ಬುಧವಾರ, ಸೆಪ್ಟೆಂಬರ್ 22, 2021
23 °C

ಔಡಿ ಆರ್‌ಎಸ್‌ಕ್ಯು8 ಎಸ್‌ಯುವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಚ್ಚ ಹೊಸ ಆರ್‌ಎಸ್‌ಕ್ಯು8 ಅತ್ಯಂತ ಶಕ್ತಿಶಾಲಿ ಪ್ರೀಮಿಯಂ ಎಸ್‌ಯುವಿ ಆಗಿದೆ ಎಂದು ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಔಡಿ ಹೇಳಿದೆ. ಇದರ ಬೆಲೆ ₹ 2.07 ಕೋಟಿಯಿಂದ ಆರಂಭವಾಗುತ್ತದೆ. ‘ಭಾರತದಲ್ಲಿ ಔಡಿ ಆರ್‌ಎಸ್‌ ಕ್ಯು8 ದಾಖಲೆ ನಿರ್ಮಿಸುವುದನ್ನು ವೀಕ್ಷಿಸಲು ನಾವು ಉತ್ಸುಕರಾಗಿದ್ದೇವೆ. ಇದು ಆಲ್-ಇನ್-ಒನ್ ಮಾದರಿಯದ್ದಾಗಿದ್ದು, ಅತ್ಯಾಕರ್ಷಕವಾದ ಹೊರಾಂಗಣ ವಿನ್ಯಾಸದೊಂದಿಗೆ ಉನ್ನತ ಕಾರ್ಯಕ್ಷಮತೆಯ ಸ್ಪೋರ್ಟ್ಸ್‌ ಕಾರ್ ಆಗಿದೆ. 3.8 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0–100 ಕಿಲೋಮೀಟರ್ ವೇಗವನ್ನು ಹೆಚ್ಚಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿದೆ’ ಎಂದು ಕಂಪನಿಯ ಭಾರತದ ಮುಖ್ಯಸ್ಥ ಬಲಬೀರ್ ಸಿಂಗ್ ಧಿಲ್ಲಾನ್ ತಿಳಿಸಿದ್ದಾರೆ.

ಟ್ವಿನ್‌ ಟರ್ಬೊ 4.0ಲೀಟರ್‌ ಟಿಎಫ್‌ಎಸ್‌ಐ ಎಂಜಿನ್‌ ಹೊಂದಿದೆ. ಸಿಲಿಂಡರ್ ಆನ್ ಡಿಮ್ಯಾಂಡ್(ಸಿಒಡಿ) ತಂತ್ರಜ್ಞಾನವನ್ನು ಹೊಂದಿದ್ದು, ವಿದ್ಯುತ್‍ ಕಡಿಮೆ ಇದ್ದಾಗ ಇಂಧನ ಉಳಿಸುವ ನಿಟ್ಟಿನಲ್ಲಿ ಸಿಲಿಂಡರ್‌ಗಳನ್ನು ಆಫ್ ಮಾಡುತ್ತದೆ. 8 ಸ್ಪೀಡ್‍ನ ಟಿಪ್‍ಟ್ರಾನಿಕ್ಸ್‌ ಗೇರ್ ಬಾಕ್ಸ್ ಒಳಗೊಂಡಿದೆ. ಆಲ್-ವ್ಹೀಲ್ ಸ್ಟೇರಿಂಗ್, ಆರ್‌ಎಸ್‌ ರೂಫ್ ಸ್ಪಾಯ್ಲರ್, ವರ್ಚುವಲ್ ಕಾಕ್‍ಪಿಟ್, ಸ್ಪೋರ್ಟ್ ಅಡಾಪ್ಟಿವ್ ಏರ್ ಸಸ್ಪೆನ್ಷನ್ ಮತ್ತು 2 ಆರ್‌ಎಸ್‌ ಮೋಡ್‍ಗಳ ಪರ್ಸನಲೈಸ್ಡ್ ಡ್ರೈವ್ ಸೆಟ್ಟಿಂಗ್‍ಗಳನ್ನು ಒಳಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು