ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯತ್ತ ನೋಟ

ಐಷಾರಾಮಿ ಕಾರು ಕಂಪನಿಗಳ ಆಸಕ್ತಿ
Last Updated 14 ಆಗಸ್ಟ್ 2020, 12:56 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಮಂದಗತಿಯ ಆರ್ಥಿಕ ಬೆಳವಣಿಗೆ, ಲಾಕ್‌ಡೌನ್‌ ಕಾರಣಗಳಿಂದ ದೇಶದ ವಾಹನ ಉದ್ಯಮವು ಚೇತರಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.ಮರ್ಸಿಡಿಸ್‌ ಬೆಂಜ್‌, ಫೋಕ್ಸ್‌ವ್ಯಾಗನ್‌, ಪೋರ್ಷೆಯಂತಹ ಐಷಾರಾಮಿ ಕಾರು ತಯಾರಿಕಾ ಕಂಪನಿಗಳು ಸಹ ಸೆಕೆಂಡ್‌ ಹ್ಯಾಂಡ್‌ ಕಾರು ಮಾರುಕಟ್ಟೆಯತ್ತ ಹೆಚ್ಚಿನ ಗಮನ ನೀಡಲು ಆರಂಭಿಸಿವೆ.

ಫೋಕ್ಸ್‌ವ್ಯಾಗನ್‌ ಕಂಪನಿ ಭಾರತ ದಲ್ಲಿ ತನ್ನ ಸೆಕೆಂಡ್‌ ಹ್ಯಾಂಡ್‌ ಕಾರಿನ ‘ದಸ್‌ ವೆಲ್ಟ್‌ ಆಟೊ’ (ಡಿಡಬ್ಲ್ಯುಎ) ವಹಿವಾಟನ್ನು ಹೆಚ್ಚಿಸಿಕೊಳ್ಳಲು ಕಾರ್ಯ ತಂತ್ರ ರೂಪಿಸಿದೆ. ಕೋವಿಡ್–19‌ ಸಂದರ್ಭದಲ್ಲಿ ಗ್ರಾಹಕರು ಡಿಡಬ್ಲ್ಯುಎ ಜಾಲತಾಣದ ಮೂಲಕವೇ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸುವ ಇಲ್ಲವೇ ಮಾರಾಟ ಮಾಡುವ ಅವಕಾಶ ಒದ ಗಿಸಿದೆ. ಸ್ಪೋರ್ಟ್‌ ಕಾರುಗಳನ್ನು ತಯಾರಿಸುವ ಪೋರ್ಷೆ ಸಹ ಈ ವಹಿ ವಾಟು ನಡೆಸಲು ತಯಾರಿ ಮಾಡಿಕೊಳ್ಳು ತ್ತಿದೆ. ಭಾರತದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಅಲ್ಪಾವಧಿಗೆ ಈ ಮಾರುಕಟ್ಟೆಗೆ ಬರುವುದಾಗಿ ಅದು ಹೇಳಿದೆ.

ಹೆಚ್ಚುತ್ತಲೇ ಇದೆ ಬೇಡಿಕೆ: ‘ಲಾಕ್‌ಡೌನ್‌ ಅವಧಿಯಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರು‌ಗಳ ಬೇಡಿಕೆ ಹೆಚ್ಚಾಗಿದೆ. 2019–20ರಲ್ಲಿ ಹೊಸ ಕಾರುಗಳ ಮಾರಾಟಕ್ಕೆ ಹೋಲಿಸಿದರೆ ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟ 1.3 ಪಟ್ಟು ಹೆಚ್ಚಾಗಿತ್ತು. ಇದು 2020–21ರಲ್ಲಿ 1.8ಕ್ಕೆ ಏರಿಕೆಯಾಗಲಿದೆ. ಒಟ್ಟಾರೆಯಾಗಿ 48 ಲಕ್ಷ ಕಾರುಗಳು ಮಾರಾಟವಾಗುವ ಅಂದಾಜು ಮಾಡಿದ್ದೇವೆ’ ಎನ್ನುತ್ತಾರೆ ಕಾರ್‌ದೇಖೊ ಸಮೂಹದ ಸೆಕೆಂಡ್‌ ಹ್ಯಾಂಡ್‌ ಕಾರ್‌ ವಹಿವಾಟಿನ ಸಿಇಒ ಉಮೇಶ್‌ ಹೋರಾ.

ಔಡಿ: ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟಕ್ಕೆ ‘ಔಡಿ ಅಪ್ರೂವ್ಡ್’‌ ವೇದಿಕೆ ಹೊಂದಿರುವ ಔಡಿ ಕಂಪನಿಯು 2019ರಲ್ಲಿ ಶೇ 11ರಷ್ಟು ಬೆಳವಣಿಗೆ ಸಾಧಿಸಿದೆ. ಲಾಕ್‌ಡೌನ್‌ ಜಾರಿಯಾದ ಬಳಿಕ ಸೆಕೆಂಡ್‌ ಹ್ಯಾಂಡ್‌ ಕಾರುಗಳನ್ನು ಕೇಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಮಾದರಿಯ ವಾಹನಗಳ ಬೇಡಿಕೆ ಹೆಚ್ಚುತ್ತಿದೆಯಾದರೂ ಸೆಡಾನ್‌ಗೆ ಅತಿ ಹೆಚ್ಚು ಬೇಡಿಕೆ ಇದೆ. ಪ್ರೀಮಿಯಂ ಕಾರುಗಳ ಖರೀದಿಗೆ ಮಾತ್ರ ಜನರು ಸಾಲದ ನೆರವು ಪಡೆಯುತ್ತಿದ್ದಾರೆ ಎಂದು ಔಡಿ ತಿಳಿಸಿದೆ.

ಬೇಡಿಕೆ ಏಕೆ: ಲಾಕ್‌ಡೌನ್‌ಗೂ ಮುನ್ನ ಕೆಲವು ಅಂಶಗಳು ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ಬೇಡಿಕೆ ಬರುವಂತೆ ಮಾಡಿವೆ. ಅವು ಗಳಲ್ಲಿ ಮೊದಲನೆಯದು, ಶೇ 28 ಇದ್ದಜಿಎಸ್‌ಟಿ ಶೇ 12–18ಕ್ಕೆ ಇಳಿಕೆ ಆಗಿರುವುದು. 2ನೆಯದು ಬಿಎಸ್‌ 6 ಕಾರ್‌ಗಳು ದುಬಾರಿ ಆಗಿರುವುದು.

ಕಾರು ಬೈಕ್‌ಗಳ ಖರೀದಿಗೆ ಆದ್ಯತೆ: ಕ್ವಿಕರ್‌
ಜುಲೈನಲ್ಲಿ ಕ್ವಿಕರ್‌ ಕಾರ್ಸ್‌ ಮತ್ತು ಬೈಕ್‌ಗಳಿಗೆ ಬಂದಿರುವ ಬೇಡಿಕೆಯು ಕೋವಿಡ್‌ಗೂ ಮೊದಲಿದ್ದ ಬೇಡಿಕೆಯ ಶೇಕಡ 60ರಷ್ಟನ್ನು ಮೀರಿದೆ. ಬೆಂಗಳೂರಿನಲ್ಲಿ ಮೇ ತಿಂಗಳಿಗೆ ಹೋಲಿಸಿದರೆ, ಜೂನ್‌ನಲ್ಲಿ ಎರಡು ಲಕ್ಷ ರೂಪಾಯಿಗಿಂತ ಅಧಿಕ ಬೆಲೆಯ ಕಾರು‌ಗಳ ಬೇಡಿಕೆ ಶೇ 90ರಷ್ಟು ಹಾಗೂ ₹ 50 ಸಾವಿರ ಬೆಲೆಯ ಕ್ವಿಕರ್‌ಬೈಕ್‌ಗಳ ಬೇಡಿಕೆ ಶೇ 93ರಷ್ಟು ಹೆಚ್ಚಾಗಿದೆ ಎಂದು ಸೆಕೆಂಡ್‌ ಹ್ಯಾಂಡ್‌ಗಳ ಖರೀದಿ ಮತ್ತು ಮಾರಾಟದ ಆನ್‌ಲೈನ್‌ ವೇದಿಕೆ ಕ್ವಿಕರ್ ಹೇಳಿದೆ.

ಇದೇ ಅವಧಿಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್‌ ಮತ್ತು ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಖರೀದಿಸಲು ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಇವುಗಳ ಬೇಡಿಕೆ ಕ್ರಮವಾಗಿ ಶೇ 78 ಮತ್ತು ಶೇ 104ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT