ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Renault India Kwid: ರೆನೊ ಇಂಡಿಯಾದ ಹೊಸ ಕಾರು ಬಿಡುಗಡೆ

Published 23 ಜನವರಿ 2024, 13:16 IST
Last Updated 23 ಜನವರಿ 2024, 13:16 IST
ಅಕ್ಷರ ಗಾತ್ರ

ಬೆಂಗಳೂರು: ಫ್ರಾನ್ಸ್‌ನ ಕಾರು ತಯಾರಕಾ ಕಂಪನಿ ರೆನೊ ಇಂಡಿಯಾ ಭಾರತದ ಮಾರುಕಟ್ಟೆಗೆ ತನ್ನ ಹೊಸ ಮಾದರಿಯ ಮೂರು ಕಾರುಗಳನ್ನು ಬಿಡುಗಡೆ ಮಾಡಿದೆ.

ಜತೆಗೆ, ಮುಂದಿನ ಮೂರು ವರ್ಷಗಳಲ್ಲಿ ಕಂಪನಿಯು ಐದು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. 

ಕಿಗರ್‌, ಟ್ರೈಬರ್‌ ಮತ್ತು ಕ್ವಿಡ್‌ ಕಾರುಗಳನ್ನು ಬಿಡುಗಡೆ ಮಾಡಿದ್ದ, ಈ ಕಾರುಗಳ ಬುಕಿಂಗ್‌ ಈಗಾಗಲೇ ಆರಂಭವಾಗಿದೆ. ಕಂಪನಿಯು ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಗೆ ಬದ್ಧವಾಗಿದ್ದು, ಚೆನ್ನೈನಲ್ಲಿ ತನ್ನ ಉತ್ಪಾದನಾ ಘಟಕ ಹೊಂದಿದೆ. ಜೊತೆಗೆ ಲಾಜಿಸ್ಟಿಕ್ಸ್‌, ಟೆಕ್ನಾಲಜಿ ಸೆಂಟರ್‌ ಮತ್ತು ವಿನ್ಯಾಸ ಸ್ಟುಡಿಯೊಗಳನ್ನು ಹೊಂದಿದೆ ಎಂದು ಸೋಮವಾರ ಕಂಪನಿಯ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ನ ಉಪಾಧ್ಯಕ್ಷ ಸುಧೀರ್‌ ಮಲ್ಹೋತ್ರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಯೊಂದು ಕಾರುಗಳು 10ಕ್ಕೂ ಹೆಚ್ಚು ವೈಶಿಷ್ಟ್ಯ ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ಶ್ರೇಣಿಯ ಕಾರುಗಳಿಗೆ 2 ವರ್ಷದ ಪ್ರಮಾಣಿತ ವಾರಂಟಿ ಮತ್ತು 7 ವರ್ಷಗಳ ವಿಸ್ತೃತ ವಾರಂಟಿಯನ್ನು ನೀಡುತ್ತಿದೆ. ಪ್ರತಿ ಕಾರಿನ ಶ್ರೇಣಿಯು, ಹಲವು ಮಾದರಿಗಳನ್ನು ಒಳಗೊಂಡಿದ್ದು, ಬೆಲೆಯು ಮಾದರಿಯಿಂದ ಮಾದರಿಗೆ ವ್ಯತ್ಯಾಸವಿದೆ ಎಂದು ತಿಳಿಸಿದರು.

ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿ‌ಟ್ಟುಕೊಂಡು ಕಾರನ್ನು ತಯಾರಿಸಲಾಗಿದೆ. ಪ್ರತಿಯೊಂದು ಕಾರಿಗೂ ತನ್ನದೇ ಆದ ವಿಶೇಷತೆ ಮತ್ತು ಬೆಲೆ ಇವೆ ಎಂದರು.

ರೆನೊ ಕೆಡಬ್ಲ್ಯುಡಿ 2024: ಕ್ವಿಡ್‌ ಶ್ರೇಣಿಯ ಕಾರುಗಳಲ್ಲಿ ನಾಲ್ಕು ಮಾದರಿಗಳಿದ್ದು, ಡ್ಯುಯಲ್‌ ಟೋನ್‌ ಬಣ್ಣದಲ್ಲಿ ಲಭ್ಯವಿದೆ. ಆರ್‌.ಎಕ್ಸ್‌.ಎಲ್‌ (ಒ) ಮಾದರಿ ಕಾರಿನಲ್ಲಿ 8 ಇಂಚಿನ ಟಚ್‌ಸ್ಕ್ರೀನ್‌ ಮೀಡಿಯಾ ಎನ್‌ಎವಿ ವ್ಯವಸ್ಥೆ ಇದೆ. ಹಿಂದಿನ ಸೀಲ್ಟ್‌ ಬೆಲ್ಟ್‌ ರಿಮೈಂಡರ್‌, 14ಕ್ಕೂ ಸುರಕ್ಷತೆ ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕರಿಗೆ ಹೆಚ್ಚು ಸುರಕ್ಷತೆ ಒದಗಿಸಲಿದೆ. ಈ ಶ್ರೇಣಿಯ ಕಾರುಗಳು ₹4.69 ಲಕ್ಷದಿಂದ ಆರಂಭವಾಗಲಿದೆ ಎಂದು ತಿಳಿಸಿದರು.

ರೆನೊ ಟ್ರೈಬರ್‌: ಈ ಶ್ರೇಣಿಯ ಕಾರುಗಳಲ್ಲಿ ನಾಲ್ಕು ಮಾದರಿಗಳಿವೆ. ಚಾಲಕನ ಅಗತ್ಯಗಳನ್ನು ಪೂರೈಸಲು ಆಧುನಿಕ ತಂತ್ರಜ್ಞಾನವುಳ್ಳ 7 ಇಂಚಿನ ಟಿ.ಎಫ್‌.ಟಿ ಇನ್ಟ್ರುಮೆಂಟ್‌ ಕ್ಲಸ್ಟರ್‌ ಮತ್ತು ವೈರ್‌ಲೆಸ್ ಚಾರ್ಜರ್‌ ಇದೆ. ಆರ್‌.ಎಕ್ಸ್‌.ಟಿಯು ಮಾದರಿಯು ರಿಯರ್‌ ವ್ಯೂ ಕ್ಯಾಮೆರಾ ಮತ್ತು ಹಿಂಭಾಗದ ವೈಪರ್‌ನ್ನು ಹೊಂದಿದೆ. ಎಲ್‌ಇಡಿ ಕ್ಯಾಬಿನ್‌ ಲ್ಯಾಪ್‌ಗಳು, ಕ್ಯಾಬಿನ್‌ ಒಳಗೆ ಸ್ವಚ್ಛ ಗಾಳಿ ಬರಲು ಪಿಎಂ 2.5 ಏರ್‌ ಫಿಲ್ಟರ್‌ ಇದೆ. ಈ ಶ್ರೇಣಿಯ ಕಾರಿನಲ್ಲಿ 15ಕ್ಕೂ ಹೆಚ್ಚು ಸುರಕ್ಷತೆ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಶ್ರೇಣಿಯ ಕಾರುಗಳು ₹5.59 ಲಕ್ಷದಿಂದ ಆರಂಭವಾಗಲಿದೆ.

ರೆನೊ ಕಿಗರ್‌: ಈ ಶ್ರೇಣಿಯ ಕಾರುಗಳಲ್ಲಿ 5 ಮಾದರಿಗಳಿವೆ. ಐಷಾರಾಮಿ ಸೆಮಿ–ಲೆದರೆಟ್‌ ಸೀಟುಗಳು, ಲೆದರೆಟ್‌ ಸ್ಟೀರಿಂಗ್‌ ವ್ಹೀಲ್‌ಗಳಿವೆ. ಸ್ವಯಂಚಾಲಿತ ಪೋಲ್ಡ್‌ ಔಟ್‌ ರಿಯರ್‌–ವ್ಯೂ ಮಿರರ್‌ಗಳಿವೆ. ಆರ್.ಎಕ್ಸ್‌.ಟಿ (ಒ) ಮಾದರಿಯಲ್ಲಿ ಪವರ್‌ಫೋಲ್ಡ್‌, ಒ.ಆರ್‌.ವಿ.ಎಂ, ಆರ್‌.ಎಕ್ಸ್‌.ಜೆಡ್‌ನಲ್ಲಿ ಕ್ರೂಸ್‌ ಕಂಟ್ರೋಲ್‌, ಎಲ್‌ಇಡಿ ಕ್ಯಾಬಿನ್‌ ಲ್ಯಾಂಪ್‌, ಹಿಂದಿನ ಸೀಲ್ಟ್‌ ಬೆಲ್ಟ್‌ ರಿಮೈಂಡರ್‌, 15ಕ್ಕೂ ಹೆಚ್ಚು ಸುರಕ್ಷತೆ ವೈಶಿಷ್ಟ್ಯಗಳು, ಎನರ್ಜಿ ಮ್ಯಾನುಯಲ್‌ ಸೇರಿದಂತೆ ಹಲವು ವಿಶೇಷತೆಗಳಿವೆ. ಈ ಕಾರುಗಳ ಬೆಲೆಯು ₹5.99 ಲಕ್ಷದಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT