ಹಸ್ತಸಾಮುದ್ರಿಕೆಯನ್ನು ಆಧಾರಿಸಿ ಜ್ಯೋತಿಷವನ್ನು ಹೇಳುವುದುಂಟು. ಅದರಲ್ಲಿಯೂ ಬೆರಳಿನ ತುದಿಯಲ್ಲಿರುವ ಶಂಖ ಹಾಗೂ ಚಕ್ರಗಳ ಸಂಖ್ಯೆ ಆಧರಿಸಿ ವ್ಯಕ್ತಿಯ ಸ್ವಭಾವವನ್ನು ಗುರುತಿಸಲಾಗುತ್ತದೆ. ಎಷ್ಟು ಸಂಖ್ಯೆಯ ಚಕ್ರ ಹಾಗೂ ಶಂಖುಗಳಿದ್ದರೆ ಈ ಗುಣಗಳಿಂದ ಕೂಡಿರುತ್ತಾರೆ ಎಂದು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಹೇಳುತ್ತಾರೆ.
.ಜ್ಯೋತಿಷ ದೀಪ | ವೇದಾಂಗಗಳಲ್ಲಿ ಪ್ರಮುಖ ಅಂಗ, ಜೀವನದ ಕಣ್ಣು ಜ್ಯೋತಿಷ್ಯ.ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಂತೆ ಚಂದ್ರಗ್ರಹ: ಜ್ಯೋತಿಷ ಹೇಳೋದೇನು? .

ಕೈಯಲ್ಲಿ ಒಂದು ಚಕ್ರವಿದ್ದರೆ ಭಾಗ್ಯಶಾಲಿಗಳಾಗಿರುತ್ತಾರೆ. ಹಾಗೇ ಒಂದು ಶಂಖು ಇರುವವರು ಸಂತೋಷದ ಜೀವನ ಸಾಗಿಸುತ್ತಾರೆ ಎಂದು ನಂಬಲಾಗಿದೆ.

ಎರಡು ಚಕ್ರ ಇರುವವರು ಉನ್ನತ ಪದವಿಗೆ ಹೋಗುವರು. ಅದೇ ರೀತಿ ಎರಡು ಶಂಖು ಇರುವವರು ದರಿದ್ರರಾಗಿರುತ್ತಾರೆ ಎಂದು ಹೇಳಲಾಗುತ್ತದೆ.

ಮೂರು ಚಕ್ರ ಇರುವವರು ಧನವಂತರಾಗಿರುತ್ತಾರೆ. ಮೂರು ಶಂಖು ಇರುವವರು ಕ್ರೂರಿಗಳಾಗಿರುತ್ತಾರೆ ಎಂದು ಹೇಳಲಾಗುತ್ತದೆ.

ನಾಲ್ಕು ಚಕ್ರ ಇರುವವರು ದರಿದ್ರ ಅನುಭವಿಸುತ್ತಾರೆ. ನಾಲ್ಕು ಶಂಖು ಇರುವವರು ಸದ್ಗುಣರಾಗಿರುತ್ತಾರೆ ಎಂದು ಜ್ಯೋತಿಷ ಹೇಳುತ್ತದೆ.

ಐದು ಚಕ್ರವುಳ್ಳವರು ಕ್ರೂರಿಗಳಾಗಿದ್ದರೆ, ಐದು ಶಂಖು ಇರುವವರು ಸಾಧಾರಣ ಜೀವನ ನಡೆಸುತ್ತಾರೆ ಎಂದು ಜ್ಯೋತಿಷ ಹೇಳುತ್ತದೆ.

ಆರು ಚಕ್ರ ಇರುವವರು ಕಷ್ಟ ನಷ್ಟಗಳಿಗೆ ಗುರಿಯಾಗುತ್ತಾರೆ. ಹಾಗೆಯೇ ಆರು ಶಂಖು ಇರುವವರು ಬಲಶಾಲಿಗಳಾಗಿರುತ್ತಾರೆ ಎಂದು ಹೇಳಲಾಗುತ್ತದೆ.

ಏಳು ಚಕ್ರ ಇರುವವರು ಹೆಚ್ಚು ಜನರ ಸ್ನೇಹ ಗಳಿಸುತ್ತಾರೆ. ಏಳು ಶಂಖು ಇರುವವರು ಉನ್ನತ ಉದ್ಯೋಗ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ಎಂಟು ಚಕ್ರ ಇರುವವರು ನಿರಂತರವಾಗಿ ಅನಾರೋಗ್ಯದಿಂದ ಬಳಲುತ್ತಾರೆ. ಎಂಟು ಶಂಖು ಇರುವವರು ಉನ್ನತ ಪದವಿ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ಒಂಬತ್ತು ಚಕ್ರವುಳ್ಳವರು ರಾಜ ಸಮಾನರಾಗುತ್ತಾರೆ ಎಂದು ಜ್ಯೋತಿಷ ಹೇಳುತ್ತದೆ. ಅದೇ ರೀತಿ ಒಂಬತ್ತು ಶಂಖು ಇರುವವರು ಪ್ರಜಾಪಾಲಕರಾಗುತ್ತಾರೆ ಎಂದು ನಂಬಲಾಗಿದೆ.

ಹತ್ತು ಚಕ್ರ ಇರುವವರು ಮಹಾಯೋಗಿಗಳು ಹಾಗೂ ಹತ್ತು ಶಂಖು ಇರುವವರು ಮಹಾಮೇಧಾವಿಯಾಗಿರುತ್ತಾರೆ ಎಂದು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.