ಮಂಗಳವಾರ, ಸೆಪ್ಟೆಂಬರ್ 28, 2021

ಟಾಟಾ ಏಸ್‌ ಗೋಲ್ಡ್‌ ಪೆಟ್ರೋಲ್‌ ಸಿಎಕ್ಸ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟಾಟಾ ಮೋಟರ್ಸ್‌ ಕಂಪನಿಯು ಸಣ್ಣ ವಾಣಿಜ್ಯ ವಾಹನ (ಎಸ್‌ಸಿವಿ) ‘ಏಸ್‌ ಗೋಲ್ಡ್‌ ಪೆಟ್ರೋಲ್‌ ಸಿಎಕ್ಸ್‌’ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 3.99 ಲಕ್ಷದಿಂದ ಆರಂಭವಾಗುತ್ತದೆ.

ಫ್ಲ್ಯಾಟ್‌ ಬೆಡ್‌ ವೇರಿಯಂಟ್‌ ಬೆಲೆ ₹ 3.99 ಲಕ್ಷ ಮತ್ತು ಹಾಲ್ಫ್‌ಡೆಕ್‌ ಲೋಡ್‌ ಬಾಡಿ ವೇರಿಯೆಂಟ್‌ ಬೆಲೆ ₹ 4.10 ಲಕ್ಷ ಇದೆ.

ಗ್ರಾಹಕರು ಈ ಮಾದರಿಯನ್ನು ಖರೀದಿಸಲು ಅನುಕೂಲ ಆಗುವಂತೆ ಹಣಕಾಸಿನ ನೆರವು ಒದಗಿಸಲು ಕಂಪನಿಯು ಎಸ್‌ಬಿಐ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ವಾಹನವು 2 ಸಿಲಿಂಡರ್‌ ಎಂಜಿನ್‌ ಹೊಂದಿದ್ದು 1.5 ಟನ್‌ಗೂ ಹೆಚ್ಚಿನ ತೂಕವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

‘ಟಾಟಾ ಏಸ್‌ ವಾಹನ ಇಲ್ಲಿಯವರೆಗೆ 23 ಲಕ್ಷಕ್ಕೂ ಅಧಿಕ ಭಾರತೀಯರ ಜೀವನೋಪಾಯವಾಗಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಮಿಷನ್‌ಗೆ ಅನುಗುಣವಾಗಿ, ಟಾಟಾ ಮೋಟರ್ಸ್‌ ಕಂಪನಿಯು ಏಸ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ’ ಎಂದು ಕಂಪನಿಯ ಉಪಾಧ್ಯಕ್ಷ ವಿನಯ್‌ ಪಾಠಕ್‌ ಹೇಳಿದ್ದಾರೆ.

ಕಂಪನಿಯು ಇಲ್ಲಿಯವರೆಗೆ ದೇಶದಲ್ಲಿ ಒಟ್ಟಾರೆ 23 ಲಕ್ಷ ‘ಏಸ್‌’ ಮಾರಾಟ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು