ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆ ಹೆಚ್ಚಿಸಲು ಮುಂದಾಗಿದೆ. ಫೆಬ್ರುವರಿ 1ರಿಂದ ಈ ಪರಿಷ್ಕೃತ ದರ ಜಾರಿಗೆ ಬರಲಿದೆ.

ಕಂಪನಿಯು ತನ್ನ ಸೆಲೆರಿಯೊ ಕಾರಿನ ಬೆಲೆಯನ್ನು ₹32,500ರ ವರೆಗೆ ಹೆಚ್ಚಿಸಿದೆ. ಪ್ರೀಮಿಯಂ ಮಾದರಿ ಇನ್ವಿಕ್ಟೋ ₹30 ಸಾವಿರ, ವ್ಯಾಗನ್ ಆರ್ ₹15 ಸಾವಿರ, ಸ್ವಿಫ್ಟ್ ₹5 ಸಾವಿರ, ಎಸ್ಯುವಿ ಬ್ರೆಜಾ ಮತ್ತು ಗ್ರ್ಯಾಂಡ್ ವಿಟಾರಾ ಬೆಲೆಯನ್ನು ಕ್ರಮವಾಗಿ ₹20 ಸಾವಿರ ಮತ್ತು ₹25 ಸಾವಿರದ ವರೆಗೆ ಹೆಚ್ಚಿಸಿದೆ.

ಆಲ್ಟೊ ಕೆ10 ₹19,500, ಎಸ್–ಪ್ರೆಸ್ಸೊ ₹5 ಸಾವಿರ, ಬಲೆನೊ ₹9 ಸಾವಿರ, ಎಸ್ಯುವಿ ಫ್ರಾಂಕ್ಸ್ ₹5,500 ಮತ್ತು ಡಿಸೈರ್ ಕಾರಿನ ಬೆಲೆಯನ್ನು ₹10 ಸಾವಿರದವರೆಗೆ ಹೆಚ್ಚಿಸಿದೆ.

‘ತಯಾರಿಕಾ ಮತ್ತು ಕಾರ್ಯಾಚರಣೆ ವೆಚ್ಚ ಏರಿಕೆಯಾಗಿದೆ. ಹೀಗಾಗಿ, ಬೆಲೆ ಹೆಚ್ಚಳವು ಅನಿವಾರ್ಯವಾಗಿದೆ’ ಎಂದು ಕಂಪನಿಯು ಗುರುವಾರ ಷೇರುಪೇಟೆಗೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.