ಸೋಮವಾರ, ಸೆಪ್ಟೆಂಬರ್ 27, 2021
21 °C

ಯಮಹಾದಿಂದ 2 ಹೈಬ್ರಿಡ್‌ ಸ್ಕೂಟರ್‌ ಬಿಡುಗಡೆ: ಇಲ್ಲಿದೆ ಬೆಲೆ, ಮತ್ತಿತರ ವಿವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂಡಿಯಾ ಯಮಹಾ ಮೋಟರ್ (ಐವೈಎಂ) ಕಂಪನಿಯು ರೇಜೆಡ್‌ಆರ್‌ 125 ಫೈ ಹೈಬ್ರಿಡ್‌ ಮತ್ತು ಸ್ಟ್ರೀಟ್‌ ರ್‍ಯಾಲಿ 125 ಫೈ ಹೈಬ್ರಿಡ್‌ ಎನ್ನುವ ಎರಡು ಹೈಬ್ರಿಡ್‌ ಸ್ಕೂಟರ್‌ ಮಾದರಿಗಳನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇವುಗಳ ಎಕ್ಸ್‌ಷೋರೂಂ ಬೆಲೆ ₹ 76,830ರಿಂದ ಆರಂಭವಾಗುತ್ತದೆ.

ಎರಡೂ ಸ್ಕೂಟರ್‌ಗಳು ಏರ್‌ ಕೂಲ್ಡ್‌, ಫ್ಯೂಯೆಲ್‌ ಇಂಜೆಕ್ಟೆಡ್‌ (ಎಫ್‌ಐ) 125 ಸಿಸಿ ಬ್ಲೂ ಕೋರ್‌ ಎಂಜಿನ್‌ ಹೊಂದಿವೆ. ಸುಧಾರಿತ ಎಲ್‌ಇಡಿ ಹೆಡ್‌ಲೈಟ್‌, ಡಿಜಿಟಲ್‌ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌, 190ಎಂಎಂ ಫ್ರಂಟ್‌ ಡಿಸ್ಕ್‌ ಬ್ರೇಕ್‌ ವಿತ್ ಯೂನಿಫೈಡ್‌ ಬ್ರೇಕ್‌ ಸಿಸ್ಟಂ (ಯುಬಿಎಸ್‌), ಬ್ಲೂಟೂತ್ ಕನೆಕ್ಟಿವಿಟಿ ವಿತ್‌ ಯಮಹಾ ಮೋಟರ್‌ಸೈಕಲ್ ಕನೆಕ್ಟ್‌ ಎಕ್ಸ್‌ ಆ್ಯಪ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

‘ಫ್ಯಾಸಿನೊ 125 ಫೈ ಹೈಬ್ರಿಡ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತ ಬಳಿಕ ಈ ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ನಮ್ಮ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದೇವೆ’ ಎಂದು ಕಂಪನಿಯ ಅಧ್ಯಕ್ಷ ಮೋಟೋಫ್ಯೂಮಿ ಶಿತಾರಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು