ಪಕ್ಷ ಮಾಸ ದಿನಾಂಕ ಸೆ.8ರ ಸೋಮವಾರ ಪಾಡ್ಯ ತಿಥಿಯಿಂದ 21ರ ಅಮಾವಾಸ್ಯೆವರೆಗೆ, ಹದಿನೈದು ದಿನಗಳ ಈ ಕಾಲವನ್ನು “ಪಿತೃ ಪಕ್ಷ”=“ಪಕ್ಷಮಾಸ” ಎನ್ನುತ್ತಾರೆ. ಯಾವ ಶ್ರಾದ್ಧಾಧಿಕಾರಿಗಳು ಈ ಅವಧಿಯಲ್ಲಿ ಪಕ್ಷ ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಅವರ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು, ಸಂತಾನ ಮೊದಲಾದ ಅಖಂಡ ಫಲಗಳನ್ನಿತ್ತು ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಇದೆ.

ಪಿತೃ ದೋಷ ಉಂಟಾಗುವುದು ಹೇಗೆ?

ಪಿತೃಕಾರ್ಯಗಳನ್ನು ಮಾಡದವರಿಗೆ ಅಥವಾ ಅವರ ಕುಟುಂಬದಲ್ಲಿ ಯಾರಿಗಾದರೂ ಪಿತೃ ದೋಷವಿದ್ದಲ್ಲಿ ಅಂದರೆ, ವಯಸ್ಸಾದ ಹಿರಿಯರಿಗೆ ಅನ್ನ ಅರಿವು, ಆಶ್ರಯ, ಔಷಧ, ಹಣ, ಇವುಗಳನ್ನು ನೀಡದೆ ವಯಸ್ಸಾದವರಿಗೆ ತೊಂದರೆ ಕೊಡುವುದು, ಸರಿಯಾಗಿ ಗಮನಿಸದೇ ಇರುವುದು, ಯಾವುದೋ ಕಾರಣದಿಂದ ಧನಿಷ್ಠ ಪಂಚಕ ಅಥವಾ ತ್ರಿಪಾದಿ ನಕ್ಷತ್ರಗಳಲ್ಲಿ ಪೂರ್ವಜರು ಮೃತ ವಾಗಿರುವುದು, ವಿಷಪ್ರಾಶನದಿಂದ-ಅಪಘಾತದಿಂದ ದುರ್ಮರಣ ಹೊಂದಿರುವುದು, ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಆಗದೆ ಇರುವುದು, ಪಿತೃಗಳಿಗೆ ಮೋಸ ಮಾಡಿ ಅವರ ಹಣ ಆಸ್ತಿ ಲಪಟಾಯಿಸಿರುವುದು ಹೀಗೆ ಮುಂತಾದ ಕಾರಣಗಳಿಂದ ಪಿತೃ ದೋಷ ಉಂಟಾಗುತ್ತದೆ.

ಇನ್ನೂ ಹೀಗೆ ಅನೇಕ ವಿಚಾರಗಳಲ್ಲಿ ಪಿತೃಗಳು ಶಾಪವನ್ನು ನೀಡುತ್ತಾರೆ. ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ. ಆದರೂ ಅಂಗವೈಕಲ್ಯ, ಬುದ್ಧಿಹೀನತೆ, ರೋಗಾದಿ ಪೀಡಿತ ಸಂತಾನವಾಗಬಹುದು.

ಮಹಾಭಾರತ ಪುರಾಣ ಕತೆಯ ಪ್ರಕಾರ..

ಸೂರ್ಯ ಪುತ್ರ ಕರ್ಣ ಯುದ್ಧದಲ್ಲಿ ಹತನಾದ ಮೇಲೆ ಸ್ವರ್ಗವನ್ನು ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ. ಇದರಿಂದ ಬೇಸತ್ತ ಕರ್ಣ ಸ್ವರ್ಗಾಧಿಪತಿ ಇಂದ್ರನಲ್ಲಿ ಕೇಳುತ್ತಾನೆ. ಆಗ ದೇವರಾಜ ಇಂದ್ರ “ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ. ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರದ ಆಭರಣಗಳನ್ನು ದಾನವಾಗಿ ನೀಡಿದ್ದೆ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ’’ ಎಂದು ಹೇಳುತ್ತಾನೆ. ಆಗ ಕರ್ಣ ‘‘ನನಗೆ ನನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ. ಇದಕ್ಕಾಗಿ ಅವರಿಗೆ ವಿಶೇಷ ಪರಿಹಾರ ರೂಪವಾಗಿ 15 ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ. ಆ ಕಾಲವನ್ನೇ ಪಿತೃ ಪಕ್ಷ ಮಾಸವೆನ್ನುತ್ತಾರೆ.

ಮಹಾಲಯ ಅಂದರೆ– “ಮಹಾ”- ದೊಡ್ಡ “ಲಯ”- ನಾಶ- ಸಮುದ್ರ ಮಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು. ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವನ್ನು ಆಚರಿಸುತ್ತೇವೆ. ಅದುವೇ ಸರ್ವಪಿತೃ ಅಮಾವಾಸ್ಯೆ ಎಂದು ಹೇಳಲಾಗುತ್ತದೆ.

ಪಿತೃಗಳಿಗೆ ತಿಲ ತರ್ಪಣ ಎಂದರೇನು?

ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ) ಅವು ಅವನವೃದ್ಧಿಗೂ ಕಾರಣವಾಗಿವೆ. ಅವನೇ ಪಿತೃಗಳಿಗೆ ಆಧಾರ. ಪಿತೃ ಲೋಕಚಂದ್ರನ ಮೇಲ್ಭಾಗದಲ್ಲಿದೆ. ಚಂದ್ರನ ಕಲೆಗಳೇ ಪಿತೃಗಳಿಗೆ ಆಹಾರ. ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ. ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾಲವುನಡೆಯಲು ಕಾರಣವಾಗಿವೆ. ಭೂಮಿಯಲ್ಲಿ 24 ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ ಶುಕ್ಲಪಕ್ಷದ 15 ದಿನ ರಾತ್ರಿ, ಕೃಷ್ಣಪಕ್ಷದ 15 ದಿನ ಹಗಲು ಹೀಗೆ ಒಂದು ತಿಂಗಳ ನಮ್ಮ ಕಾಲವು ಅವರಿಗೆ ಒಂದು ದಿನವಾಗುವುದು. ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ಣ ಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣ ಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. (ಪೂರ್ಣ ದಿವಾರಾತ್ರಿ) ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ. ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ತ್ವ ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.

ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ ? ಪಿತೃ ದೋಷ ನಿವಾರಣೆ ಆಗವುದು ಹೇಗೆ?

ದರ್ಬೆ-ಕುಶ-ಕಾಶ-ಬರ್ಹಿ- ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು. ಒಮ್ಮೆ ಗರುಡನು ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದ್ರುವಿನಿಂದ ದಾಸ್ಯ ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ನೀವೆಲ್ಲರೂ ಸ್ನಾನ ಮಾಡಿ ಶುದ್ಧರಾಗಿ ಬರಲು ಹೇಳುತ್ತಾನೆ. ಮತ್ತು ಆ ಸರ್ಪಗಳು ಪುನಃ ಬರುವವರೆಗೂ ಅಮೃತವನ್ನು ದರ್ಬೆಯ ಮೇಲೆ ಇಟ್ಟಿರುತ್ತಾನೆ. ಅಷ್ಟರಲ್ಲಿ ದೇವೇಂದ್ರನು ಬಂದು ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಬೆಯ ಮೇಲೆ ಬೀಳುತ್ತದೆ. ಆದ್ದರಿಂದ ದರ್ಬೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ. ಅಲ್ಲದೇ ಯಜ್ಞ ವರಾಹ ರೂಪೀ ಭಗವಂತನ ರೋಮದಿಂದ ದರ್ಬೆಯೂ, ಬೆವರಿನಿಂದ ಎಳ್ಳು ಹೊರ ಬಂದ ಕಾರಣ ಇವು ಎಲ್ಲಾ ಕಾರ್ಯಗಳಿಗೂ ಪಾವಿತ್ರ್ಯತೆ ನೀಡಲು ಬೇಕಾಗುತ್ತವೆ. ಈ ರೀತಿಯಾಗಿ ಜಾತಕಕ್ಕೆ ಅನುಸಾರವಾಗಿ ಪಿತೃದೋಷವಿರುವವರು ನದಿಯ ತಟದಲ್ಲಿ ಮೋಕ್ಷ ನಾರಾಯಣ ಬಲಿ ಪೂಜೆ, ಆಶ್ಲೇಷ ಬಲಿ ಪೂಜೆ, ತಿಲ ತರ್ಪಣ, ಪಿಂಡಪ್ರದಾನ, ವಿಷ್ಣು ಪಾದ ವೈಕುಂಠ ದ್ವಾರದರ್ಶನ, ತದನಂತರ ಶ್ರೀಮನ್ನಾರಾಯಣನ ದರ್ಶನ ಮಾಡುವುದು. ಈ ಪೂಜೆಗಳನ್ನು ಸೂಕ್ತ ಪುರೋಹಿತರಿಂದ ಮಾಡಿಸಿದಾಗ ಪಿತೃ ದೋಷ ನಿವಾರಣೆಯಾಗುತ್ತದೆ.

ಜಾತಕದಲ್ಲಿ ಪಿತೃ ದೋಷ ಇದ್ದವರು ನಿವಾರಣೆ ಮಾಡಿಸಿಕೊಳ್ಳಲು ಜ್ಯೋತಿಷ್ಯ ಸೇವೆಯಲ್ಲಿ ಪ್ರಾಚೀನ ಶಾಸ್ತ್ರಾಸಕ್ತ L ವಿವೇಕಾನಂದ ಆಚಾರ್ಯ ಅವರನ್ನು ಸಂಪರ್ಕಿಸಿ. ಇವರು ಸೂಕ್ತ ಪುರೋಹಿತರಿಂದ ಪಿತೃ ದೋಷ ನಿವಾರಣೆ ಮಾಡಿಸಿಕೊಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.