ಜ್ಯೋತಿಷ ಶಾಸ್ತ್ರದಲ್ಲಿ ಗ್ರಹಗಳ ಕಾರಕತ್ವ ತುಂಬಾ ಮುಖ್ಯವಾದುದು. ಎಂದರೆ ಪ್ರತಿ ಗ್ರಹವೂ ಕೆಲವು ನಿರ್ದಿಷ್ಟ ಅಂಶಗಳು, ಸಂಬಂಧಗಳು ಮತ್ತು ಜೀವನದ ಘಟನೆಗಳನ್ನು ಸಂಕೇತಿಸುವುದೇ ಅದರ ಕಾರಕತ್ವ. ಉದಾಹರಣೆಗೆ, ಸೂರ್ಯನು ತಂದೆ ಅಥವಾ ರಾಜನ ಸಂಕೇತವಾದರೆ, ಚಂದ್ರನು ತಾಯಿಯ ಸಂಕೇತ. ಈ ಕಾರಕತ್ವಗಳು ಜಾತಕದ ವಿಶ್ಲೇಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಏಕೆಂದರೆ ಅವು ನಿರ್ದಿಷ್ಟ ವಿಷಯಗಳ ಸಂಭವನೀಯತೆಯನ್ನು ಮತ್ತು ಅವುಗಳ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಈ ಕಾರಕತ್ವದ ಆಧಾರದಲ್ಲಿ ಮತ್ತು ಜಾತಕದಲ್ಲಿ ಅನ್ಯ ರಾಶಿಗಳ ಸ್ಥಿತಿಗತಿಯ ಆಧಾರದಲ್ಲಿ ಜ್ಯೋತಿಷದ ಲೆಕ್ಕಾಚಾರ ನಡೆಯುತ್ತದೆ. ಕಳೆದ ಲೇಖನದಲ್ಲಿ ಸಿಂಹ ರಾಶಿಯ ಅಧಿಪತಿಯಾಗಿರುವ ರವಿಯ, ಕಟಕ ರಾಶಿಯ ಅಧಿಪತಿಯಾಗಿರುವ ಚಂದ್ರ ಮನುಷ್ಯನ ಜಾತಕದ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ ಎಂದು ತಿಳಿಸಲಾಗಿತ್ತು. ಈಗ ಮೇಷ ಹಾಗೂ ವೃಶ್ಚಿಕ ರಾಶಿಯ ಅಧಿಪತಿಯಾಗಿರುವ ಮಂಗಳ ಗ್ರಹದ ಮೇಲೆ ಪ್ರಭಾವ ಬೀರಬಹುದಾದ ಗುಣಗಳನ್ನು ತಿಳಿದುಕೊಳ್ಳೋಣ.
.ಚಂದ್ರ ಗ್ರಹ ಕಾರಕತ್ವ: ಕಟಕ ರಾಶಿಯ ಅಧಿಪತಿ ಗುಣಗಳು, ಶಕ್ತಿ ಬಗ್ಗೆ ತಿಳಿದುಕೊಳ್ಳಿ.
ಮಂಗಳ ಗ್ರಹ: ಮೇಷ ಹಾಗೂ ವೃಶ್ಚಿಕ ರಾಶಿಗಳಿಗೆ ಮಂಗಳ ಗ್ರಹ ಅಧಿಪತಿಯಾಗಿರುತ್ತಾನೆ. ಇದು ಅಗ್ನಿ ತತ್ವದ ಗ್ರಹ. ಇದರಿಂದ ಮೇಷ ರಾಶಿಗೆ ಕುಜನ ಪ್ರಾಮುಖ್ಯತೆ ಹೆಚ್ಚಿರುತ್ತದೆ. ವೃಶ್ಚಿಕ ರಾಶಿಯ ಕುಜನ ಜಲ ತತ್ವಕ್ಕೆ ಅಷ್ಟಾಗಿ ಪ್ರಾಮುಖ್ಯತೆ ಕೊಡುವುದಿಲ್ಲ. ಕುಜನು ಪುರುಷ ಗ್ರಹವಾಗಿದ್ದು, ಈತ ಉಗ್ರ ಗ್ರಹನೂ ಹೌದು. ಒಳ್ಳೆಯ ಕೋಪಿಷ್ಠರು ಆಗಿರುತ್ತಾರೆ. ಇವರ ಬಣ್ಣ ರಕ್ತ ಕೆಂಪು ಆಗಿರುತ್ತದೆ. ದೇಹದಲ್ಲಿ ರಕ್ತ ಸೂಚಕ ಗ್ರಹವಾಗಿರುತ್ತದೆ.

ಹೊಡೆದಾಟಕ್ಕೆ, ಬಡಿದಾಟಕ್ಕೆ ಕಾರಕ ಗ್ರಹವಾಗಿದೆ. ಆದರೆ ಪರೋಪಕಾರಿ ಗ್ರಹವಾಗಿ ಇರುವುದರಿಂದ ಸಾಮಾನ್ಯವಾಗಿ ಗೆಲ್ಲುವ ಗ್ರಹವಾಗಿರುತ್ತದೆ. ಅಸ್ತ್ರ ಶಸ್ತ್ರಗಳ ಬಳಕೆಯನ್ನು ಮಾಡುವಂತಹ ಗ್ರಹವಾಗಿದೆ. ಪರರನ್ನು ಪೀಡಿಸವುದು, ಸಮಾಜ ಘಾತಕ ಕೆಲಸಗಳನ್ನು ಮಾಡುವುದು, ಆಕ್ರೋಶ ಭರಿತ ಗ್ರಹ ಇದಾಗಿದೆ. ಒಂದು ಸಾಲಿನಲ್ಲಿ ನಿಂತಲ್ಲಿ ನಿಲ್ಲುವುದಿಲ್ಲ. ಶರೀರ ಶಕ್ತಿಯನ್ನು ಉಪಯೋಗಿಸುವುದು, ಜೋರಾಗಿ ಮಾತನಾಡುತ್ತಾರೆ. ಆರೋಗ್ಯವಂತ ಗ್ರಹ ಇದಾಗಿದ್ದು, ಇವರ ಶರೀರ ಬಹಳ ಕಟ್ಟು ಮಸ್ತಾಗಿರುತ್ತದೆ.

ಪರರಿಗೆ ನ್ಯಾಯವನ್ನು ಕೊಡಿಸುತ್ತಾ ಇರುತ್ತಾರೆ. ಸಮಾಜ ಸೇವೆಯೇ ಇವರ ಗುರಿಯಾಗಿರುತ್ತದೆ. ಪೊಲೀಸ್ ಹುದ್ದೆ, ಮಿಲಿಟರಿ ಹುದ್ದೆ, ನೌಕಾಪಡೆಯಲ್ಲಿ ಹುದ್ದೆ, ಸೇನೆಯ ಹುದ್ದೆ ಹೀಗೆ ಎಲ್ಲಿ ಸಮವಸ್ತ್ರ ಕೋಡ್ ಇರುತ್ತವೆಯೋ ಅಲ್ಲಿ ಇವರು ಇರುತ್ತಾರೆ. ಅಧಿಕರಿಯಾಗಿ ಖಾದಿ ಧರಿಸುವವರಾಗಿ ಇರುತ್ತಾರೆ. ಅಂದರೆ ಮಂಗಳ ಬಹಳ ಬಲಿಷ್ಠ ಗ್ರಹವಾಗಿದೆ. ಇವರ ಮುಖ್ಯ ಗುರಿಯೇ ಕುಟುಂಬ, ನಾಡು, ದೇಶದ ರಕ್ಷಣೆ ಮಾಡುವುದು ಆಗಿರುತ್ತದೆ.
.ರವಿ ಗ್ರಹ ಕಾರಕತ್ವ: ಸಿಂಹ ರಾಶಿಯ ಅಧಿಪತಿ ಗುಣಗಳು, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ.
ರತ್ನ: ಕೆಂಪು ಬಣ್ಣದ ಹವಳ ಇವರ

ಸಂಖ್ಯೆ: 9

ಕಾರಕತ್ವ: ಭ್ರಾತೃ

ಉಚ್ಚಕ್ಷೇತ್ರ: ಮಕರ ರಾಶಿ

ನೀಚ ಕ್ಷೇತ್ರ: ಕರ್ಕ ರಾಶಿ

ದಶಾ ವರ್ಷ: 7 ವರ್ಷಗಳು

ಅಂಗಾಂಗ: ಮಜ್ಜೆ

ಉಛ್ಚಾಂಶ: 28

ದಿಕ್ಕು: ದಕ್ಷಿಣ

ಲೋಹ: ತಾಮ್ರ

ದೃಷ್ಟಿ: 4, 7 ಮತ್ತು 8

ಮಿತ್ರ ಗ್ರಹಗಳು: ಗುರು, ರವಿ ಮತ್ತು ಚಂದ್ರ

ಶತ್ರು ಗ್ರಹ: ಬುಧ

ಸಮ ಗ್ರಹ: ಶುಕ್ರ
.ಪಿತೃ ಪಕ್ಷ ಆರಂಭ | ಆಚರಣೆ ಹೇಗೆ, ಏನೇನು ಲಾಭ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.