ಡಿ.ಕೆ.ಶಿವಕುಮಾರ್ ಎಂಬ ಹೆಸರು ಕೇಳಿದರೆ ಸಾಕು, ಕರ್ನಾಟಕದ ಜನರಂತೂ ಸರಿ, ಇಡೀ ಭಾರತದ ಸಾಕಷ್ಟು ರಾಜಕೀಯದ ಆಗು ಹೋಗುಗಳ ಬಗ್ಗೆ ಅರಿವು ಹಾಗೂ ಆಸಕ್ತಿಯನ್ನು ಹೊಂದಿದ ಜನರ, ಪತ್ರಿಕಾಕರ್ತರ, ಶಿವಕುಮಾರ್ ವಿರೋಧಿಗಳ, ಶಿವಕುಮಾರ್ ಅಭಿಮಾನಿಗಳ ಕಿವಿ ನಿಮಿರುತ್ತದೆ. ಯಾವ ಸಮಸ್ಯೆಯೇ ಇರಲಿ, ಸೆಡ್ಡು ಹೊಡೆದು ನಿಲ್ಲುವುದು ಡಿಕೆಶಿ ಜಾಯಮಾನ ಎನ್ನುವುದು, ಸಾಮಾನ್ಯವಾಗಿ ಅವರ ಬಗೆಗೆ ಜನರು ಹೊಂದಿದ ಅಭಿಪ್ರಾಯ. ಜತೆಗೆ ಕನಕಪುರದ ಬಂಡೆ ಎಂಬ ವಿಶೇಷಣವೂ ಕೂಡಾ ಅವರ ಪಾಲಿಗೆ ದತ್ತವಾಗಿದೆ. ಎಲ್ಲಾ ಸಂದರ್ಭಗಳಲ್ಲಿಯೂ ಹೈಕಮಾಂಡ್ ಹೊರಿಸಿದ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸುವ ವಿಚಾರದಲ್ಲಿ ಶಿವಕುಮಾರ್ ಬಸವಳಿಯಲಾರರು ಎಂಬುದು ಪಕ್ಷದ ನಂಬಿಕೆ. ಆದಾಗ್ಯೂ ಕರ್ನಾಟಕದ ಸದ್ಯದ ರಾಜಕೀಯದ ಸಂದರ್ಭದಲ್ಲಿ ಶಿವಕುಮಾರ ಅವರ ಜಾತಕದ ಗ್ರಹಗಳು ಯಾವ ಅಂಶಗಳನ್ನು ಬಚ್ಚಿಟ್ಟುಕೊಂಡಿವೆ ಎಂಬುದನ್ನು ತಿಳಿಯಲು ಹಲವರಿಗೆ ಕುತೂಹಲವಿದೆ. ಅವರ ಹಿತೈಷಿಗಳು ಶಿವಕುಮಾರ್ ಮುಖ್ಯ ಮಂತ್ರಿ ಆಗಬೇಕು ಎಂದು ಆಶಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಶಿವಕುಮಾರ್ ಜನ್ಮ ಕುಂಡಲಿಯ ಮೂಲಕವೇ ಈಗ ಅವರ ಕುಂಡಲಿಯ ಗ್ರಹಗಳ ವಿಶ್ಲೇಷಣೆ ಮಾಡೋಣ. ಅವರ ಮಹತ್ತರವಾದ ಗುರಿ ತಲುಪುವ ದಾರಿ ಸದ್ಯ ಸುರಳೀತವೆ? ಅಥವಾ ಕಷ್ಟಕರವೆ? ಯಾವುದು, ಯಾವಾಗ, ಯಾಕೆ, ಹೇಗೆ, ಎಷ್ಟರಮಟ್ಟಿಗೆ ಅವರ ಮಹತ್ವಾಕಾಂಕ್ಷೆಗಳನ್ನು ಸುಲಭವಾಗಿಸಬಹುದು ಅಥವಾ ಜಟಿಲಗೊಳಿಸಬಹುದು ಎಂಬುದನ್ನು ತಿಳಿಯುವ ಪ್ರಯತ್ನ ಇಲ್ಲೀಗ ಮಾಡೋಣ.

ಸದ್ಯದ ಶನಿ ದಶಾಕಾಲ: ಶನಿ ಕಾಟಗಳು ಬೇರೆ. ಶನಿ ಕಾಟದ ಬಾಧೆ ಅವರ ಜಾತಕದಲ್ಲಿ ಸದ್ಯ ಇಲ್ಲ. ಯಾವಾಗ ವಿಶಿಷ್ಟವಾದ ತಾಂತ್ರಿಕ ಸಂಘರ್ಷ ಶನಿ ಮತ್ತು ಚಂದ್ರ ಗ್ರಹಗಳ ನಡುವೆ ಸಂಭವಿಸುತ್ತದೋ ಆಗ ಸಾಡೇಸಾತಿ, ಪಂಚಮ, ಅಷ್ಟಮ ಎಂಬಿತ್ಯಾದಿ ಶನಿ ಕಾಟಗಳು ಬರುತ್ತವೆ. ಯಾವ ವ್ಯಕ್ತಿಯ ವಿಚಾರದಲ್ಲೇ ಇರಲಿ, ಮೂವತ್ತು ವರ್ಷಗಳ ಅವಧಿಯಲ್ಲಿ ಒಟ್ಟೂ ಹನ್ನೆರಡೂ ವರ್ಷಗಳ ಅವಧಿಯ ಕಾಲ ಶನಿ ಕಾಟದ ದುರ್ಭರ ಸಂದರ್ಭ ಎದುರಾಗಿಯೇ ತೀರುತ್ತದೆ. 2017ರಲ್ಲಿ ಶಿವಕುಮಾರ್ ವಿಷಯದಲ್ಲಿ ಎದುರಾಗಿದ್ದ ಅಷ್ಟಮ ಶನಿ ಕಾಟ ಅವರನ್ನು ತುಂಬಾ ಪ್ರಮಾಣದಲ್ಲಿ ಕಾಡಿತ್ತು. ತಿಹಾರ್ ಜೈಲಿಗೂ ಕೂಡಾ ಹೋಗಿ ಬರುವ ವಿಚಾರದವರೆಗೆ ತಲುಪಿದ್ದು ಈಗ ಇತಿಹಾಸ. ಬಂಧನದ ವಿಚಾರ ಅವರನ್ನು ಕಾಡಿದ್ದು ಅವರ ಜಾತಕದಲ್ಲಿ ಸಂಯೋಜನೆಗೊಂಡ ಪಾಶ ಯೋಗದಿಂದಾಗಿ.

ಈಗ ಸದ್ಯ ಶನಿ ಕಾಟವಿಲ್ಲ. (ಇನ್ನೂ ಎರಡೂವರೆ ವರ್ಷಗಳ ನಂತರ ಸಾಡೇಸಾತಿ ಶನಿ ಕಾಟದ ಕಾಲ ಬರುತ್ತದೆ.) ಆದರೆ ಸದ್ಯ ಇನ್ನೂ ಸುಮಾರು ಎಂಟೂವರೆ ವರ್ಷಗಳ ಕಾಲ ಶನಿ ದಶಾ ಕಾಲ ಶಿವಕುಮಾರ್ ಅವರ ಜಾತಕದಲ್ಲಿ ನಡೆಯುತ್ತಿದೆ. ಶನಿ ಕಾಟವೇ ಬೇರೆ. ಶನಿ ದಶಾವೇ ಬೇರೆ. ಶಿವಕುಮಾರ್ ಜಾತಕದಲ್ಲೂ ಶನಿ ಮಹಾರಾಜ ಕರ್ಮ ಸ್ಥಾನದ ಯಜಮಾನನಾಗಿ, ಹಲವು ಪ್ರಾಪ್ತಿಗಳಿಗೆ ಕಾರಣನಾಗುವ ಬಲಿಷ್ಠವಾದ ಗ್ರಹ ಹೌದಾದರೂ, ಕೆಲವು ಮಿತಿಗಳನ್ನೂ ಪಡೆದಿರುತ್ತಾನೆ. ಪ್ರಧಾನವಾದ ಮಿತಿ ಏನೆಂದರೆ ಅನೇಕ ಸಕಾರಾತ್ಮಕ ಬೆಳವಣಿಗೆಯ ದಿಕ್ಕಿನ ಸಾಧ್ಯತೆಗಳಿಗೆ ಕಾರಣವಾಗಬಹುದಾದ ಶನಿ ಗ್ರಹ, ಕುಜ ಗ್ರಹದಿಂದಾಗಿ ಹಲವು ವಿಪ್ಲವಗಳನ್ನು ಹೊಂದಿದೆ.

ಶನಿ ಗ್ರಹಕ್ಕೆ ಯಾವ ವಿಚಾರದಲ್ಲೂ ಒಳಿತಲ್ಲದ ಕುಜ ಗ್ರಹದ ದೃಷ್ಟಿಯ ಉರಿಯಿಂದಾಗಿ ಶನಿ, ಉಸಿರುಗಟ್ಟಿದ ಸ್ಥಿತಿ ಹೊಂದಿದ್ದಾನೆ. ಇದೊಂದು ರೀತಿಯ ನರಳುವಿಕೆ. ಮೂಲ ಜಾತಕದಲ್ಲಿ ಸ್ಥಾಯಿಯಾದ ಈ ಒಂದು ಜಟಿಲವಾದ ಸ್ಥಿತಿಯೇ, ಶನಿ ಗ್ರಹ ಒದಗಿಸಬೇಕಾದ ಒಳಿತಿಗೆ ತಡೆ ತರುವಂತಾಗಿದೆ. ಹಾಗೆಯೇ ಶಿವಕುಮಾರ್ ಅವರ ವರ್ಚಸ್ಸಿಗೆ ಕಲಶಪ್ರಾಯನಾದ ಕುಜನೂ ಕೂಡ ಶನಿ ಗ್ರಹದ ದೃಷ್ಟಿಯಿಂದಾಗಿ ಪರದಾಡುವ ಸ್ಥಿತಿ ಮೂಲ ಜಾತಕದಕಲ್ಲಿ ಇದೆ. ಹೀಗೆ ಎರಡು ಬಹು ಮಹತ್ವದ ಗ್ರಹಗಳ ಪರಸ್ಪರ ದೃಷ್ಟಿ ಯುದ್ಧದಿಂದ ಲೀಲಾಜಾಲವಾಗಿ ಬಯಸಿದ್ದನ್ನು ಪಡೆಯುವ ಅದೃಷ್ಟ ಹಾಗೆ ಸರ್ರನೇ ಕೂಡಿಬರುವುದು ಶಿವಕುಮಾರ್ ಅವರಿಗೆ ದುಸ್ತರವಾಗುತ್ತದೆ.

ಶನಿ ಗ್ರಹದ ಬಲ ಕುಜನಿಂದಾಗಿ ಕರಗಿದ್ದು ಹಾಗೂ ಕುಜ ಗ್ರಹದ ಬಲ ಶನಿಯಿಂದಾಗಿ ಕುಸಿದಿರುವುದರ ಜತೆಗೆ ಮೂಲ ಜಾತಕದದಲ್ಲಿ ರವಿ, ಚಂದ್ರ ಹಾಗೂ ಬುಧ ಗ್ರಹಗಳು ಒಂದೇ ಮನೆಯಲ್ಲಿ ಸ್ಥಿತರಾಗುವುದರ ಮೂಲಕ ಶತ್ರು ವಲಯ ಹಿಗ್ಗುವಂತೆ ಚಂದ್ರ ಮತ್ತು ಬುಧರ ನಡುವೆ ಸಂಘರ್ಷ ತನ್ನಿಂದ ತಾನೇ ಎದ್ದು ಬರುತ್ತದೆ. ಸೂರ್ಯನ ಬಹಳಷ್ಟು ಹತ್ತಿರದಲ್ಲಿ ಚಂದ್ರನಿರುವುದರಿಂದ ಚಂದ್ರನ ಕಾಂತಿ ಮಂಕಾಗಿದೆ. ಸೂರ್ಯನೂ ದುಸ್ಥಾನಗಳ ಯಜಮಾನನಾದ ಬುಧನ ಜತೆಗಿರುವುದು, ಅದರಲ್ಲೂ ಶತ್ರು ಗ್ರಹವಾದ ಶುಕ್ರ ಗ್ರಹದ ಒಡೆತನದ ವೃಷಭ ರಾಶಿಯಲ್ಲಿ ಸೂರ್ಯ ಇದ್ದಿರುವುದು ವೈರಿಗಳನ್ನು ನಿಯಂತ್ರಿಸಲು ಬೇಕಾದ ಚಾಣಾಕ್ಷತೆಯನ್ನು ಕೆಲವು ಸಲ ರೂಪಿಸಿಕೊಳ್ಳುವಲ್ಲಿ ಶಿವಕುಮಾರ್ ಅವರಿಗೆ ಹಿನ್ನಡೆ ಎದುರಾಗುತ್ತದೆ. ಯಾರು ಬಲಿಷ್ಠರೋ ಅವರ ಪಾಲಿಗೆ ಶತ್ರುಗಳ ಸಂಖ್ಯೆ ಸಹಜವಾಗಿ ಅಧಿಕವಾಗಿರುತ್ತದೆ ಎಂಬ (ಶಿವಕುಮಾರ್ ಈ ಮಾತನ್ನು ಅನೇಕ ಸಲ ಹೇಳುತ್ತಿರುತ್ತಾರೆ.) ಅವರ ನಿಲುವು ಸತ್ಯವಾದರೂ ಶತ್ರು ವಲಯವನ್ನು ಕಡಿಮೆ ಮಾಡಿಕೊಳ್ಳುವ ತಂತ್ರಗಾರಿಕೆಯಲ್ಲಿ ಅವರು ಸರ್ವಥಾ ಹಿಂದೆ ಬೀಳಲೇಬಾರದು.

ಈ ತಂತ್ರಗಾರಿಕೆಗಾಗಿನ ಸರ್ವತ್ರ ಸಂಪನ್ನವಾದ ನಿಕ್ಷೇಪ ಅವರ ವ್ಯಕ್ತಿತ್ವದಲ್ಲಿ ಇದ್ದರೂ, ಅವರಿಗೆ ನಿಯಂತ್ರಿಸಲು ಸಾಧ್ಯವಾಗದ ಕೆಲ ಸಂದರ್ಭಗಳ ಗತ್ತಿನ ನಡೆಗಳು ಶತ್ರು ಪಾಳಯದ (ಶತ್ರುವಿನ ಶತ್ರು ಒಬ್ಬನಿಗೆ ಮಿತ್ರನಾಗುತ್ತಾನೆ ಎಂದು ಚಾಲ್ತಿಯಲ್ಲಿರುವ ಮಾತು ನಂಬುವುದಾದರೆ) ಬಲಕ್ಕೆ ಬೇಕಾದ ಕಸುವನ್ನು ಒದಗಿಸಿ ಬಿಡುತ್ತದೆ. ಇಷ್ಟಾದರೂ ಗಾಣಪತ್ಯ ಸಂತುಲಿತವಾದ ಕೇತು ಗ್ರಹದ ಬಲ, ಶಿವಕುಮಾರ್ ಅವರನ್ನು ಸುಲಭವಾಗಿ ಹಣಿಯಲು ವೈರಿ ಪಾಳಯಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಚತುರ ವಾಗ್ಮಿಯಾಗಬಲ್ಲ ಮಾತುಗಳನ್ನು ಇನ್ನೂ ಇಷ್ಟು ಪರಿಣಾಮಕಾರಿಯಾಗಿ ಆಡುವ ನಿಟ್ಟಿನಲ್ಲಿ ಶಿವಕುಮಾರ್ ಕ್ರಿಯಾಶೀಲರಾದರೆ, ವಾಕ್ ಸ್ಥಾನವಾದ ವೃಷಭ ರಾಶಿಯಲ್ಲಿ ಸ್ಥಿತರಾದ ಬುಧ, ಚಂದ್ರ, ರವಿ ಗ್ರಹ ಮುಖೋದ್ಗತವಾದ ಪರಸ್ಪರರ ತಿಕ್ಕಾಟಗಳನ್ನು ನಿಯಂತ್ರಿಸಬಹುದಾಗಿದೆ. ಶುಕ್ರ ಗ್ರಹ ತನ್ನ ಉಚ್ಚ ರಾಶಿಯಾದ ಮೀನ ರಾಶಿಯಲ್ಲಿ ಇರುವುದರಿಂದ ನಿರರ್ಗಳವಾಗಿ ಲಲಿತಾ ಸಹಸ್ರ ನಾಮ ಪಠಣ ಮಾಡುವ ಅಂಶವನ್ನು ಸಿದ್ಧಿಸಿಕೊಳ್ಳಬೇಕು. ಇದರಿಂದಾಗಿ ಶಿವಕುಮಾರ್ ಅವರ thought process, ಉತ್ತಮ ವಾಗ್ಮಿಯಾಗಿಯೂ ಹೊರ ಹೊಮ್ಮಲು ಸರ್ವೋಚ್ಚ ಸಿದ್ಧಿ ಸಿಕ್ಕಿಯೇ ಸಿಗುತ್ತದೆ.

ಶುಕ್ರನ ಬಲ ಎಷ್ಟು ಪ್ರಬಲವಾಗಿದೆ ಶಿವಕುಮಾರ್ ಜಾತಕದಲ್ಲಿ ಎಂದರೆ ಎಂಥದೇ ಶತ್ರುವನ್ನೂ ದುರ್ಬಲಗೊಳಿಸುವ ಮೂಲ ಬೀಜಾಕ್ಷರ ಪಲ್ಲವ ಶಕ್ತಿಯನ್ನು (ಜಲ ರಾಶಿಯಾದ) ಮೀನ ರಾಶಿಯ ರೇವತಿ ನಕ್ಷತ್ರದ ಅನನ್ಯತೆಯಿಂದ ಅದು ಪಡೆದಿದೆ. ಪೂರ್ವ ಪುಣ್ಯ ಸ್ಥಾನದಲ್ಲಿ ರಾಹು ಗ್ರಹ ಕೂಡಾ ಶುಕ್ರ ಸಿದ್ಧಿಯನ್ನು ಪಡೆದಿದೆ. ಈ ಕಾರಣದಿಂದಲೇ (ತಾರುಣ್ಯದ ಪ್ರಾರಂಭದಲ್ಲಿ ಅಸ್ಥಿರತೆಯನ್ನು ರಾಹು ದಶಾ ಕಾಲ ಶಿವಕುಮಾರ್ ಅವರಿಗೆ ಒದಗಿಸಿದ್ದರೂ,) ರಾಹು ದಶಾದ ಅಂತ್ಯದ ಹೊತ್ತಿಗೆ ಯಾರಾದರೂ ಅಸೂಯೆ ಪಡಬಹುದಾದಷ್ಟು ವಿಸ್ಮಯಕರವಾಗಿ ಶಿವಕುಮಾರ್ ಬಂಗಾರಪ್ಪನವರ ಮಂತ್ರಿ ಮಂಡಳದಲ್ಲಿ ಸಚಿವರಾಗುವ ಹಾಗೆ ಸದವಕಾಶ ಕೆನೆಗಟ್ಟಿ ನಿಂತುಕೊಂಡಿತು. ಗುರು ದಶಾ ಕಾಲ ಬಂದಾಗಲಂತೂ ಎಸ್.ಎಂ.ಕೃಷ್ಣ ಅವರ ಮಂತ್ರಿ ಮಂಡಲದಲ್ಲಿ ಪ್ರಾಬಲ್ಯದ ಶಿಖರಾಗ್ರವನ್ನೇ ಸಂಪಾದಿಸಿಕೊಂಡಿದ್ದರು.

ಧರ್ಮಕರ್ಮಾಧಿಪ ಯೋಗ ಬಲ: ಶಿವಕುಮಾರ್ ಜಾತಕದ ಪ್ರಾಬಲ್ಯ ನೂರಕ್ಕೆ ನೂರು ಅಸಲೀ ಚಿನ್ನವಾದದ್ದು ಧರ್ಮಕರ್ಮಾಧಿಪ ಯೋಗದ ಶಕ್ತಿ ಅವರ ಜಾತಕದಲ್ಲಿ ಹರಳುಗಟ್ಟಿದ್ದರಿಂದ. ಹೀಗಾಗಿ ಸದನದಲ್ಲಿ ಅವರು ಹೇಳಿದ ಮಾತೊಂದನ್ನು ನಾವು ನೆನಪಿಸಿಕೊಳ್ಳಬೇಕು. "ಅಧಿಕಾರವನ್ನು ಒದ್ದು ಪಡೆಯಬೇಕು ಎಂದು ಗುರುಗಳು ಹೇಳಿದರು. ಅಕ್ಷರಶಃ ಗುರುಗಳ ಮಾತನ್ನು ಪಾಲಿಸಿದೆ. ಈ ಕಾರಣಕ್ಕಾಗಿ ಕೃಷ್ಣ ಅವರ ಮಂತ್ರಿ ಮಂಡಳದಲ್ಲಿ ಸಚಿವನಾದೆ" ಎಂದು ಹೇಳಿದ್ದರು. ವಾಸ್ತವವಾಗಿ ಈ ಮಾತು ಸದನದಲ್ಲಿ ಬೇಕಿರಲಿಲ್ಲವೇನೋ? ಆದರೆ ದುರ್ಬಲ ಚಂದ್ರ ಸಂಯುಕ್ತನಾದ ಬುಧ (ವಾಕ್ ಸ್ಥಾನದಲ್ಲಿ ಬುಧನಿದ್ದಾನೆ) ಈ ಮಾತುಗಳನ್ನು ಅವರ ಬಾಯಿಂದ ಆಡಿಸಿ ಶಿವಕುಮಾರ್ ತಪ್ಪು ಮಾಡುವ ಹಾಗೆ ಪ್ರೇರೇಪಿಸಿದ ಎಂದನ್ನಬಹುದು. ಈ ಮಾತು ಆಡಿದ ಕಾರಣದಿಂದಾಗಿ ಕೆಲ ಹೆಚ್ಚುವರಿ ಬಿಕ್ಕಟ್ಟುಗಳನ್ನು ಶಿವಕುಮಾರ್ ಈ ಆರು ತಿಂಗಳ ಅವಧಿಯಲ್ಲಿ ಮೈಮೇಲೆ ಇತ್ತೀಚಿನ ದಿನಗಳಲ್ಲಿ ಎಳೆದುಕೊಂಡರೇನೋ? ಗುರು ದಶಾ ಕಾಲ 1999 ರ ವೇಳೆಯಲ್ಲಿ ಧರ್ಮಕರ್ಮಾಧಿಪ ಯೋಗ ಲೇಪಿತವಾಗಿ ಇದ್ದುದರಿಂದ ಒದ್ದು ಅಧಿಕಾರ ಪಡೆಯಲು ಅವಕಾಶವಾಯ್ತು ಎಂಬುದು ಸರಿ. ಹಾಗೆಯೇ ಗುರು ಗ್ರಹಕ್ಕೆ ನೀಚ ಭಂಗ ರಾಜ ಯೋಗದ ಶಕ್ತಿ ಶನಿ ಗ್ರಹದಿಂದಲೇ ಸಂಪ್ರಾಪ್ತಿಗೊಂಡಿತ್ತು ಎಂಬುದೂ ಒಂದು ಬೋನಸ್ ಆಗಿತ್ತು ಆಗ.

ಆದರೆ ಈಗ ಧರ್ಮಕರ್ಮಾಧಿಪ ಯೋಗದ ಪಾಲುದಾರನಾಗಿ ಶನಿ ಇದ್ದರೂ, ಗುರು ದಶಾ ಕಾಲದ ಅವಧಿಯಲ್ಲಿ ಒದಗಿದ ದರ್ಮಕರ್ಮಾಧಿಪ ಯೋಗದ ಪ್ರಶ್ನಾತೀತ ಪ್ರಾಬಲ್ಯ, ಶಕ್ತಿ ಶನಿ ಗ್ರಹದ ಮೂಲಕ ವಜ್ರಾಯುಧದಂತೆ ಒದಗಲು ಸಾಧ್ಯವಾಗದು. ಯಾಕೆ ಆಗದು ಎಂದರೆ ಕುಜನ ದೃಷ್ಟಿಯ ಉರಿಯಲ್ಲಿ ಶನಿ ಗ್ರಹ ಬೆಂದಿರುವುದರಿಂದ. ಕುಜನೂ ಶನಿ ಗ್ರಹದ ದೃಷ್ಟಿ ಉರಿಯಲ್ಲಿ ಬೇಯುತ್ತಿರುವುದರಿಂದ. ಈ ಉರಿ ಅಪಾರವಾಗಿದೆ ಕುಜನಿಗೆ. ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ಶನಿ ಗ್ರಹ ಮಂಗಳ ಗ್ರಹದ ಉಸಿರುಗಟ್ಟಿಸುತ್ತಿದೆ. ಮಂಗಳನ ಉಸಿರುಗಟ್ಟುವ ಸ್ಥಿತಿ ಶಿವಕುಮಾರ್ ಅವರಿಗೆ ತಾಪತ್ರಯ ಸೃಷ್ಟಿಸುತ್ತಿರುತ್ತದೆ. ಹಾಗೆಯೇ ಇನ್ನೂ ಕೆಲವು ಸೂಕ್ಷ್ಮ ತೊಂದರೆಗಳೂ ಇವೆ.

ಹೀಗಾಗಿ ವರ್ತಮಾನಕ್ಕೆ ಶಿವಕುಮಾರ್ ಅವರಿಗೆ ವಿಶಿಷ್ಟಃ ಏವಾಂ ನಾಯಕನಾದ ವಿಘ್ನ ನಿವಾರಕ "ವಿನಾಯಕ"ನ ಶಕ್ತಿಯ ಬೆಂಬಲ ಬೇಕು. ಈ ಶಕ್ತಿ ಡಿಕೆಶಿಯವರ ಕರ್ಮ ಸ್ಥಾನ ಶಿಖೆಗೆ ಪ್ರಚಂಡ ಬಲ ದೊರಕುವಂತೆ ಮಾಡುತ್ತದೆ. ಹಾಗಾದರೆ ಈ ರೀತಿಯ ದೋರ್ದಂಡ ಬಲ ಹೇಗೆ ಸಿಗಬೇಕು ಶಿವಕುಮಾರ್ ಅವರಿಗೆ? ನೆಪ್ಚೂನ್ ಗ್ರಹದ ಸಿದ್ಧಿಯ ಪದರು ಇವರ ಜನ್ಮ ಕುಂಡಲಿಯ ತುಲಾ ರಾಶಿಯಲ್ಲಿ ಅಡಕವಾಗಿರುವುದರಿಂದ ಅಂಗಾರಕ ಚಂಡಿಕೆಯ ಕೃಪೆಯೇ ಪ್ರಧಾನವಾಗಿ, ಮಹೋಗ್ರ ಉರಗ (ಶಂಖಪಾಲ ಎಂಬ ಸರ್ಪದ ಕೃಪೆ) ಶಾಂತಗೊಳ್ಳಬೇಕು.

ಪ್ರಸ್ತುತದ ಗುರು ಬಲ: ಗುರು ಬಲ ಇನ್ನೂ ಒಂದು ವರ್ಷ ಕಾಲ ಶಿವಕುಮಾರ್ ಅವರಿಗೆ ಪ್ರಸ್ತುತದಲ್ಲಿ ಇದ್ದಿರುವುದು ಗಮನಾರ್ಹ. ಹೀಗಾಗಿ 2025ರ ಅಕ್ಟೋಬರ್ ತಿಂಗಳ ತುಲಾ ಸಂಕ್ರಮಣದ ಕಾಲದಿಂದ, ನವೆಂಬರ್ ಮಧ್ಯ ಭಾಗದ ವೃಶ್ಚಿಕ ಸಂಕ್ರಮಣ ಕಾಲದ ಘಟ್ಟದವರೆಗೆ ಕಾಲದ ತಕ್ಕಡಿಯ ಪರಡಿ ಶಿವಕುಮಾರ್ ಬಳಿ ಸಕಾರಾತ್ಮಕವಾಗಿ ತೂಗಿಕೊಳ್ಳಲು ಪಕ್ವತೆ ಪಡೆದಿದೆ. ಈ ಪಕ್ವತೆ ಅವರ ರಾಜಕೀಯದ ದಾಳಗಳ ಹರಿತವನ್ನು ಪ್ರಖರಗೊಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.