ಬುಧವಾರ, ಸೆಪ್ಟೆಂಬರ್ 29, 2021
20 °C
ಟಾಟಾ ನೂತನ ಕಾರ್ ಬಿಡುಗಡೆ ಮಾಡಿದೆ.

ಒಂದೇ ಚಾರ್ಜ್‌ನಲ್ಲಿ 306 ಕಿಮೀ. ಕ್ರಮಿಸುವ ಟಾಟಾ ಎಲೆಕ್ಟ್ರಿಕ್ ಕಾರ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಒಂದು ಬಾರಿ ಚಾರ್ಜ್ ಮಾಡಿದರೆ 306 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿರುವ ನೂತನ ಎಲೆಕ್ಟ್ರಿಕ್ ಕಾರ್ ಅನ್ನು ಟಾಟಾ ಬಿಡುಗಡೆ ಮಾಡಿದೆ.

ನೂತನ ಟಾಟಾ ಟಿಗೊರ್ ಇವಿ ಎಲೆಕ್ಟ್ರಿಕ್ ಕಾರ್ ಬೆಲೆ ದೇಶದಲ್ಲಿ ₹11.99 ಲಕ್ಷ (ಎಕ್ಸ್. ಶೋರೂಂ ದರ) ದಿಂದ ಆರಂಭವಾಗುತ್ತದೆ.

ಹೊಸ ಟಾಟಾ ಟಿಗೊರ್ ಇವಿ, ಎಕ್ಸ್‌ಇ, ಎಕ್ಸ್‌ಎಂ ಮತ್ತು ಎಕ್ಸ್‌ಝೆಡ್+ ಎಂಬ ಮೂರು ಆವೃತ್ತಿಗಳಲ್ಲಿ ಲಭ್ಯವಾಗಲಿದೆ.

ನೂತನ ಎಲೆಕ್ಟ್ರಿಕ್ ಕಾರ್‌ಗೆ ಟಾಟಾ 8 ವರ್ಷ ಮತ್ತು 1,60,000 ಕಿಮಿ. ಬ್ಯಾಟರಿ ಮತ್ತು ಮೋಟಾರ್ ವಾರಂಟಿ ನೀಡಲಿದೆ.

ಉಳಿದಂತೆ ಅಕರ್ಷಕ ವಿನ್ಯಾಸ ಹೊಸ ಟಾಟಾ ಟಿಗೊರ್ ಕಾರಿನಲ್ಲಿದೆ.

ಟಿಗೊರ್ ಇವಿ ಬೆಲೆ ವಿವರ (ಎಕ್ಸ್. ಶೋರೂಂ ದರ)

ಟಾಟಾ ಟಿಗೊರ್ ಎಕ್ಸ್‌ಇ+ ₹11,99,000 ಲಕ್ಷ

ಟಾಟಾ ಟಿಗೊರ್ ಎಕ್ಸ್‌ಎಂ ₹12,49,000 ಲಕ್ಷ

ಟಾಟಾ ಟಿಗೊರ್ ಎಕ್ಸ್‌ಝೆಡ್‌+ ₹12,99,000 ಲಕ್ಷ

ಟಾಟಾ ಟಿಗೊರ್ ಎಕ್ಸ್‌ಝೆಡ್‌+ ಡ್ಯುಯಲ್ ಟೋನ್ ₹13,14,000 ಲಕ್ಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು