ಮಲ್ಲಿಕಾರ್ಜುನ ಖರ್ಗೆಯವರ ಜನ್ಮ ಕುಂಡಲಿಯಲ್ಲಿ ವಿಶೇಷವಾಗಿ ಎದ್ದು ಕಾಣುವ ಅಂಶವೆಂದರೆ ಅವರ ಕುಂಡಲಿಯ ಸೂರ್ಯ ಗ್ರಹ. ಮಿತ್ರನ ಮನೆಯಾದ ಕರ್ಕಾಟಕ ರಾಶಿಯಲ್ಲಿ ಕುಳಿತು ಶನೈಶ್ಚರನ ಮನೆಯಾದ ಮಕರ ರಾಶಿಯನ್ನು ಸೂರ್ಯ ದೃಷ್ಟಿಸುತ್ತಿರುವುದು ಅತ್ಯಂತ ಮಹತ್ವದ ಅಂಶವಾಗಿದೆ. ಸೂರ್ಯನ ಕಾರಣದಿಂದಾಗಿ ಖರ್ಗೆಯವರು ಬದುಕಿನ ಸಂದರ್ಭದ ವಿಶಿಷ್ಟವಾದ ವ್ಯಕ್ತಿತ್ವ ಒಂದನ್ನು ತನ್ನದೇ ಆದ ವಿಭಿನ್ನ ಬಗೆಯಲ್ಲಿ ರೂಪಿಸಿಕೊಳ್ಳಲು ಅವಕಾಶ ದೊರಕಿತು. ಜತೆಗೆ ಮಾತಿನ ವಿಚಾರ ಬಂದಾಗ ತೀರಾ ಸೌಮ್ಯವಾಗಿಯೇ ಹೇಳಬೇಕಾದುದನ್ನು ನಿರ್ದಿಷ್ಟ ಖಚಿತತೆಯಿಂದ ಮಾತನಾಡುವ ಗಟ್ಟಿತನವನ್ನೂ ಪಡೆದುಕೊಳ್ಳುವಂತಾಯ್ತು.

ಆದರೆ ಬಾಲ್ಯದ ಹಲವಾರು ವಿದ್ಯಮಾನಗಳನ್ನು ಜೀರ್ಣಿಸಿಕೊಳ್ಳುವುದು ಸುಲಭವಾಗಿರಲಿಲ್ಲ ಅವರಿಗೆ. ವಿಷಮಯವಾದ ರಾಹು ಗ್ರಹದ ಕ್ರೂರತೆಯಿಂದಾಗಿ ಕಣ್ಣೆದುರಿಗೇ ತಾಯಿ ಮತ್ತು ತಂಗಿ ಹೀಗೆ ಇಬ್ಬರೂ ಅಗ್ನಿಯಲ್ಲಿ ಬೆಂದು ಭಸ್ಮವಾದದ್ದನ್ನು ಅಡಗಿ ನೋಡುವ ಅಸಹಾಯಕತೆಯನ್ನು ಭರಿಸಿಕೊಳ್ಳಲೇ ಬೇಕಾಯ್ತು. ಅವರು ಈ ದಾರುಣ ಸ್ಥಿತಿಯ ರುದ್ರ ಭಯಾನಕ ದೃಶ್ಯವನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಖರ್ಗೆಯವರ ಜಾತಕ ಕುಂಡಲಿಯ ಶುಕ್ರ ಗ್ರಹವೇ ಒದಗಿಸಿತೆಂಬುದರಲ್ಲಿ ಅನುಮಾನವೇ ಇಲ್ಲ.

ಹೈದರಾಬಾದ್ ನಿಜಾಮನ ರಜಾಕ್ ಪಡೆಗಳು ಸ್ವೇಚ್ಛೆಯಿಂದ ಮನಬಂದಂತೆ ಮನೆ ಮನೆಗಳಿಗೆ ಬೆಂಕಿ ಹಚ್ಚಿ ತಮ್ಮ ಸ್ವಾಮ್ಯವನ್ನು ಸಂಸ್ಥಾಪಿಸಿಕೊಳ್ಳಲು ಮುಂದಾದ ರಾಕ್ಷಸತನವನ್ನು ಆವಾಹನೆಗೊಳಿಸಿಕೊಂಡಿದ್ದವು. ಹೈದರಾಬಾದ್ ಹಿಡಿತವು ನಿಜಾಮನಿಂದ ಕೈ ತಪ್ಪಲೇಬಾರದು ಎಂಬ ಉದ್ದೇಶವನ್ನು ಈ ರಾಕ್ಷಸತ್ವದ ಮೂಲ ಸಮೀಕರಣವನ್ನಾಗಿ ನಿಯೋಜಿಸಿಕೊಂಡಿದ್ದವು. ಖರ್ಗೆಯವರು ಈ ವಿಹ್ವಲತೆಯನ್ನು ಕಣ್ಣಾರೆ ಕಂಡರೂ ಏನೂ ಮಾಡಲಾರದ ಅಸಹಾಯಕತೆ ಇತ್ತು ಅವರಿಗೆ. ಆದಾಗ್ಯೂ ಬದುಕಿನ ಈ ಕೆಟ್ಟ ಅಧ್ಯಾಯವನ್ನು ಹೊತ್ತೇ ಬದುಕಿನ ಸಾರ್ಥಕತೆಗೆ ಬೇಕಾದ ಧೈರ್ಯವನ್ನು ಕೇತು ಗ್ರಹದ ಮೂಲಕ ಸಂಪಾದಿಸಿಕೊಂಡರು. ಕೇತು ಗ್ರಹವು ಭಾರತೀಯ ಜ್ಯೋತಿಷ ವಿಜ್ಞಾನದ ನಂಬಿಕೆಯಂತೆ ಗಣೇಶನನ್ನು ಸಂಕೇತಿಸುತ್ತದೆ.

ಹೀಗಾಗಿ ಪರಮ ಫಲ ಬಲದಾಯಕ ಕೇತು, ಆಯುಷ್ಕಾರಕ ಶನಿ ಹಾಗೂ ಶಾಂತ ಕಿರಣಗಳ ಶುಕ್ರರ ಗರಿಷ್ಠ ಬೆಂಬಲವೇ ಖರ್ಗೆಯವರನ್ನು ರಜಾಕರ ಕ್ರೌರ್ಯದ ಕೆನ್ನಾಲಗೆಯಿಂದ ಉಳಿಸಿ ರಕ್ಷಿಸಿತು. ಈ ರಕ್ಷೆ ಇರದಿದ್ದರೆ ಖರ್ಗೆಯವರಿಗೆ ವರ್ತಮಾನವನ್ನು ದಕ್ಕಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಜೀವನದ ಸಂದರ್ಭದ ಧೈರ್ಯ ಹಾಗೂ ತಾಳ್ಮೆಯನ್ನು ಇವರು ಸಂಪಾದಿಸಿಕೊಳ್ಳುವುದು ಅಸಾಧ್ಯವೇ ಆಗುತ್ತಿತ್ತು. ಅಮೃತದ ಕುಂಭದಂತೆ ಶನಿ ಗ್ರಹವು ಅಸಂಖ್ಯ ಸೌಭಾಗ್ಯಗಳನ್ನೂ ಇವರಿಗೆ ಅನುಗ್ರಹಿಸಿದೆ. ಇಷ್ಟೇ ಅಲ್ಲದೆ, ಶನಿ ಗ್ರಹ ಮತ್ತು ಚಂದ್ರ ಗ್ರಹ ಷಷ್ಠಾಟಕ ಸಂಯೋಜನೆಯ ಫಲವಾಗಿ ಪಡೆದ ದೀರ್ಘಾಯಸ್ಸು ಹಾಗೂ ಉತ್ತಮ ವರ್ಚಸ್ಸು ಖರ್ಗೆಯವರ ಹೆಗ್ಗಳಿಕೆಯಾಗಿದೆ. 83 ರ ಈ ಇಳಿ ವಯಸ್ಸಿನಲ್ಲೂ ಆರೋಗ್ಯವನ್ನು ಭರ್ಜರಿಯಾಗಿಯೇ ಸಂಪಾದಿಸಿಕೊಳ್ಳುವಂತಾದುದು ಸಾಧ್ಯವಾಗಿದೆ.

ಶುಕ್ರ ಗ್ರಹದ ಕಾರುಣ್ಯ ಮತ್ತು ರಾಜಯೋಗ

ಖರ್ಗೆಯವರು ಜಾತಿ, ಪಂಗಡ ಅಥವಾ ಮೀಸಲುಗಳ ಔದಾರ್ಯದ ಫಲವಾದ ಏಣಿಯ ಮೂಲಕ ಶಿಖರ ಏರಲು ಯಾವತ್ತೂ ಪ್ರಯತ್ನಿಸಿದವರಲ್ಲ. ತಾನು ಸಮಷ್ಟಿಯ ನಾಯಕ ಎಂಬುದನ್ನೇ ಪ್ರತಿಪಾದಿಸುತ್ತಾರೆ. ಯಾವುದೋ ಒಂದಕ್ಕೆ ತನ್ನನ್ನು ಸೀಮಿತಗೊಳಿಸಿಕೊಳ್ಳುವುದನ್ನು ಅವರು ಮಾಡಲಾರರು. ಇದು ಅವರ ಧ್ಯೇಯವಾದದ್ದು ಶುಕ್ರ ಗ್ರಹದ ಸಿದ್ಧಿ ಇವರ ಜಾತಕ ಕುಂಡಲಿಯಲ್ಲಿ ದಟ್ಟವಾಗಿ ಸ್ನಿಗ್ಧಗೊಂಡಿದ್ದರಿಂದ. ಸಾಡೆಸಾತಿ ಶನಿ ಕಾಟದ ಫಲವಾಗಿ 2013ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ನಿಯೋಜನೆಗೊಳ್ಳುವುದು ಇವರ ಕೈ ತಪ್ಪಿದ್ದರೂ ಕಾಂಗ್ರೆಸ್ ಪಕ್ಷ ಇವರನ್ನು ರಾಜ್ಯ ರಾಜಕಾರಣದಿಂದ, ಕೇಂದ್ರ ಮಟ್ಟದ ರಾಜಕಾರಣಕ್ಕೆ ಎಳೆಯಿತು. ಸಾಡೇಸಾತಿ ಕಾಟವಿದ್ದರೂ ಶುಕ್ರ ಗ್ರಹ ಇವರ ವರ್ಚಸ್ಸನ್ನು ಹಿಗ್ಗಿಸಿಕೊಡುವ ಸಂಪನ್ನತೆಯನ್ನು ಪ್ರದರ್ಶಿಸಿತು. ಎಂಪಿಯಾಗಿ ಆಯ್ಕೆಯಾದರು. ವಿರೋಧ ಪಕ್ಷದ ನಾಯಕನಾಗಿ ಸೈ ಎನಿಕೊಂಡರು. ಎಂಪಿ ಚುನಾವಣೆಯಲ್ಲಿ ಸೋತರೂ ರಾಜ್ಯ ಸಭೆಯಲ್ಲಿ ವಿಪಕ್ಷ ನಾಯಕನಾಗಿ ವಿಜೃಂಭಿಸುತ್ತಲೇ ಇದ್ದಾರೆ. ಇಷ್ಟೇ ಅಲ್ಲದೆ, ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆಯಾಗಿ, ಕಾಂಗ್ರೆಸ್ ಹೈಕಮಾಂಡ್ನ ದೊಡ್ಡ ಬಲವೇ ಆಗಿ ಖರ್ಗೆ ಮಿಂಚುತ್ತಲೇ ಬಂದಿದ್ದಾರೆ. ಖರ್ಗೆಯವರ ಮಾತಿನ ಮೊನಚು, ಗದ್ದಲವಾಗುವಂತೆ ಆರ್ಭಟಿಸುವ ವಿಧಾನಕ್ಕೆ ಶರಣಾಗದೆ ಖಡಕ್ಕಾದ ಮಾತುಗಳಿಂದ ಆಡಳಿತ ಪಕ್ಷವಾದ ಎನ್ಡಿಎಯನ್ನು ಪೇಚಿಗೆ ಸಿಲುಕಿಸುವ ಚಾತುರ್ಯವನ್ನು ತೋರಿಸುತ್ತಲೇ ಬಂದಿದ್ದಾರೆ.

ಕರ್ನಾಟಕದ ಮೊರಾರ್ಜಿ ದೇಸಾಯಿ ಆಗಬಲ್ಲರೆ ಖರ್ಗೆ?

ಹೌದು! ಮಲ್ಲಿಕಾರ್ಜುನ ಖರ್ಗೆಯವರು ಮೊರಾರ್ಜಿ ದೇಸಾಯಿಯವರನ್ನು ನೆನಪಿಸುವ ಹಾಗೆ ಇಂದಿನ ರಾಜಕಾರಣದಲ್ಲಿ ಬೆಳೆದು ನಿಂತಿದ್ದಾರೆ. ಪ್ರಧಾನಿ ಪಟ್ಟ ಕಷ್ಟಕರವಾದರೂ ಕರ್ನಾಟಕದ ಮುಖ್ಯಮಂತ್ರಿಯಾಗಿ ಎದ್ದು ನಿಲ್ಲಲು, ಸ್ಥಾಪಿತಗೊಳ್ಳಲು ಕಾಲ ಸಹಾಯಕವಾಗಿದೆ. ಶುಕ್ರ ಗ್ರಹದ ಜತೆಗೆ ಗಟ್ಟಿಯಾಗಿ ನಿಲ್ಲಲು ಬುಧ ಮತ್ತು ಗುರು ಗ್ರಹಗಳು ಸಬಲವಾಗಿ ನಿಂತಿವೆ ಖರ್ಗೆಯವರ ಜಾತಕ ಕುಂಡಲಿಯಲ್ಲಿ. ಶನೈಶ್ಚರನ ಬಾಧೆ ಇರದ ಈ ಮುಂದಿನ ಐದು ವರ್ಷಗಳ ಅವಧಿ 2028 ರ ವಿಧಾನ ಸಭಾ ಚುನಾವಣೆಯಲ್ಲಿ ಕೂಡಾ ಖರ್ಗೆಯವರಿಗೆ ಬೆಂಬಲಕೊಡುವ ಆರು ಗ್ರಹಗಳು ಉತ್ಸಾಹಕರ ಸ್ಥಿತಿಯಲ್ಲಿಯೇ ಇದ್ದಿರುತ್ತವೆ. ವಯಸ್ಸು 80+ ಆದಾಗಲೂ ಲವಲವಿಕೆಯಿಂದ ಇರುವುದು ಖರ್ಗೆಯವರಿಗೆ ಸಾಧ್ಯವಿರುವ ವಿಚಾರ ಗಮನಾರ್ಹವಾದುದು. ಜತೆಗೆ ಕರ್ನಾಟಕದ ರಾಜಕಾರಣಕ್ಕೆ ಆವಶ್ಯಕವಾದ ಎಲ್ಲಾ ದಾಳಗಳನ್ನು ಉರುಳಿಸಬಲ್ಲ ತಂತ್ರ, ಪ್ರತಿ ತಂತ್ರಗಳು ಖರ್ಗೆಯವರಿಗೆ ತಿಳಿಯದ ವಿಷಯವೇನಲ್ಲ. ನಾಜೂಕಾಗಿ ಮಾತನಾಡಬಲ್ಲ ಜಾಣ್ಮೆ ಇವರಿಗಿದೆ. ಹೀಗಾಗಿಯೇ ಕರ್ನಾಟಕದ ಮೊರಾರ್ಜಿ ದೇಸಾಯಿ ಆಗಬಲ್ಲ ಅವಕಾಶ ಖರ್ಗೆಯವರಿಗೆ ಸಾಧ್ಯವಿದೆ.

ಮೊಂಡು ಹಠ ಇಲ್ಲದಿರುವ ಸ್ವಭಾವ ಖರ್ಗೆಯವರ ಸಹಜ ಗುಣ. ಈ ಗುಣ ಗುರು ಗ್ರಹದ ವಿಶೇಷ ವರದಾನವಾಗಿರುವುದು ಖರ್ಗೆಯವರ ಪಾಲಿನ ಅದೃಷ್ಟವೇ ಸರಿ. ದೊಡ್ಡದೊಂದು ಹುದ್ದೆ ಖರ್ಗೆಯವರಿಗೆ ಲಭ್ಯವಾಗುವುದರ ಮೂಲಕ ಕಾಂಗ್ರೆಸ್ ಬಗ್ಗೆ ಇಡೀ ದೇಶದ ಮತದಾರರ ದೊಡ್ಡ ಗುಂಪೊಂದು ವಿಶೇಷವಾದ ಒಲವು ತೋರಲು ಸಾಧ್ಯವೂ ಇದೆ. ನಿರರ್ಗಳವಾಗಿ ಹಿಂದಿ ಹಾಗೂ ಉರ್ದು ಮಾತನಾಡಬಲ್ಲ ಖರ್ಗೆಯವರ ಮೂಲಕ ಕಾಂಗ್ರೆಸ್ ಬರುವ ದಿನಗಳಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಚುನಾವಣೆಯ ದೃಷ್ಟಿಯಿಂದಲೂ ಸಾಧ್ಯವಾದೀತು. ಈ ಎಲ್ಲಾ ಸಕಾರಾತ್ಮಕ ಅಂಶಗಳ ಮೂಲಕ ಏರಬೇಕಾದ ಎಲ್ಲಾ ಅರ್ಹತೆಗಳಿದ್ದರೂ ಅವಕಾಶ ವಂಚಿತರೇ ಆಗಿ ನಿರಾಶೆ ಹೊಂದುತ್ತಿದ್ದ ಖರ್ಗೆಯವರಿಗೆ ಸದ್ಯ ಅದೃಷ್ಟದ ಏಣಿ ಸುಸಜ್ಜಿತವಾಗಿ ಶೋಭಿಸುತ್ತಿದೆ ಎಂದೇ ಅನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.