ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವವರೂ ಇದ್ದಾರೆ, ಸಾಕ್ಷಾತ್ ದೇವರ ಅವತಾರ ಎಂದು ಆರಾಧಿಸುವವರೂ ಇದ್ದಾರೆ. ವಿರೋಧಪಕ್ಷದವರು ಮೋದಿಯವರನ್ನು ಟೀಕಿಸುತ್ತಾರೆ, ಟೀಕಿಸುತ್ತಿದ್ದಾರೆ ಜೊತೆಗೆ, ಮೋದಿಯ ಪಕ್ಷದವರೇ ಅವರ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯ ತಳೆದವರೂ ಇದ್ದಾರೆ. ಮೋದಿ ವ್ಯಕ್ತಿತ್ವ ಅವಲೋಕಿಸಿದರೆ, ಅದರಲ್ಲೊಂ ದೊಡ್ಡ ಗುಣವಿದೆ. ಸಂಸ್ಕೃತದಲ್ಲಿ ಒಂದು ಮಾತಿದೆ. "ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ" ಅಂತ. ಮೋದಿ ಅವರ ಜಾತಕ ಕುಂಡಲಿಯಲ್ಲಿನ ಪ್ರಬಲಾತಿ ಪ್ರಬಲ ಅಂಗಾರಕ ಗ್ರಹ (ಮಂಗಳ) ವಜ್ರದಂತೆ ಮೋದಿಯನ್ನು ಕಠಿಣವಾಗಿಸುತ್ತಾನೆ. ಕುಂಡಲಿಯ ಚಂದ್ರ ಗ್ರಹ ಹೂವಿನಷ್ಟು ಮೃದುತ್ವವನ್ನೂ ಅವರಲ್ಲಿ ಸೇರಿಸಿದ್ದಾನೆ. ಸೂರ್ಯ ಹಾಗೂ ಬುಧ ಗ್ರಹಗಳಿಂದ ಒದಗಿದ ಬುಧಾದಿತ್ಯ ಯೋಗ ಹಲವು ವಿಷಯಗಳನ್ನು ಸರ್ರನೇ ಅರಿಯುವ ಕುಶಲಮತಿಯನ್ನು ಮೋದಿಯವರಿಗೆ ಒದಗಿಸುತ್ತದೆ.

ರಾಹು ಗ್ರಹವೊಂದೇ ಘಾತಕ:

ಮೋದಿ ಅವರ ಜಾತಕದಲ್ಲಿ ರಾಹು ಗ್ರಹದ ಹೊರತಾಗಿ ಉಳಿದ ಎಲ್ಲಾ ಗ್ರಹಗಳೂ ಒಂದೊಂದು ರೀತಿಯಲ್ಲಿ ಅವರನ್ನು ಪರಿಪೂರ್ಣತ್ವದ ಎಡೆಗೆ ಮುಖ ಮಾಡಿಸಿದವೇ ವಿನಾ ಜೀವನದ ದಾರಿಯನ್ನು ವಿಪ್ಲವಗಳ ಮೂಲಕ ಸದೆಬಡಿಯಲು ಹೋಗಲಿಲ್ಲ. ಆದರೆ ರಾಹು ಗ್ರಹ ಮಾತ್ರ ಅವರನ್ನು ಕೆಂಡದ ಮೇಲೆ ನಿಲ್ಲಿಸಿದ್ದು ಸುಳ್ಳಲ್ಲ. 1968 ರಿಂದ 1971ರವರೆಗೆ ಜೀವನದ ದಾರಿಗಾಗಿನ ಆಯ್ಕೆ ಹೇಗಿರಬೇಕು ಎಂಬುದಕ್ಕೆ ತುಂಬಾ ತೊಳಲಾಡಿರಬಹುದು ಎಂಬುದು ಅವರ ಜಾತಕದಲ್ಲಿ ಕಂಡುಬಂದ ವಿಚಾರ. ಬದುಕಿನ ಸಂಬಂಧವಾದ ಗುರಿ ತಲುಪಲು ಅವರು ಹೆಚ್ಚಾಗಿ ದುರ್ಗೆಯನ್ನು ಹಾಗೂ ಭೈರವನನ್ನು ತುಂಬಾ ಆರಾಧಿಸಿದ ಸೂಚನೆಯನ್ನು ಕೇತು ಗ್ರಹ ಕೊಟ್ಟರೆ, ರಾಹು ಗ್ರಹವು ಮೋದಿಯವರ ಮನಃಶಾಂತಿಯನ್ನು ಶನೈಶ್ಚರನ ಮೂಲಕ 1968 ರಿಂದ 1971 ರವರೆಗೆ ಕೆಡುವಂತೆ ಮಾಡಿತ್ತು ಎಂಬ ಕುರುಹು ಮೋದಿಯವರ ಜಾತಕ ಕುಂಡಲಿಯಲ್ಲಿ ಕೇತು ಗ್ರಹದಿಂದಾಗಿ ಸ್ಪಷ್ಟವಾಗುತ್ತಿದೆ.

ಶುಕ್ರ ಗ್ರಹದ ಮೂಲಕ ಸಿದ್ಧಿ:

ಕೇತು ಗ್ರಹ ಮುಖ್ಯವಾಗಿ ಮೋದಿಯವರನ್ನು ರಾಜಕೀಯದಲ್ಲಿ ಪ್ರಧಾನವಾದ ಶಕ್ತಿಯಾಗುವ ವಿಚಾರಕ್ಕೆ ವೇದಿಕೆ ಒದಗಿಸಿತು. ಭಾರತೀಯ ಆರ್ಷೇಯ ಪರಂಪರೆಯು, ಕೇತು ಗ್ರಹವು ಗಣೇಶನ ಶಕ್ತಿಯ ಆಕರ ಎಂದು ಗುರುತಿಸುತ್ತದೆ. ಗಣೇಶನ ಅನುಗ್ರಹದಿಂದಾಗಿಯೇ 1985ರ ನವೆಂಬರ್ ತಿಂಗಳ ಹೊತ್ತಿಗೆ RSS ವೇದಿಕೆಯಿಂದ ಬಿಜೆಪಿಯ ವೇದಿಕೆಗೆ ಮೋದಿಯವರ ಆಗಮನವಾಗುತ್ತದೆ. ಗುಜರಾತಿನ ಬಿಜೆಪಿ ಘಟಕದ ಎಲ್ಲಾ ಆಗುಹೋಗುಗಳನ್ನು ಹತ್ತಿರದಿಂದ ನೋಡಲು ಮೋದಿಯವರಿಗೆ ಸುಲಭವಾದುದರಿಂದಲೇ ಹಲವು ವಿಶಿಷ್ಟತೆಗಳ (ಸ್ಥಿರತೆ ಇರಲಿ, ಅಸ್ಥಿರತೆಗಳೇ ಇರಲಿ) ಕಾಲ ಘಟ್ಟದ ದೊಡ್ಡ ಶಕ್ತಿಯಾಗಿ ಬೆಳೆಯಲು ಅವಕಾಶವಾಗುತ್ತದೆ.

ಇಂಥದೊಂದು ಸೂಕ್ಷ್ಮ ಕಾಲಘಟ್ಟಕ್ಕೆ ಮೋದಿ ಬಂದು ತಲುಪಿದ್ದು ಕೇತು (ಅರ್ಥಾತ್ ಗಣೇಶನೇ) ಒದಗಿಸಿದ ಒಂದು ಯೋಗ. ಅತ್ಯಂತ ಮಹತ್ವದ ಯೋಗ ಎಂದು ಹೇಳಬಹುದಾದ ಈ ಅವಧಿಯಿಂದ, ಅಂದರೆ 1985 ನವೆಂಬರ್ನಿಂದ ಪೂರ್ತಿಯಾಗಿ 20 ವರ್ಷಗಳ ದೀರ್ಘ ಅವಧಿಗೆ ಮೋದಿಯವರ ಕುಂಡಲಿಯಲ್ಲಿ ಶುಕ್ರ ದಶಾ ಕಾಲ. ಶುಕ್ರ ಗ್ರಹವು ಭಾರತೀಯ ಜ್ಯೋತಿಷ ವಿಜ್ಞಾನದ ಪ್ರಕಾರ ದುರ್ಗೆಯನ್ನು ಪ್ರತಿನಿಧಿಸುತ್ತದೆ. ನವರಾತ್ರಿಯ ವ್ರತಕ್ಕೆ ಮೋದಿಯವರು ತುಂಬಾ ಮಹತ್ವವನ್ನು ಕೊಡುವ ವಿಚಾರವನ್ನು ನಾವು ಮಾಧ್ಯಮಗಳ ಮೂಲಕ ಅರಿತಿದ್ದೇವೆ. ಅಂದರೆ ಕೇತು ತನ್ನ ದಶಾ ಕಾಲದ ಕೆಲಸ ಮುಗಿಸುತ್ತಿದ್ದ ಹಾಗೆ ಶುರುವಾದ ಶುಕ್ರ ದಶಾ ಸಂದರ್ಭದಿಂದ, ಮೋದಿಯವರಿಗೆ ದೊರೆತ ದುರ್ಗೆಯ (ಶುಕ್ರ ಗ್ರಹದ) ಔದಾರ್ಯ ಬಹು ದೊಡ್ಡದಾಗಿಯೇ ಮೋದಿಯವರನ್ನು ಬೆಳೆಸುತ್ತಲೇ ಹೋಯ್ತು.

ಎಲ್.ಕೆ.ಆಡ್ವಾಣಿ ಅವರ ಬಹು ದೊಡ್ಡ ಶಕ್ತಿಯಾಗಿ (ಅಯೋಧ್ಯಾ ರಥ ಯಾತ್ರೆ ಸಂದರ್ಭ) ಮೋದಿ ತನ್ನನ್ನು ಗುರುತಿಸಿಕೊಂಡರು. ಗುಜರಾತ್ ಬಿಜೆಪಿಯ ರಾಜ್ಯ ರಾಜಕಾರಣವು ಅಸ್ಥಿರತೆಯೊಂದಿಗೆ ಕಂಪಿಸುತ್ತಿದ್ದಾಗ, ಭಿನ್ನ ಮತೀಯರ ಅಂತಃ ಕಲಹದಿಂದ ಕಲಕಲ್ಪಟ್ಟಿದ್ದಾಗ, ಮೋದಿ ನೇರವಾಗಿ "ನನಗೊಂದು ಅವಕಾಶ ಕೊಟ್ಟು ನೋಡಿ, ಗುಜರಾತಿನಲ್ಲಿ ಎಲ್ಲವನ್ನೂ ಸರಿಪಡಿಸುತ್ತೇನೆ" ಎಂದು ಕೇಂದ್ರ ಸರಕಾರದ ಆಗಿನ ಪ್ರಧಾನಿ ವಾಜಪೇಯಿಯವರ ಬಳಿ ಕೇಳಿದಾಗ, ಲಾಲ್ಕೃಷ್ಣ ಆಡ್ವಾಣಿ ವಾಜಪೇಯಿಯವರನ್ನು ಒಪ್ಪಿಸಿ ಮೋದಿಯನ್ನು ಗುಜರಾತಿನ ಮುಖ್ಯಮಂತ್ರಿನ್ನಾಗಿ ನಿಯೋಜಿಸುವ ವಿಚಾರವನ್ನು ಆಗಗೊಳಿಸುತ್ತಾರೆ.

2001ರಲ್ಲಿ ಮೋದಿ ಗುಜರಾತಿನ ಮುಖ್ಯಮಂತ್ರಿಯಾದರು. ನಂತರ ರಾಜ್ಯ ರಾಜಕೀಯದಲ್ಲಿ ಗಟ್ಟಿಯಾಗಿ ನಿಂತೇ ಬಿಟ್ಟರು. 2005 ನವೆಂಬರ್ವರೆಗೂ ಶುಕ್ರ ದಶಾ ನಡೆದೇ ಇತ್ತು. ಆದಾಗ್ಯೂ 2002 ರ ಆದಿ ಭಾಗದಲ್ಲಿ ಗೋಧ್ರಾ ಹತ್ಯಾ ಕಾಂಡ ಮೋದಿಯವರನ್ನು ಆಮೂಲಾಗ್ರವಾಗಿ ಅಲ್ಲಾಡಿಸಿತು. ಈ ರೀತಿಯ ಮತೀಯ ದಳ್ಳುರಿಯನ್ನು ಎಷ್ಟೇ ದೊಡ್ಡ ಚಾಲಾಕಿ, ಜನಪ್ರಿಯ ನಾಯಕನಾದರೂ ನಿಭಾಯಿಸಿ, ಅಧಿಕಾರದಲ್ಲಿ ಮುಂದುವರಿಯುವುದು ಅತ್ಯಂತ ಕಷ್ಟದ ಕಾಯಕ. ಆದರೂ ಶುಕ್ರ ದಶಾದ ಅಂತ್ಯದ ಕಾಲಕ್ಕೆ ಈ ಅಗ್ನಿ ದಿವ್ಯವನ್ನು ಮೋದಿ ಮೆಟ್ಟಿನಿಂತರು.

ಶುಕ್ರ ದಶಾ ಮುಗಿದು ರವಿ ದಶಾ ಕಾಲ ಬರುವಾಗ ಈ "ಶುಕ್ರಾದಿತ್ಯ ಸಂಧಿ ಕಾಲ"ದ ಬಿಸಿ ಶಾಖವನ್ನೂ ಮೋದಿ ನಿಭಾಯಿಸಿದರು. ಗೋಧ್ರಾ ಹತ್ಯಾಕಾಂಡದ ಬಿರುಗಾಳಿಯ ತೀವ್ರತೆ ಮೋದಿಯವರ ಮುಖ್ಯಮಂತ್ರಿ ಪಟ್ಟದ ಆಪೋಶನ ಪಡೆದೇ ತೀರುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿತ್ತು. ಆದರೆ ಮೋದಿ ಅಧಿಕಾರ ಕಳೆದುಕೊಳ್ಳದೇ ಹೋದದ್ದು ಬರುತ್ತಿರುವ ರವಿ ದಶಾ ಕಾಲ ಕೂಡಾ ಮೋದಿಯನ್ನು ಎತ್ತಿ ಹಿಡಿಯುವ ಅದರ ಅನುಗ್ರಹದಿಂದಾಗಿಯೇ ಸಾಧ್ಯವಾಯಿತು. ಗೋಧ್ರಾ ಹತ್ಯಾಕಾಂಡದ ಕುರಿತಾದ ಒಂದು ಕಪ್ಪು ಚುಕ್ಕಿಯೂ ಇರದಂತೆ ಮೋದಿಯವರ ಜನ್ಮ ಕುಂಡಲಿಯ ಸೂರ್ಯ ಗ್ರಹ ಅವರನ್ನು ಬಲಿಷ್ಠಗೊಳಿಸಿತು. 2011 ನವೆಂಬರ್ನಲ್ಲಿ ರವಿ ದಶಾ ಮುಗಿದು ಚಂದ್ರ ದಶಾ ಕಾಲ ಬಂತು.

ಚಂದ್ರ ದಶಾ ಕಾಲ:

ಚಂದ್ರ ದಶಾ ಕಾಲ ಒಟ್ಟು 10 ವರ್ಷ ಅವಧಿಯದ್ದು. ಈ ಅವಧಿಯು ಪ್ರಮುಖವಾಗಿ ಮೋದಿ ಪಾಲಿಗೆ ಜೀವನದ ಸುವರ್ಣ ಯುಗವೇ ಆಗಿ ಪರಿವರ್ತನೆಗೊಂಡಿತ್ತು. 2014 ರಲ್ಲಿ ಮೋದಿ ಅವರು ಭಾರತದ ಪ್ರಧಾನಿಯಾಗಿ ಆಯ್ಕೆಯಾದರು. ನಿರೀಕ್ಷಿಸಲು ಸಾಧ್ಯವಾಗದಷ್ಟು ಬಹುಮತವನ್ನು ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಒದಗಿಸಿದರು. ಇದನ್ನೂ ಮೀರಿದ ಬಹು ದೊಡ್ಡ ಕುತೂಹಲಕಾರಿ ಅಂಶ ಎಂದರೆ ಮಹತ್ತರವಾದ ಈ ಯಶಸ್ಸು ಶನಿ ಕಾಟ - ಅದೂ ಸಾಡೇಸಾತಿ ಶನಿ ಕಾಟ ಇದ್ದಾಗಲೂ ಮಹತ್ವದ ಜಯ ಸಂಪಾದಿಸಿದ್ದು ಒಂದು ಪವಾಡವೇ ಆಯ್ತು. ಮೋದಿ ಪಾಲಿಗೆ ಶನಿ ಗ್ರಹದ ಈ ಮೃದುತ್ವ ಒಂದು ದೈವೀಕವಾದ ಅನುಗ್ರಹ. ವಾಸ್ತವಕ್ಕೂ ಇದು ಸೋಜಿಗ. 2019ರಲ್ಲಿ ಕೂಡಾ ಸಾಡೇಸಾತಿ ಶನಿ ಕಾಟ ಮುಂದುವರಿದೇ ಇತ್ತು. ಆಗಲೂ 2014 ರ ಲೋಕಸಭಾ ಚುನಾವಣಾ ಯಶಸ್ಸನ್ನೂ ಹಿಂದಿಕ್ಕಿದ ಭಾರೀ ಪ್ರಮಾಣದ ಜಯವನ್ನು ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಸಾಧ್ಯಗೊಳಿಸಿದರು. ಮುಟ್ಟಿದ್ದೆಲ್ಲವನ್ನೂ ಬಹು ಮಟ್ಟಿಗೆ ಚಿನ್ನವನ್ನಾಗಿಸಿದರು ಎಂಬುದು ಈಗ ಇತಿಹಾಸ. ಆದರೆ 2023 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ತುಸು ಮಂಕಾದರು. ನೀಚಭಂಗ ರಾಜಯೋಗ ಪಡೆದಿದ್ದ ಚಂದ್ರನ ದಶಾ ಕಾಲ 2021ರ ನವೆಂಬರ್ನಲ್ಲಿ ಮುಗಿದಿತ್ತು. ಕುಜ ದಶಾ ಕಾಲ ಶುರುವಾಗಿತ್ತು. ಕುಜನೂ ಬಲಾಢ್ಯನೇ ಆಗಿದ್ದಾನೆ ಮೋದಿಯ ಜಾತಕ ಕುಂಡಲಿಯಲ್ಲಿ. ಆದರೆ ರಾಹು ಭುಕ್ತಿಯ ಘಟ್ಟ ಇದ್ದಿದ್ದರಿಂದ ಕೇವಲ ಬಿಜೆಪಿಯ ಬಲದ ಮೇಲಿಂದಲೇ ಸರಕಾರ ನಡೆಸಬಲ್ಲೆ ಎಂಬ ವ್ಯಾಪ್ತಿಗೆ ಅವಲಂಬಿಸಿ ಸಾಗುವ ಸುರಳೀತ ಸ್ಥಿತಿಯನ್ನು ರಾಹು ಮೋದಿಯವರಿಗೆ ಒದಗಿಸಲಿಲ್ಲ. ಆದರೂ ಮಂಗಳನ ಕೃಪೆಯಿಂದ ಮೂರನೇ ಅವಧಿಗೆ ಪ್ರಧಾನಿಯಂತೂ ಆದರು. ಈ ಲೇಖನ ಬರೆಯುತ್ತಿರುವಾಗ ದೀರ್ಘ ಅವಧಿಗೆ ಪ್ರಧಾನ ಮಂತ್ರಿ ಪಟ್ಟದಲ್ಲಿ ನೆಹರು ಅವರ ನಂತರ ಎರಡನೆಯವರಾಗಿದ್ದ ಇಂದಿರಾ ಗಾಂಧಿಯವರನ್ನೂ ಹಿಂದಿಕ್ಕಿ ಮೋದಿ ಮುನ್ನಡೆಯುತ್ತಿದ್ದಾರೆ.

ಮೂರನೆಯ ಅವಧಿಯ ಪ್ರಧಾನಿ ಪಟ್ಟ:

ಮೂರನೇ ಬಾರಿಗೆ ಪ್ರಧಾನಿ ಪಟ್ಟ ಏರಿದ 2024 ರ ಸಂದರ್ಭದಲ್ಲಿ ವಾಸ್ತವಕ್ಕೆ ಶನಿ ಕಾಟ ಇಲ್ಲ. ಆದರೂ ಬಿಜೆಪಿ ಏಕಾಂಗಿಯಾಗಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಯಿತು. ಆದರೆ ಕಳೆದ ಮಾರ್ಚ್ 29 ರಿಂದ ಮೋದಿ ಪಾಲಿಗೆ ಪಂಚಮ ಶನಿ ಕಾಟ ಶುರುವಾಗಿದೆ. ಈ ಕಾಟದ ತಾಪತ್ರಯವೋ ಎಂಬಂತೆ ಇದೀಗ ಬರುವ ಸೆಪ್ಟಂಬರ್ನಲ್ಲಿ ಮೋದಿಯವರಿಗೆ ಬರೋಬ್ಬರಿ ವಯೋಮಾನದ 75 ಸಂವತ್ಸರಗಳೂ ಮುಗಿದಿರುತ್ತದೆ ಎಂಬ ಅಂಶ ಮೋದಿಯವರನ್ನು ಇಕ್ಕಟ್ಟಿಗೆ ತಂದು ನಿಲ್ಲಿಸುತ್ತಿದೆ.

ಹಾಗಾದರೆ ಮೋದಿ ಅಲ್ಲಿಗೆ ಪದ ತ್ಯಾಗ ಮಾಡುವರೆ? ಆರೆಸ್ಸೆಸ್ ವರಿಷ್ಠರಾದ ಮೋಹನ್ ಭಾಗವತ್ ಅವರು ಪದತ್ಯಾಗದ ವಿಚಾರದಲ್ಲಿ ಆರೆಸ್ಸೆಸ್ ಹೇಗೆ ಒಂದು ಎಥಿಕ್ಸ್ ಪರಿಪಾಲಿಸುತ್ತದೆ ಎಂದು ತಮ್ಮ ತೀರಾ ಇತ್ತೀಚಿನ ಒಂದು ಭಾಷಣದಲ್ಲಿ ಹೇಳಿದ್ದರು. ಸೂಕ್ಷ್ಮವನ್ನೇ ಹುಡುಕಿ ಹೊರಟರೆ ಮೋದಿಯವರಿಗೆ ಕೊಟ್ಟ ಅಪ್ರತ್ಯಕ್ಷ ಸೂಚನೆಯೊಂದು ಇತ್ತೇ ಅದರಲ್ಲಿ ಎಂಬ ಜಿಜ್ಞಾಸೆ ರಾಜಕೀಯ ವಲಯದಲ್ಲಿದೆ ಸದ್ಯ.

ಸದ್ಯ ಮೋದಿ ಅವರ ಕುಂಡಲಿಯಲ್ಲಿ ಪಂಚಮ ಶನಿ ಕಾಟವಿದ್ದು, ಈ ಸಂದರ್ಭದಲ್ಲೇ ಜಗದೀಪ್ ಧನಕರ್ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಕೊಟ್ಟಿರುವ ವಿಚಾರ, ಹೊಸ ಉಪರಾಷ್ಟ್ರಪತಿ ಆಯ್ಕೆ, ಬಿಹಾರ ಚುನಾವಣೆ, ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮುಂತಾದ ವಿಚಾರಗಳು ಮೋದಿ ಅವರನ್ನು ಕಾಡುತ್ತಲೇ ಇದೆ.

'ಸೆಪ್ಟೆಂಬರ್ ಬರಲಿ' ಎಂಬುದು ಎಲ್ಲರೂ ಕಾದು ನೋಡುತ್ತಿರುವ ವಿಷಯ. ಆದರೆ, ಸದ್ಯ ಮೋದಿ ಅವರು ಪ್ರಾಣದ ಕುರಿತೂ ಅತ್ಯಂತ ಎಚ್ಚರದಲ್ಲಿ ಇರುವುದು ತುಂಬಾ ಮುಖ್ಯ. ಚಂದ್ರ ಗ್ರಹ ಪಂಚಮ ಶನಿ ಕಾಟದ ಸಂದರ್ಭವಾಗಿರುವುದರಿಂದ, ಶನಿ ಕಾಟದ ಘಟಕವಾಗಿ ಅವನೂ ಪರಿವರ್ತನೆಗೊಳ್ಳುವುದರಿಂದ ಮೋದಿ ಪಾಲಿಗೆ ಸದ್ಯ ತೀರಾ ದುರ್ಬಲನೇ ಆಗಿರುತ್ತಾನೆ. ಕುಜ ರಾಹು ಸಂಧಿಯು, 2028 ನವೆಂಬರ್ನಲ್ಲಿ ತೀರಾ ಸೂಕ್ಷ್ಮವಾದ ಕಾಲಘಟ್ಟವನ್ನು ಹೆಣೆಯುತ್ತದೆ. ಸಂಧಿ ದೋಷ ಸೂಕ್ಷ್ಮವೇ ಇದೆ. ಮೋದಿ ನಂತರ ಯಾರು ಎಂಬುದೂ ಅವರ ಮುಂದಿರುವ ಸವಾಲು. ಮೋದಿ ಮುಂದುವರಿದರೂ, 2027 ಮೇ ತಿಂಗಳಲ್ಲಿ ಲೋಕಸಭೆಗೆ ನಡುಗಾಲ ಚುನಾವಣೆ ಆಗಿ ಬಿಡಬಹುದೇ ಎಂಬ ವಿಚಾರವನ್ನು ರಾಹು ಗ್ರಹ ಹೊಯ್ದಾಡಿಸಿ, ಆಗುವಂತೆ ಮಾಡಿದರೆ ಆಶ್ಚರ್ಯವೇನಿಲ್ಲ.

ಪರಿಹಾರ:

ದಕ್ಷಿಣ ಭಾರತದ ಬಹುಮುಖ್ಯ ಶಿವ ದೇವಾಲಯವನ್ನು, ಅದಕ್ಕೂ ಪೂರ್ವದಲ್ಲಿ ಅದೇ ಊರಿನ ಗಣಪತಿ ದೇವಾಲಯವನ್ನು ಮೋದಿ ದರ್ಶನ ಮಾಡುವುದು ಸೂಕ್ತ. 2024ರಲ್ಲೇ ಈ ದರ್ಶನ ಮಾಡದೇ ಹೋದದ್ದರಿಂದಲೇ ಬಿಜೆಪಿಯ ಬಲ ಕುಂದಿ ಎನ್ಡಿಎ ಮಿತ್ರ ಪಕ್ಷಗಳನ್ನು ಮೋದಿ ಅವಲಂಬಿಸಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂತು ಎಂಬುದು ಗೋಚರಿಸುತ್ತಿರುವ ಅಂಶ. ಮೋದಿಯವರ ಜಾತಕದ ಕೇತುವಿನ ವಿಚಾರ ಇದನ್ನು ಈ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ.

ಕಾಲಘಟ್ಟ ಈಗ ಅಸುರಕ್ಷಿತವೆ?:

ಮೋದಿ ಅವರಿಗೆ ನಿರಂತರವಾದ ರಕ್ಷಣೆ, ಭೈರವ ಹಾಗೂ ದುರ್ಗಾ ಹೀಗೆ ಅವಳೀ ಶಕ್ತಿಯ ಸಂಯುಕ್ತ ಫಲವಾಗಿ ಇದೆ ಎಂಬುದು ಸರಿಯಾದರೂ, ಸದ್ಯದ ಮಂಗಳ ಗ್ರಹದ ಮಹಾ ದಶಾದ ಮುಕ್ತಾಯದ ಹಂತದಲ್ಲಿ ಪಂಚಮ ಶನಿ ಕಾಟ ಬಂದಿರುವುದು ಹಲವಾರು ರೀತಿಯಲ್ಲಿ ಕಿರಿಕಿರಿಯ ಅಂಶವಾಗಿದೆ. ಮಂಗಳನ ಮಹಾ ದಶಾದ ನಂತರದ ರಾಹು ಮಹಾ ದಶಾಕ್ಕಿಂತ ಮುಂಚೆಯೇ ಸದ್ಯ ಹಲವಾರು ಸಮಸ್ಯೆಗಳನ್ನು ಮೋದಿಯವರು ಎದುರಿಸಲೇಬೇಕಾಗಿ ಬರುತ್ತದೆ. ಹಲವು ತಾಪತ್ರಯಗಳನ್ನು ಅವರು ದೇಶದ ಒಳಗೂ ಹೊರಗೂ ಮಾಂದಿ ಎಂಬ ಕ್ಷುದ್ರ ಸಮುಚ್ಚಯದ ಫಲವಾಗಿ ಎದುರಿಸಬೇಕಾಗಿ ಬರುತ್ತದೆ. 2028 ಜೂನ್ ತಿಂಗಳಲ್ಲಿ ಕುಜ ರಾಹು ಶಾಂತಿ ಅತ್ಯಂತ ಅವಶ್ಯ. ಇದೀಗ ಪ್ರಧಾನಿ ಪಟ್ಟ ಸ್ವೀಕರಿಸಿದ ಈ ಹನ್ನೊಂದು ವರ್ಷಗಳಿಗಿಂತಲೂ ಭಿನ್ನವಾದ ಸವಾಲನ್ನು ಎದುರಿಸಬೇಕಾಗುತ್ತದೆ. ಎದುರಿಸುತ್ತಲೂ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.