ಮಂಗಳವಾರ, ಮೇ 17, 2022
26 °C

ಗ್ರಾಜಿಯಾ ಸ್ಪೋರ್ಟ್ಸ್‌ ಆವೃತ್ತಿ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಚ್‌ಎಂಎಸ್ಐ) ಕಂಪನಿಯು ತನ್ನ ಗ್ರಾಜಿಯಾ ಸ್ಕೂಟರ್‌ನ ಸ್ಪೋರ್ಟ್ಸ್‌ ಆವೃತ್ತಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 82,564 ಇದೆ.

‘ಹಿಂದಿನ 20 ವರ್ಷಗಳಲ್ಲಿ ಸ್ಕೂಟರ್ ಮಾರುಕಟ್ಟೆಯನ್ನು ಮರು ಸೃಷ್ಟಿಸಿರುವ ಹೋಂಡಾ, ಕಾಲದ ಜತೆಗೆ ಬೆಳೆಯುತ್ತಲೇ ಬಂದಿದೆ. ಪ್ರೀಮಿಯಂ ಸ್ಕೂಟರ್ ವಲಯದಲ್ಲಿ ಹೆಚ್ಚು ಸಂಭ್ರಮ ತರಲು, ಈ ವಿಭಾಗದಲ್ಲಿನ ಅತ್ಯಂತ ಸುಧಾರಿತ ಸ್ಕೂಟರ್ ಆಗಿರುವ ಗ್ರಾಜಿಯಾದ ಹೊಸ ಸ್ಪೋರ್ಟ್ಸ್‌ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಲು ನಮಗೆ ಸಂತಸವಾಗುತ್ತಿದೆ’ ಎಂದು ಕಂಪನಿಯ ಅಧ್ಯಕ್ಷ ಅತ್ಸುಶಿ ಒಗಾಟಾ ಪ್ರತಿಕ್ರಿಯೆ ನೀಡಿದ್ದಾರೆ.

‘ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್‍ಗಳಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸುತ್ತಿರುವ ಸದ್ಯದ ಸಂದರ್ಭದಲ್ಲಿ ಗ್ರಾಜಿಯಾ ಸ್ಪೋರ್ಟ್ಸ್‌ ಆವೃತ್ತಿಯು, ತಮ್ಮ ಸಂಚಾರಕ್ಕೆ ದ್ವಿಚಕ್ರ ವಾಹನ ಬಯಸುವವರ ಹೊಸ ಆಯ್ಕೆ ಆಗಿರಲಿದೆ’ ಎಂದು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದುವೀಂದರ್‌ ಸಿಂಗ್ ಗುಲೇರಿಯಾ ಹೇಳಿದ್ದಾರೆ.

ಬಿಎಸ್6 ಮಾನದಂಡದ 125ಸಿಸಿ ಎಂಜಿನ್‌ ಹೊಂದಿದ್ದು, ಐಡಲಿಂಗ್ ಸ್ಟಾಪ್ ಸಿಸ್ಟಂನಂತಹ ಸ್ಮಾರ್ಟ್ ಸೌಲಭ್ಯಗಳು ಈ ಸ್ಕೂಟರ್‌ನಲ್ಲಿ ಇವೆ. ದೇಶದಾದ್ಯಂತ ಇರುವ ಕಂಪನಿಯ ದ್ವಿಚಕ್ರವಾಹನ ವಿತರಣಾ ಕೇಂದ್ರಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು