ಶುಕ್ರವಾರ, ಸೆಪ್ಟೆಂಬರ್ 25, 2020
25 °C

ಕಿಯಾ ಮೋಟರ್ಸ್‌ | ಹೊಸತನ ಹೆಗ್ಗಳಿಕೆಯ ಎಸ್‌ಯುವಿ ಸೊನೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಹನ ತಯಾರಿಕೆಯ ಅತಿದೊಡ್ಡ ಜಾಗತಿಕ ಕಂಪನಿಗಳಲ್ಲಿ ಒಂದಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟರ್ಸ್‌ ಕಾರ್ಪೊರೇಷನ್‌, ಭಾರತದಲ್ಲಿ ತಯಾರಿಸಿದ ತನ್ನ ಹೊಸ ಸ್ಮಾರ್ಟ್‌ ಕಾಂಪ್ಯಾಕ್ಟ್‌ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಸೊನೆಟ್‌ ಅನಾವರಣಗೊಳಿಸಿದೆ. ಸೆಪ್ಟೆಂಬರ್‌ನಲ್ಲಿ ಇದು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಅಂಧ್ರಪ್ರದೇಶದ ಅನಂತಪುರ ಘಟಕದಲ್ಲಿ ತಯಾರಿಸುವ ಈ ಎಸ್‌ಯುವಿ ಇತರ ದೇಶಗಳಿಗೂ ರಫ್ತಾಗಲಿದೆ.

ಕಂಪನಿಯ ಸೆಲ್ಟೊಸ್‌ ಮತ್ತು ಕಾರ್ನಿವಲ್‌ ನಂತರದ ಮೂರನೇ ವಾಹನ ಇದಾಗಿದೆ. ಇದು ದೇಶಿ ಮಾರುಕಟ್ಟೆಯಲ್ಲಿ ಹುಂಡೈನ ವೆನ್ಯೂ, ಮಾರುತಿಯ ವಿಟಾರಾ ಬ್ರೆಜಾ, ಟಾಟಾ ನೆಕ್ಸನ್‌ ಮತ್ತು ಮಹೀಂದ್ರಾದ ಎಕ್ಸ್‌ಯುವಿ300ಗೆ ಸ್ಪರ್ಧೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

‘ಆಧುನಿಕ ವಿನ್ಯಾಸದ ಪರಿಭಾಷೆ, ರಂಜನೆಯ ಚಾಲನಾ ಅನುಭವ, ಅತ್ಯಾಧುನಿಕ ಸೌಲಭ್ಯಗಳಿಂದಾಗಿ ತಂತ್ರಜ್ಞಾನ ವ್ಯಾಮೋಹಿ ಹೊಸ ತಲೆಮಾರಿನವರಿಗೆ ‘ಸೊನೆಟ್‌’ ಮೆಚ್ಚಿನ ಆಯ್ಕೆಯಾಗಿರಲಿದೆ. ಕಿಯಾ ಬ್ರ್ಯಾಂಡ್‌ನತ್ತ ಗ್ರಾಹಕರನ್ನು ಸೆಳೆಯಲೂ ನೆರವಾಗಲಿದೆ. ಚಾಲಕ ಮತ್ತು ಪ್ರಯಾಣಿಕರಿಗೂ ಪ್ರಯಾಣ ಅನುಭವವು ಉಲ್ಲಾಸದಾಯಕವಾಗಿರಲಿದೆ’ ಎಂಬುದು ಕಂಪನಿಯ ಸಿಇಒ ಹೊ ಸಂಗ್‌ ಸೊಂಗ್‌ ಅವರ ಅನಿಸಿಕೆಯಾಗಿದೆ.

1.2 ಲೀಟರ್‌, 1 ಲೀಟರ್‌ನ ಟರ್ಬೊ ಪೆಟ್ರೋಲ್‌ ಮಾದರಿ ಮತ್ತು 1.5 ಲೀಟರ್‌ನ ಡೀಸೆಲ್‌ ಮಾದರಿಯಲ್ಲಿ ಲಭ್ಯ ಇರಲಿದೆ.  ಐದು ಮ್ಯಾನುಅಲ್‌ ಮತ್ತು ಆಟೊಮೆಟಿಕ್‌ ಟ್ರಾನ್ಸಮಿಷನ್ಸ್‌ ಒಳಗೊಂಡಿದೆ. ಈ ವಿಭಾಗದಲ್ಲಿ ಮೊದಲ ಬಾರಿಗೆ 6 ಸ್ಪೀಡ್‌ ಟ್ರಾನ್ಸ್‌ಮಿಷನ್ನಿನ 1.5 ಲೀಟರ್‌ ಡೀಸೆಲ್‌ ಎಂಜಿನ್‌ ಪರಿಚಯಿಸ ಲಾಗಿದೆ. ದಣಿವು ಮುಕ್ತ ಚಾಲನೆಗಾಗಿ ಬುದ್ಧಿಮತ್ತೆಯ ಮ್ಯಾನುಅಲ್‌ ಟ್ರಾನ್ಸ್‌ಮಿಷನ್‌ ಸೌಲಭ್ಯವೂ ಇದರಲ್ಲಿ ಇದೆ. ಗುಣಮಟ್ಟ, ವಿನ್ಯಾಸ, ತಂತ್ರಜ್ಞಾನ, ಸುರಕ್ಷತೆ ವಿಷಯದಲ್ಲಿ ಹಲವಾರು ಹೊಸತನಗಳ ಹೆಗ್ಗಳಿಕೆ ಇದರದ್ದಾಗಿದೆ. ಎಲ್ಲ ಪ್ರಯಾಣಿಕರಿಗೆ ಆರಾಮದಾಯಕ ವಿಶಾಲ ಸ್ಥಳಾವಕಾಶ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು