ಭಾನುವಾರ, ಅಕ್ಟೋಬರ್ 24, 2021
20 °C

ಎರಡೇ ದಿನಗಳಲ್ಲಿ 50,000ಕ್ಕೂ ಹೆಚ್ಚು ಬುಕಿಂಗ್ಸ್ ಪಡೆದುಕೊಂಡ ಮಹೀಂದ್ರಾ XUV700

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Mahindra India

ಬೆಂಗಳೂರು: ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆ ಮಹೀಂದ್ರಾ, ಹೊಸದಾಗಿ ಪರಿಚಯಿಸಿರುವ ‘ಮಹೀಂದ್ರಾ XUV700’ ಕಾರ್ ಬುಕಿಂಗ್‌ಗೆ ತೆರೆದುಕೊಂಡ ಎರಡೇ ದಿನಗಳಲ್ಲಿ 50,000ಕ್ಕೂ ಅಧಿಕ ಬುಕಿಂಗ್ಸ್ ಪಡೆದುಕೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ಜತೆಗೆ ಈ ಬುಕಿಂಗ್ಸ್ ಮೂಲಕ ಮಹೀಂದ್ರಾ ಕಂಪನಿಗೆ ₹10,000 ಕೋಟಿ ಆದಾಯ ಬಂದಿದೆ ಎಂದು ಹೇಳಿದೆ.

ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವೀಟ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಅಕ್ಟೋಬರ್ 7ರಂದು ಹೊಸ ಮಹೀಂದ್ರಾ XUV700 ಕಾರ್‌ಗೆ ಬುಕಿಂಗ್ಸ್ ತೆರೆಯಲಾಗಿತ್ತು. ಆ ಸಂದರ್ಭದಲ್ಲಿ ಕೇವಲ 57 ನಿಮಿಷಗಳಲ್ಲೇ 25,000ಕ್ಕೂ ಅಧಿಕ ಕಾರ್ ಬುಕಿಂಗ್ ಆಗಿದೆ. ಎರಡನೇ ದಿನದಲ್ಲಿ ಕೂಡ ಮಹೀಂದ್ರಾ, 25,000ಕ್ಕೂ ಅಧಿಕ ಬುಕಿಂಗ್ಸ್ ಸ್ವೀಕರಿಸಿದ್ದು, ಒಟ್ಟು ಬುಕಿಂಗ್ ಸಂಖ್ಯೆ 50,000 ದಾಟಿವೆ ಎಂದು ಕಂಪನಿ ಹೇಳಿದೆ.

ಜತೆಗೆ, ಈ ಕಾರುಗಳ ಎಕ್ಸ್ ಶೋ ರೂಮ್ ದರದ ಅನ್ವಯ, ಕಂಪನಿಗೆ ₹10,000 ಕೋಟಿ ಆದಾಯ ಬಂದಿದೆ.

ಹೊಸ ಮಹೀಂದ್ರಾ XUV700 ದರ (ಎಕ್ಸ್‌ ಶೋ ರೂಮ್) ₹12.49 ಲಕ್ಷದಿಂದ ಆರಂಭವಾಗಿ ₹22.89 ಲಕ್ಷದವರೆಗೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು