ಬೆಂಗಳೂರು: ದೇಶದ ಮಾರುಕಟ್ಟೆಗೆ ಸೆಪ್ಟೆಂಬರ್‌ನಲ್ಲಿ ನೂತನ ಕಾರುಗಳು ಲಗ್ಗೆ ಇರಿಸಲು ಸಜ್ಜಾಗಿವೆ. ಸಾಲು ಸಾಲು ಹಬ್ಬಗಳು ಕೂಡ ಬರುತ್ತಿದ್ದು, ಅದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಕೂಡ ಉತ್ಸಾಹ ಕಂಡುಬಂದಿದೆ.
ಹಬ್ಬದ ಸಂದರ್ಭದಲ್ಲಿ ಹೊಸ ಕಾರು ಖರೀದಿ ಮತ್ತು ಮಾರಾಟ ಹೆಚ್ಚಾಗುವುದರಿಂದ, ನಾಲ್ಕು ನೂತನ ಕಾರುಗಳನ್ನು ಪರಿಚಯಿಸಲು ಟಾಟಾ, ಹುಂಡೈ, ಪೋಕ್ಸ್‌ವ್ಯಾಗನ್ ಮತ್ತು ಕಿಯಾ ಕಂಪನಿಗಳು ಮುಂದಾಗಿದೆ.
ಸೆಪ್ಟೆಂಬರ್‌ನಲ್ಲಿ ಕಿಯಾ ಕಂಪನಿ ನೂತನ ಸೆಲ್ಟೋಸ್ ಎಕ್ಸ್ ಲೈನ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದರೆ, ಹುಂಡೈ i20 ಎನ್ ಲೈನ್ ಮಾದರಿಯನ್ನು ಮತ್ತು ಪೋಕ್ಸ್‌ವ್ಯಾಗನ್ ಟೈಗುನ್ 2021 ಆವೃತ್ತಿ ಹಾಗೂ ಟಾಟಾ ಮೋಟಾರ್ಸ್ ನೂತನ ಪಂಚ್ ಕಾರು ಪರಿಚಯಿಸುತ್ತಿದೆ.
ಈ ಪೈಕಿ, ಕಿಯಾ ಸೆಲ್ಟೋಸ್, ಹುಂಡೈ i20 ಮತ್ತು ಪೋಕ್ಸ್‌ವ್ಯಾಗನ್ ಟೈಗುನ್ ಈ ಮೊದಲೇ ಬಿಡುಗಡೆಯಾಗಿರುವ ಮಾದರಿಗಳ ಪರಿಷ್ಕೃತ ಆವೃತ್ತಿಗಳಾಗಿದ್ದರೆ, ಟಾಟಾ ಮಾತ್ರ ನೂತನ ಪಂಚ್ ಎಂಬ ಮಿನಿ ಎಸ್‌ಯುವಿ ಕಾನ್ಸೆಪ್ಟ್ ಕಾರು ಬಿಡುಗಡೆ ಮಾಡುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.