ಬುಧವಾರ, ಮೇ 18, 2022
28 °C

ನೂತನ ಹೋಂಡಾ ಸಿಟಿ 12ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Honda

ನವದೆಹಲಿ: ಭಾರತದಲ್ಲಿ ಪ್ರೀಮಿಯರ್ ಕಾರುಗಳ ಪ್ರಮುಖ ತಯಾರಿಕಾ ಕಂಪೆನಿ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್), ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ 5ನೇ ಜನರೇಶನ್ ಹೋಂಡಾ ಸಿಟಿ ಕಾರುಗಳನ್ನು ಲೆಫ್ಟ್ ಹ್ಯಾಂಡ್ ಡ್ರೈವ್ ಮಾಡುತ್ತಿರುವ ದೇಶಗಳಿಗೆ ರಫ್ತು ಮಾಡಲಿದೆ ಎಂದು ಘೋಷಿಸಿದೆ.

ಈ ಗುರಿಯ ಮೊದಲನೇ ಪ್ರಯತ್ನವಾಗಿ ಲೆಫ್ಟ್ ಹ್ಯಾಂಡ್ ಡ್ರೈವ್ ಮಾರುಕಟ್ಟೆಗಳಿಗೆ ಕಾರುಗಳನ್ನು ರಫ್ತು ಮಾಡಲಾಗುವುದು. ಈ ಮೂಲಕ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಸ್ಕೀಮ್‌ಗೆ ಕಂಪೆನಿ ತನ್ನ ಸಂಪೂರ್ಣ ಬದ್ಧತೆ ವ್ಯಕ್ತಪಡಿಸಿದೆ.

ಹೋಂಡಾ ಇತ್ತೀಚಿನ ಮಾಡೆಲ್ 5ನೇ ಜನರೇಶನ್ ಹೋಂಡಾ ಸಿಟಿ ಮೊದಲನೇ ಬ್ಯಾಚನ್ನು ಗುಜರಾತಿನ ಪಿಪಾವಾವ್ ಮತ್ತು ಚೆನ್ನೈಯ ಎನ್ನೋರ್ ಬಂದರುಗಳಿಂದ ಮಧ್ಯ ಪೂರ್ವ ರಾಷ್ಟ್ರಗಳಿಗೆ ಕಳುಹಿಸಿದೆ. ಹೋಂಡಾ ಸಿಟಿ ಕಾರನ್ನು ಅಗಸ್ಟ್ 2020 ರಿಂದ ದಕ್ಷಿಣ ಆಫ್ರಿಕಾಕ್ಕೆ ಮತ್ತು ನೆರೆಯ ನೇಪಾಳ ಮತ್ತು ಭೂತಾನ್‌ಗೆ ಅಕ್ಟೋಬರ್ 2020ರಿಂದ ರಫ್ತು ಮಾಡುತ್ತಿದೆ.

ವಿದೇಶಕ್ಕೆ ರಫ್ತು ಮಾಡುತ್ತಿರುವ ಕುರಿತು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಪ್ರೆಸಿಡೆಂಟ್ ಮತ್ತು ಸಿಇಓ ಗಾಕು ನಾಕಾಶಿನಿ ಮಾತನಾಡಿ, ‘ಭಾರತದ ಸೆಡಾನ್ ಕಾರುಗಳಲ್ಲಿ ಹೋಂಡಾ ಸಿಟಿ ಬೆಂಚ್‌ಮಾರ್ಕ್ ಆಗಿದೆ ಮತ್ತು ಇದರ ಲೆಫ್ಟ್ ಹ್ಯಾಂಡ್ ಡ್ರೈವ್ ಮಾಡೆಲ್‌ಗಳನ್ನು ಹೊಸ ತಾಣಗಳಿಗೆ ರಫ್ತು ಮಾಡುತ್ತಿರುವುದು ಭಾರತದಲ್ಲಿ ನಮ್ಮ ಬಿಸಿನೆಸ್ ಹೆಚ್ಚಿಸಲು ಸಹಾಯ ಮಾಡಲಿದೆ’ ಎಂದರು.

‘ನಾವು ಸಾಕಷ್ಟು ಹಣ ಹೂಡಿಕೆ ಮಾಡುತ್ತಾ ತಪುಕಾರಾದಲ್ಲಿ ವಿಸ್ತಾರವಾದ ವಿಶ್ವ ದರ್ಜೆಯ ಉತ್ಪಾದನಾ ಘಟಕವನ್ನು ನಿರ್ಮಿಸಿದ್ದೇವೆ. ಇದರಲ್ಲಿ ಬಲಭಾಗದ ಮತ್ತು ಎಡಭಾಗದ ಡ್ರೈವಿಂಗ್ ಹೊಂದಿರುವ ಎರಡೂ ಪ್ರಕಾರದ ಮಾಡೆಲ್‌ಗಳನ್ನು ನಿರ್ಮಿಸಲು ಸಶಕ್ತವಾಗಿದೆ’ ಎಂದು ಹೇಳಿದರು.

ಇದನ್ನೂ ಓದಿ: 

‘ದೇಶೀಯ ಮತ್ತು ವಿದೇಶೀಯ ಮಾರುಕಟ್ಟೆಗಳ ಬೇಡಿಕೆಗಳನ್ನು ಅತ್ಯುತ್ತಮವಾಗಿ ಪೂರ್ತಿಗೊಳಿಸಬಹುದಾಗಿದೆ. 5ನೇ ಆವೃತ್ತಿಯ ಹೋಂಡಾ ಸಿಟಿಗೆ ಭಾರತದಲ್ಲಿ ಅದ್ಭುತ ಪ್ರತಿಕ್ರಿಯೆ ದೊರಕಿದೆ ಮತ್ತು ಜನರು ಇದನ್ನು ತುಂಬಾ ಮೆಚ್ಚಿದ್ದಾರೆ. ನಮ್ಮ ಶ್ರೇಷ್ಠ ಗುಣಮಟ್ಟ ಮತ್ತು ಅದ್ಭುತ ಪರ್ಪಾರ್ಮೆನ್ಸ್ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲೂ ನಾವು ಯಶಸ್ಸು ಗಳಿಸುವೆವು ಎಂಬ ಆತ್ಮವಿಶ್ವಾಸ ನಮಗಿದೆ’ ಎಂದಿದ್ದಾರೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು