ಮಂಗಳವಾರ, ಮೇ 17, 2022
25 °C

ರೆನೊ ಹೊಸ ಎಸ್‌ಯುವಿ ಕಿಗರ್ ಬುಕಿಂಗ್ ಶುರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ರೆನೊ ಕಂಪನಿ ತನ್ನ ಹೊಸ ಎಸ್‌ಯುವಿ ‘ಕಿಗರ್’ನ ಬುಕಿಂಗ್‌ಗೆ ಚಾಲನೆ ನೀಡಿದೆ. ಈ ಕಾರಿನ ಎಕ್ಸ್‌ ಷೋರೂಂ ಬೆಲೆಯು ₹ 5.45 ಲಕ್ಷದಿಂದ ₹ 9.55 ಲಕ್ಷದ ನಡುವೆ ಇದೆ.

ಡೀಲರ್‌ಗಳ ಮೂಲಕ ಅಥವಾ ಕಂಪನಿಯ ವೆಬ್‌ಸೈಟ್‌ ಮೂಲಕ ಬುಕಿಂಗ್‌ ಮಾಡಲು ಅವಕಾಶ ಇದೆ. ನಾಲ್ಕು ಮೀಟರ್‌ಗಿಂತ ಕಡಿಮೆ ಇರುವ ಈ ಎಸ್‌ಯುವಿ ವಾಹನದ ವಿನ್ಯಾಸವನ್ನು ಭಾರತ ಮತ್ತು ಫ್ರಾನ್ಸ್‌ನ ತಂಡಗಳು ಜೊತೆಯಾಗಿ ಮಾಡಿವೆ.

‘ಇದು ಆಧುನಿಕ ಕಾಲದ ಎಸ್‌ಯುವಿ. ಭಾರತದ ಮಾರುಕಟ್ಟೆಗೆ ಅತ್ಯಂತ ಸೂಕ್ತವಾಗಿದೆ’ ಎಂದು ಕಂಪನಿಯ ಭಾರತದ ಕಾರ್ಯಾಚರಣೆಗಳ ಸಿಇಒ ವೆಂಕಟರಾಮ್‌ ಎಂ. ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು