಜಿ. ಆದರೆ, ಯೋಗದ ಹೆಸರಿನಲ್ಲಿ ಬರೀ ಆಸನಗಳ ಅಭ್ಯಾಸವನ್ನು ವೇಗವಾಗಿ ಹಾಗೂ ಶ್ರಮದಿಂದ ಕೂಡಿರುವಂತೆ ಮಾಡಿಸುವ ದೈಹಿಕ ಕಸರತ್ತು ಹೊಸ ವಿಧಾನದಲ್ಲಿ ಎದ್ದು ಕಾಣುತ್ತದೆ.

‘ಪ್ರತಿ ಮನೆಗೂ ಯೋಗ ತಲುಪಬೇಕು. ಯೋಗಾಭ್ಯಾಸಕ್ಕೆ ಪ್ರತಿದಿನ ಒಂದು ಗಂಟೆ ಮೀಸಲಿಡಿ. ದಿನದ ಉಳಿದ 23 ಗಂಟೆಯನ್ನು ಸಮರ್ಥವಾಗಿ ನಿರ್ವಹಿಸುವ ಶಕ್ತಿ ಯೋಗಾಭ್ಯಾಸದಿಂದ ಲಭಿಸುತ್ತದೆ. ಪತಂಜಲಿ ಮುನಿ ಪ್ರಣೀತ ಅಷ್ಟಾಂಗ ಯೋಗದ ಪರಿಕಲ್ಪನೆಯ ಅಭ್ಯಾಸ ನಡೆಸುವುದು ಒಳಿತು’

 

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇವನ್ನೂ ಓದಿ....

ವಿಶ್ವ ಯೋಗ ದಿನ | ಆರೋಗ್ಯಯುತ ವಿಶ್ವಕ್ಕೆ ಯೋಗ

ಯೋಗ ಶುರು ಮಾಡೋಣ...

ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ ವ್ಯತ್ಯಾಸ!

ಸೂರ್ಯ ನಮಸ್ಕಾರ ಕಲಿಯೋಣ ಬನ್ನಿ...

ಚೈತನ್ಯ ತುಂಬುವ ಪ್ರಾಣಾಯಾಮ

ಸಮಚಿತ್ತದ ಬೇರು ‘ಧ್ಯಾನ’

‘ಯೋಗ’ ಅರಿತರೆ 100 ವರ್ಷ

ಯೋಗಮಯವಾದ ಮೈಸೂರು ಅರಮನೆ

ಯೋಗ ಶುರು ಮಾಡೋಣ...​

ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ ವ್ಯತ್ಯಾಸ!​

ಯೋಗಕ್ಕೂ ಮುನ್ನ ಮಾಡಿ ವಾರ್ಮ್‌ ಅಪ್​

ಸೂರ್ಯ ನಮಸ್ಕಾರ ಏಕೆ?​

ಸೂರ್ಯ ನಮಸ್ಕಾರದ ಲಾಭಗಳು

 

ಸೂರ್ಯ ನಮಸ್ಕಾರ ಕಲಿಯೋಣ ಬನ್ನಿ...​1

* ಸೂರ್ಯ ನಮಸ್ಕಾರ ಅಭ್ಯಾಸ ಕ್ರಮ 2

ಮಕ್ಕಳ ಗೂನುಬೆನ್ನು ನಿವಾರಣೆಗೆ ಆಸನಗಳು

ಬೆನ್ನೆಲುಬು, ಕಿಬ್ಬೊಟ್ಟೆಯ ಆರೋಗ್ಯಕ್ಕೆ ಮಂಡಲಾಸನ

ಹೃದಯಕ್ಕೆ ಮೃದು ಅಂಗಮರ್ಧನ ನೀಡುವ ಕಪೋತಾಸನ

ಮಂಡಿ, ಕೀಲು ನೋವು ನಿವಾರಣೆಗೆ ಘೇರಂಡಾಸನ

ದುರ್ಗಂಧ ಶ್ವಾಸ ತಡೆಗೆ ಆಸನಗಳು

ಹೊಟ್ಟೆಯಲ್ಲಿನ ದುರ್ಮಾಂಸ ನಿವಾರಣೆಗೆ ಆಸನಗಳು

ಭುಜ - ಕಾಲುಗಳ ಬಲಕ್ಕೆ ವೀರ ಭದ್ರಾಸನ

ಜನನೇಂದ್ರಿಯ ಆರೋಗ್ಯ ಸುಸ್ಥಿತಿಗೆ ಸಮಕೋನಾಸನ

ಜ್ಞಾಪಕ ಶಕ್ತಿ ಹೆಚ್ಚಿಸುವ ಆಸನಗಳು

ಬೇಸಿಗೆಯಲ್ಲಿ ದೈಹಿಕ ಬಳಲಿಕೆ ನಿವಾರಣೆ ಹೇಗೆ?

ಕುದುರೆ ಸವಾರಿಗೆ ಸಹಕಾರಿ ಉತ್ಕಟಾಸನ

ಮನೋಬಲ ವೃದ್ಧಿಸುವ ಊರ್ಧ್ವ ಧನುರಾಸನ

ಮಹಿಳೆಯರೇ, ಯೋಗಾಭ್ಯಾಸಕ್ಕೆ ಮುನ್ನ ಈ ಮುನ್ನೆಚ್ಚರಿಕೆ ಗಮನಿಸಿಕೊಳ್ಳಿ

ಜೀರ್ಣಶಕ್ತಿ ವೃದ್ಧಿಗೆ ಶಲಭಾಸನ

ತಾರುಣ್ಯ ವೃದ್ಧಿಗೆ ಧನುರಾಸನ ಹಂತಗಳು

ಹೊಟ್ಟೆನೋವು ನಿವಾರಕ ಧನುರಾಸನ

ಥೈರಾಯ್ಡ್‌, ಉಸಿರಾಟ ಸಮಸ್ಯೆ ನಿವಾರಕ ಮತ್ಸ್ಯಾಸನ

ಚಳಿ ತಡೆವ ಯೋಗನಿದ್ರಾಸನ

ಸಕ್ಕರೆ ಕಾಯಿಲೆಗೆ ರಾಮಬಾಣ ಮಯೂರಾಸನ

ಸರ್ವಾಂಗಾಸನದ ವಿವಿಧ ಹಂತಗಳ ಪರಿಚಯ

ಸರ್ವ ರೋಗಗಳಿಗೂ ಮದ್ದು ಸರ್ವಾಂಗಾಸನ

ದೈಹಿಕ ಸದೃಢತೆ ನೀಡುವ ಸರ್ವಾಂಗಾಸನ ಹಂತಗಳು

ಸರ್ವಾಂಗಾಸನದ ಹಂತಗಳು

ಅಂಧ ಮಕ್ಕಳ ಯೋಗಾಯೋಗ !

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry