ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tesla India: ಭಾರತಕ್ಕೆ ಕಾಲಿಟ್ಟ ಟೆಸ್ಲಾ, ಬೆಂಗಳೂರಿನಲ್ಲಿ ಸಂಶೋಧನಾ ಕೇಂದ್ರ

Last Updated 13 ಜನವರಿ 2021, 6:29 IST
ಅಕ್ಷರ ಗಾತ್ರ

ನವದೆಹಲಿ:ಎಲೊನ್ ಮಸ್ಕ್ ನೇತೃತ್ವದ ಪ್ರಮುಖ ಎಲೆಕ್ಟ್ರಿಕ್ ಕಾರ್ ತಯಾರಿಕ ಕಂಪನಿ ಟೆಸ್ಲಾ ಕೊನೆಗೂ ಭಾರತಕ್ಕೆ ಕಾಲಿರಿಸಿದೆ. ರಿಜಿಸ್ಟ್ರಾರ್ ಆಫ್ ಕಂಪನೀಸ್ ಇನ್ ಇಂಡಿಯಾದಲ್ಲಿ ಟೆಸ್ಲಾ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು, ಅಧಿಕೃತವಾಗಿ ನೋಂದಣಿ ಮಾಡಿಕೊಂಡಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ಸ್ಆ್ಯಂಡ್ ಎನರ್ಜಿ ಪ್ರೈ. ಲಿ. ಬೆಂಗಳೂರು ಎಂದು ನೋಂದಣಿ ದಾಖಲಾಗಿದೆ.

ವೈಭವ್ ತನೆಜಾ, ವೆಂಕಟ್ರಂಗಮ್ ಶ್ರೀರಾಮ್ ಮತ್ತು ಡೇವಿಡ್ ಜಾನ್ ಫೀನ್ಸೆಟೀನ್ ದೇಶದಲ್ಲಿ ಟೆಸ್ಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಯಡಿಯೂರಪ್ಪ ಸ್ವಾಗತ

ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸುತ್ತಿರುವ ಟೆಸ್ಲಾ ಕಂಪನಿಗೆ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ವಾಗತ ಕೋರಿದ್ದಾರೆ.

2016ರಲ್ಲೇ ಭಾರತ ಪ್ರವೇಶಕ್ಕೆ ಮುಂದಾಗಿದ್ದ ಟೆಸ್ಲಾ, ಬಳಿಕ ತಡವಾಗಿತ್ತು. ದೇಶದಲ್ಲಿ ಟೆಸ್ಲಾ ಮಾಡೆಲ್ 3 ಸೆಡಾನ್ ಕಾರಿನ ಮೂಲಕ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದ್ದು, ಅಂದಾಜು ₹60 ಲಕ್ಷ ಬೆಲೆ ಇರಬಹುದು ಎನ್ನಲಾಗಿದೆ.

ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರು ಇದಾಗಿದ್ದು, 60kw ಲಿಥಿಯಂ ಅಯಾನ್ ಬ್ಯಾಟರಿ ಹೊಂದಿದೆ, ಜತೆಗೆ 500km ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಉಳಿದಂತೆ ಕೇವಲ 3.1 ಸೆಕೆಂಡ್ಸ್‌ನಲ್ಲಿ ಟೆಸ್ಲಾ ಕಾರು 0ಯಿಂದ 60mph ವೇಗ ಪಡೆದುಕೊಳ್ಳುತ್ತದೆ. ಗಂಟೆಗೆ 250km ವೇಗದಲ್ಲಿ ಟೆಸ್ಲಾ ಕಾರು ಚಲಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT